ಕೊಲ್ಕತ್ತಾ: ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ರಾತ್ರಿ-ಹಗಲು ಟೆಸ್ಟ್ ಪಂದ್ಯ ನವೆಂಬರ್ 22 ರಿಂದ ಆರಂಭವಾಗಲಿದ್ದು ಈಡನ್ ಗಾರ್ಡನ್ನಲ್ಲಿ ಈ ಐತಿಹಾಸಿಕ ಕ್ಷಣಕ್ಕೆ ಕೋಟ್ಯಂತರ ಅಭಿಮಾನಿಗಳು ಕಾದು ಕುಳಿತಿದ್ದಾರೆ.
ಡೇ-ನೈಟ್ ಟೆಸ್ಟ್ ಪಂದ್ಯ ಭಾರತ ತಂಡಕ್ಕೆ ಇದೇ ಮೊದಲಾಗಿದೆ. ಆದರೆ ಭಾರತ ತಂಡದಲ್ಲಿ ಇರುವ ಕೆಲವು ಆಟಗಾರರಿಗೆ ಈಗಾಗಲೇ ಪಂದ್ಯದ ಬಗ್ಗೆ ಈಗಾಗಲೇ ಸಾಕಷ್ಟು ಕುತೂಹಲ ಆರಂಭವಾಗಿದೆ. ಟೀಂ ಇಂಡಿಯಾಗೆ ಇದೇ ಮೊದಲ ಬಾರಿಗೆ ಹೊನಲು ಬೆಳಕಿನ ಟೆಸ್ಟ್ ಪಂದ್ಯ. ಜೊತೆಗೆ ಇದೇ ಮೊದಲ ಬಾರಿಗೆ ಟೀಮ್ ಇಂಡಿಯಾ ಪಿಂಕ್ ಬಾಲ್ನಲ್ಲಿ ಟೆಸ್ಟ್ ಮ್ಯಾಚ್ ಆಡುತ್ತಿದೆ.
ಟೀಂ ಇಂಡಿಯಾದ ಕೆಲವು ಆಟಗಾರರು ಈಗಾಗಲೇ ಪಿಂಕ್ ಬಾಲ್ನಲ್ಲಿ ಆಡಿದ ಅನುಭವ ಹೊಂದಿದ್ದಾರೆ. 2016ರಿಂದ ಇಲ್ಲಿಯವರೆಗೆ ಭಾರತದಲ್ಲಿ ಒಟ್ಟು 12 ಡೇ ಆ್ಯಂಡ್ ನೈಟ್ ಪ್ರಥಮ ದರ್ಜೆ ಪಂದ್ಯಗಳು ನಡೆದಿವೆ. ಆರಂಭಿಕರಾದ ಮಯಾಂಕ್ ಅಗರ್ವಾಲ್, ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ, ಸಹಾ, ಕುಲ್ದೀಪ್, ಇಶಾಂತ್ ಶರ್ಮಾ ಈಗಾಗಲೇ ಪಿಂಕ್ಬಾಲ್ನಲ್ಲಿ ಪಂದ್ಯಗಳನ್ನಾಡಿದ್ದಾರೆ.
ಮತ್ತೊಬ್ಬ ಭಾರತೀಯ ಬ್ಯಾಟ್ಸ್ಮನ್ ಕನ್ನಡಿಗ ಮಯಾಂಕ್ ಅಗರ್ವಾಲ್ ಕೂಡ 2016 ದುಲೀಪ್ ಟ್ರೋಫಿಯಲ್ಲೇ ಪಿಂಕ್ ಬಾಲ್ನಲ್ಲಿ ಆಡಿದ್ದಾರೆ. ಇವರು ಕೂಡ ಒಂದು ಶತಕ (161) ಹಾಗೂ 4 ಅರ್ಧಶತಕದ ನೆರವಿನಿಂದ 420 ರನ್ ಗಳಿಸಿದ್ದಾರೆ. ವಿಶೇಷವೆಂದರೆ ಇವರಾಡಿರುವ ಎಲ್ಲಾ ಇನ್ನಿಂಗ್ಸ್‌ನಲ್ಲೂ ಅರ್ಧಶತಕ ದಾಖಲಿಸಿರುವುದು. ಇನ್ನು ಪೂಜಾರ ಹಾಗೂ ಅಗರ್ವಾಲ್ ಅಂದು ಒಂದೇ ತಂಡದಲ್ಲಿ ಆಡಿರುವುದು ಮತ್ತೊಂದು ವಿಶೇಷ.
ಭಾರತದ ಆಲ್ರೌಂಡರ್ ರವೀಂದ್ರ ಜಡೇಜಾ ಕೂಡ 2016 ದುಲೀಪ್ ಟ್ರೋಫಿಯಲ್ಲಿ ಇಂಡಿಯಾ ಬ್ಲೂ ತಂಡದಲ್ಲಿ ಪೂಜಾರ ಹಾಗೂ ಮಯಾಂಕ್ ಜೊತೆಯಲ್ಲಿ ಆಡಿದ್ದರು. ಟೂರ್ನಿಯಲ್ಲಿ 3ನೇ ಗರಿಷ್ಠ ವಿಕೆಟ್ ಪಡೆದ ಬೌಲರ್ ಆಗಿದ್ದ ಜಡೇಜಾ 3 ಪಂದ್ಯಗಳಿಂದ 10 ವಿಕೆಟ್ ಕೂಡ ಪಡೆದಿದ್ದರು.
ಉಳಿದಂತೆ ರೋಹಿತ್ ಶರ್ಮಾ ಹಾಗೂ ಇಶಾಂತ್ ಶರ್ಮಾ ಪಿಂಕ್ಬಾಲ್ನಲ್ಲಿ ಒಂದು ಪಂದ್ಯವಾಡಿದ್ದಾರೆ. ರಿಷಭ್ ಪಂತ್, ಹನುಮ ವಿಹಾರಿ, ಕುಲ್ದೀಪ್ ಯಾದವ್ ದುಲೀಪ್ ಟ್ರೋಪಿಯಲ್ಲಿ ಆಡಿದ್ದಾರೆ. ಶಮಿ ಹಾಗೂ ವಿಕೆಟ್ ಕೀಪರ್ ಸಹಾ ಸಿಎಬಿ ಸೂಪರ್ ಲೀಗ್ನಲ್ಲಿ ಪಿಂಕ್ಬಾಲ್ನಲ್ಲಿ ಆಡಿದ ಅನುಭವ ಹೊಂದಿದ್ದಾರೆ. ನಾಯಕ ಕೊಹ್ಲಿ, ಉಪನಾಯಕ ರಹಾನೆ, ಆರ್. ಅಶ್ವಿನ್, ಉಮೇಶ್ ಯಾದವ್ಗೆ ಮಾತ್ರ ಪಿಂಕ್ ಬಾಲ್ನಲ್ಲಿ ಇದೇ ಮೊದಲ ಪಂದ್ಯವಾಗಲಿದೆ.