ಕರಾಚಿ: 10 ವರ್ಷಗಳ ನಂತರ ತವರಿನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯನ್ನು ಪಾಕಿಸ್ತಾನ ತಂಡ 2-0ದಿಂದ ವಶಪಡಿಸಿಕೊಂಡಿದೆ.
ಬುಧವಾರ ನಡೆದ ಮೂರನೆ ಅಂತಿ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ತಂಡ ಆರಂಭಿಕ ಬ್ಯಾಟ್ಸ್ಮನ್ ಗುಣತಿಲಕ (133)ಅವರ ಆಕರ್ಷಕ ಶತಕದ ನೆರವಿನಿಂದ 50 ಓವರ್ಗಳಲ್ಲಿ 297 ರನ್ಗಳಿತು.
ಪಾಕ್ ಪರ ಮೊಹಮ್ಮದ್ ಅಮೀರ್ 3 , ಶೆನ್ವಾರಿ, ವಹಾಬ್ ರಿಯಾಜ್, ಶದಾಬ್ ಖಾನ್ ಹಾಗೂ ಮೊಹಮ್ಮದ್ ನವಾಜ್ ತಲಾ ಒಂದು ವಿಕೆಟ್ ಪಡೆದರು. ಲಂಕಾ ತಂಡ ಬೃಹತ್ ಮೊತ್ತ ಕನಸಿಗೆ ಕಡಿವಾಣ ಹಾಕಿದರು.
![Pakistan beat Sri Lanka](https://etvbharatimages.akamaized.net/etvbharat/prod-images/ef5avltwkaekefn_0310newsroom_1570070097_245_0310newsroom_1570075051_191.jpg)
298 ರನ್ಗಳ ಗುರಿ ಪಡೆದ ಪಾಕಿಸ್ತಾನ ಫಖರ್ ಝಮಾನ್ (76) ಅಬಿದ್ ಅಲಿ (74) ಹಾಗೂ ಹ್ಯಾರೀಸ್ ಸೊಹೈಲ್(56) ಅವರ ಅರ್ಧಶತಕದ ನೆರವಿನಿಂದ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಪಾಕ್ ತಂಡ ಈ ಗೆಲುವಿನ ಮೂಲಕ ತವರಿನಲ್ಲಿ ದಶಕಗಳ ನಂತರ ನಡೆದ ಸರಣಿ ಗೆದ್ದು ಸಂಭ್ರಮಿಸಿತು. ಅಬಿದ್ ಅಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರೆ ಬಾಬರ್ ಅಜಂ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.