ETV Bharat / sports

ಕೊರೊನಾ ಭೀತಿ: ಅಭ್ಯಾಸ ನಿಲ್ಲಿಸಿದ ಚೆನ್ನೈ ಸೂಪರ್​ ಕಿಂಗ್ಸ್​ ತಂಡ

ಕೊರೊನಾ ಸೋಂಕಿನಿಂದ ಕೆಲ ಕ್ರೀಡಾಕೂಟಗಳು ರದ್ದಾಗಿದ್ದರೆ ಕೆಲವು ಮುಂದೂಡಲ್ಪಟ್ಟಿವೆ. ಇದೀಗ ಚೆನ್ನೈ ಸೂಪರ್​ ಕಿಂಗ್ಸ್​​ ತಂಡ ತನ್ನ ಅಭ್ಯಾಸವನ್ನು ನಿಲ್ಲಿಸಿದೆ.

Chennai Super Kings suspend practice sessions,ಅಭ್ಯಾಸ ನಿಲ್ಲಿಸಿದ ಚೆನ್ನೈ ಸೂಪರ್​ ಕಿಂಗ್ಸ್​ ತಂಡ
ಅಭ್ಯಾಸ ನಿಲ್ಲಿಸಿದ ಚೆನ್ನೈ ಸೂಪರ್​ ಕಿಂಗ್ಸ್​ ತಂಡ
author img

By

Published : Mar 13, 2020, 11:39 PM IST

ಚೆನ್ನೈ: ಕೊರೊನಾ ವೈರಸ್​ ಸೋಂಕು ಭೀತಿಯಿಂದ ಐಪಿಎಲ್​ ಟೂರ್ನಿ ಏಪ್ರಿಲ್ 15ಕ್ಕೆ ಮುಂದೂಡಿಕೆಯಾಗಿದ್ದು, ಚೆನ್ನೈ ಸೂಪರ್​ ಕಿಂಗ್ಸ್​​ ತಂಡ ಅಭ್ಯಾಸವನ್ನು ನಿಲ್ಲಿಸಿದೆ.

Chennai Super Kings suspend practice sessions,ಅಭ್ಯಾಸ ನಿಲ್ಲಿಸಿದ ಚೆನ್ನೈ ಸೂಪರ್​ ಕಿಂಗ್ಸ್​ ತಂಡ
ಎಂ.ಎಸ್.ಧೋನಿ ಮತ್ತು ಸುರೇಶ್ ರೈನಾ ಅಭ್ಯಾಸದ ವೇಳೆ ಬ್ಯಾಟ್ ಕುರಿತಾಗಿ ಮಾತುಕತೆ ನಡೆಸುತ್ತಿರುವುದು.

2020ರ ಐಪಿಎಲ್ ಟೂರ್ನಿಗಾಗಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಸಿಎಸ್​ಕೆ ತಂಡ ಕಳೆದ ಒಂದು ವಾರದಿಂದ ಎಂ.ಚಿದಂಬರಂ ಮೈದಾನದಲ್ಲಿ ಅಭ್ಯಾಸದಲ್ಲಿ ನಿರತವಾಗಿತ್ತು. ಏಕದಿನ ವಿಶ್ವಕಪ್​ ನಂತರ ಮೈದಾನಕ್ಕಿಳಿದಿದ್ದ ಧೋನಿ, ಸುರೇಶ್ ರೈನಾ ಸೇರಿದಂತೆ ಹಲವು ಆಟಗಾರರು ಈಗಾಗಲೇ ಅಭ್ಯಾಸದಲ್ಲಿ ನಿರತರಾಗಿದ್ದರು. ಆದರೆ ಕೊರೊನಾ ಭೀತಿಯಿಂದ ಈಗ ಅಭ್ಯಾಸವನ್ನೂ ರದ್ದು ಮಾಡಲಾಗಿದೆ.

ಅಭ್ಯಾಸ ನಿರತ ಕೇದಾರ್ ಜಾಧವ್

ಕೊರೊನಾ ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಮಾರ್ಚ್ 29ರಿಂದ ಆರಂಭವಾಗಬೇಕಿದ್ದ ಇಂಡಿಯನ್ ಪ್ರೀಮಿಯರ್​ ಲೀಗ್​ ಅನ್ನು ಬಿಸಿಸಿಐ ಏಪ್ರಿಲ್ 15ಕ್ಕೆ ಮುಂದೂಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.