ETV Bharat / sports

ಸಿಪಿಎಲ್​ ಟೂರ್ನಿ: 2ನೇ ದಿನದ ಪಂದ್ಯಗಳಲ್ಲಿ ಜಯ ಸಾಧಿಸಿದ ಗಯಾನ-ಜಮೈಕಾ

author img

By

Published : Aug 20, 2020, 12:30 PM IST

ಟೂರ್ನಮೆಂಟ್​ನ ಎರಡನೇ ದಿನ ಜಮೈಕಾ ತಲವಾಸ್,​ ಸೇಂಟ್​ ಲೂಸಿಯಾ ಜೌಕ್ಸ್​ ತಂಡವನ್ನು 5 ವಿಕೆಟ್​ಗಳಿಂದ ಹಾಗೂ ಗಯಾನ ಅಮೇಜಾನ್​ ವಾರಿಯರ್ಸ್​ ಸೇಂಟ್​ ಕಿಟ್ಸ್​ ನೇವಿಸ್​ ಪೇಟ್ರಿಯೋಟ್ಸ್​ ತಂಡವನ್ನು 3 ವಿಕೆಟ್​ಗಳಿಂದ ಮಣಿಸಿದೆ.

ಸಿಪಿಎಲ್​ 2020
ಸಿಪಿಎಲ್​ 2020

ತರೌಬ(ಟ್ರಿನಿಡಾಡ್​): ಜಮೈಕಾ ತಲವಾಸ್​ ಹಾಗೂ ಗಯಾನ ಅಮೇಜಾನ್​ ವಾರಿಯರ್ಸ್​ ತಂಡಗಳು 2ನೇ ದಿನ ಕೆರಿಬಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಜಯ ಸಾಧಿಸಿವೆ.

ಟೂರ್ನಮೆಂಟ್​ನ ಎರಡನೇ ದಿನ ಜಮೈಕಾ ತಲವಾಸ್,​ ಸೇಂಟ್​ ಲೂಸಿಯಾ ಜೌಕ್ಸ್​ ತಂಡವನ್ನು 5 ವಿಕೆಟ್​ಗಳಿಂದ ಹಾಗೂ ಗಯಾನ ಅಮೇಜಾನ್​ ವಾರಿಯರ್ಸ್​ ಸೇಂಟ್​ ಕಿಟ್ಸ್​ ನೇವಿಸ್​ ಪೇಟ್ರಿಯೋಟ್ಸ್​ ತಂಡವನ್ನು 3 ವಿಕೆಟ್​ಗಳಿಂದ ಮಣಿಸಿದೆ.

ಮೊದಲ ಪಂದ್ಯದಲ್ಲಿ ಡರೆನ್​ ಸಾಮಿ ನೇತೃತ್ವದ ಲೂಸಿಯಾ ಜೌಕ್ಸ್​ ಆಲ್​ರೌಂಡರ್​ ರಾಸ್ಟನ್​ ಚೇಸ್(52)​ ಅವರ ಅರ್ಧಶತಕದ ನೆರವಿನಿಂದ 20 ಓವರ್​ಗಳಲ್ಲಿ158 ರನ್​ ಗಳಿಸಿತ್ತು.

ಮುಜೀಬ್​ ಉರ್​ ರಹಮಾನ್ ಹಾಗೂ ವೀರಸಾಮಿ ಪೆರುಮಾಳ್​ ತಲಾ 2 ವಿಕೆಟ್​ ಪಡೆದಿದ್ದರು.

158 ರನ್​ಗಳ ಗುರಿ ಪಡೆದ ಜಮೈಕಾ ಇನ್ನೂ 7 ಎಸೆತಗಳಿರುವಂತೆ ಗೆಲುವು ತನ್ನದಾಗಿಸಿತು. ಆಸಿಫ್​ ಅಲಿ 27 ಎಸೆತಗಳಲ್ಲಿ 2 ಸಿಕ್ಸರ್ಸ್​ ಹಾಗೂ 4 ಬೌಂಡರಿಗಳ ಸಹಿತ 47 ರನ್​ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.

ಎರಡನೇ ಪಂದ್ಯದಲ್ಲಿ ಗಯಾನ, ಪೇಟ್ರಿಯೋಟ್ಸ್​ ತಂಡವನ್ನು ಕೇವಲ 127 ರನ್​ಗಳಿಗೆ ನಿಯಂತ್ರಿಸಿತು. 30 ರನ್​ ಗಳಿಸಿದ ಲೆವಿಸ್​ ಟಾಪ್​ ಸ್ಕೋರರ್​ ಎನಿಸಿಕೊಂಡರು. ಗಯಾನ ಪರ ಕೀಮೋ ಪಾಲ್​ 19 ರನ್​ ನೀಡಿ 4 ವಿಕೆಟ್​ ಪಡೆದರು.

128 ರನ್​ಗಳ ಗುರಿ ಪಡೆದ ಗಯಾನ ಶಿಮ್ರಾನ್​ ಹೆಟ್ಮೈರ್​ ಅವರ ಅರ್ಧಶತಕದ ನೆರವಿನಿಂದ 18 ಎಸೆತಗಳಿರುವಂತೆ ಗೆಲುವು ಸಾಧಿಸಿತು. 44 ಎಸೆತಗಳನ್ನೆದುರಿಸಿದ ಹೆಟ್ಮೈರ್​ 3 ಸಿಕ್ಸರ್​ ಹಾಗೂ 8 ಬೌಂಡರಿಗಳ ನೆರವಿನಿಂದ 71 ರನ್ ​ಗಳಿಸಿದರು.

ರಯಾದ್​ ಎಮ್ರಿಟ್​ 3 ವಿಕೆಟ್​ ಪಡೆದರೂ ಗಯಾನ ಸೋಲು ತಪ್ಪಿಸಲಾಗಲಿಲ್ಲ. 19 ರನ್​ ನೀಡಿ 4 ವಿಕೆಟ್​ ಪಡೆದ ಗಯಾನ ತಂಡದ ಕೀಮೋ ಪಾಲ್​​ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.