ಅಬುಧಾಬಿ (ಯುಎಇ): ಶನಿವಾರ ಯುಎಇ ತಂಡದ ಆಟಗಾರ ಅಲಿಶನ್ ಶರಾಫು ಅವರಿಗೆ ಕೊರೊನಾ ಸೋಂಕು ಪತ್ತೆಯಾದ ನಂತರ ಯುಎಇ ಮತ್ತು ಐರ್ಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯವನ್ನು ಮುಂದೂಡಲಾಗಿದೆ. ಚಿರಾಗ್ ಸೂರಿ ಹಾಗೂ ಆರ್ಯನ್ ಲಾಕ್ರಾ ಅವರ ನಂತರ ಯುಎಇ ತಂಡದ ಮೂರನೇ ಆಟಗಾರನಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.
ಡಿಸೆಂಬರ್ 29 ರಂದು ಎಲ್ಲ ಆಟಗಾರರಿಗೆ ಕೋವಿಡ್ ಟೆಸ್ಟ್ ಮಾಡಲಾಗಿತ್ತು. ಆಗ ಎಲ್ಲರ ವರದಿಗಳು ನೆಗೆಟಿವ್ ಬಂದಿದ್ದವು. ನಂತರ ಆಟಗಾರರನ್ನು ಪ್ರತ್ಯೇಕ ಕೋಣೆಗಳಲ್ಲಿ ಮೂರು ದಿನಗಳವರೆಗೆ ಐಸೊಲೇಟ್ ಮಾಡಲಾಗಿತ್ತು.
-
JUST IN: The second #UAEvIRE ODI has been rescheduled following a further positive COVID-19 test in the UAE camp.
— ICC (@ICC) January 9, 2021 " class="align-text-top noRightClick twitterSection" data="
The new dates for the remaining ODIs are 12, 14 and 16 January. pic.twitter.com/7qgeDZuuX1
">JUST IN: The second #UAEvIRE ODI has been rescheduled following a further positive COVID-19 test in the UAE camp.
— ICC (@ICC) January 9, 2021
The new dates for the remaining ODIs are 12, 14 and 16 January. pic.twitter.com/7qgeDZuuX1JUST IN: The second #UAEvIRE ODI has been rescheduled following a further positive COVID-19 test in the UAE camp.
— ICC (@ICC) January 9, 2021
The new dates for the remaining ODIs are 12, 14 and 16 January. pic.twitter.com/7qgeDZuuX1
ಇದರ ನಂತರ ಚಿರಾಗ್ ಜ.7 ರಂದು ಮತ್ತು ಆರ್ಯನ್ ಲಕ್ರಾ ಜ.8 ರಂದು ಸೋಂಕಿಗೆ ತುತ್ತಾಗಿರುವುದು ಕಂಡು ಬಂದಿದೆ. ನಂತರ ಇಬ್ಬರನ್ನೂ ಕೋಣೆಗಳಲ್ಲಿ ಐಸೊಲೇಟ್ ಮಾಡಲಾಗಿದೆ.
ಇನ್ನು 7ನೇ ಬಾರಿ ಎಲ್ಲ ಆಟಗಾರರು ಮತ್ತು ಸಿಬ್ಬಂದಿಗಳನ್ನು ಪರೀಕ್ಷಿಸಿದ ಸಂದರ್ಭದಲ್ಲಿ ಶರಾಫು ಅವರಿಗೂ ಸೋಂಕು ತಗುಲಿರುವುದು ಪತ್ತೆಯಾಗಿದೆ.
ಹೀಗಾಗಿ ಇಂದು ನಿಗದಿಯಾಗಿದ್ದ ಪಂದ್ಯವನ್ನು ಜನವರಿ 16 ರವರೆಗೆ ಮುಂದೂಡಲು ಉಭಯ ತಂಡಗಳು ಸಮ್ಮತಿಸಿವೆ. ಮೊದಲ ಏಕದಿನ ಪಂದ್ಯದಲ್ಲಿ ಯುಎಇ ತಂಡ ಐರ್ಲೆಂಡ್ ವಿರುದ್ಧ ಆರು ವಿಕೆಟ್‌ಗಳ ಜಯ ಸಾಧಿಸಿತ್ತು.