ETV Bharat / sports

ಬೆನ್​ಸ್ಟೋಕ್ಸ್​ ಆಲ್​ರೌಂಡರ್​ ಆಟ... ದ.ಆಫ್ರಿಕಾ ಮಣಿಸಿ ಸರಣಿ ಸಮಬಲ ಸಾಧಿಸಿದ ಇಂಗ್ಲೆಂಡ್​ - ಬೆನ್​ ಸ್ಟೋಕ್ಸ್​ ಆಲ್​ರೌಂಡರ್​ ಆಟ

438 ರನ್​ಗಳ ಗುರಿ ಪಡೆದ ದಕ್ಷಿಣ ಆಫ್ರಿಕಾ  ಕೇವಲ 13 ಓವರ್​ಗಳ ಬೇಕಿತ್ತು.  241ಕ್ಕೆ 7 ವಿಕೆಟ್​ ಕಳೆದುಕೊಂಡು ಡ್ರಾ  ಸಾಧಿಸಿಕೊಳ್ಳುವತ್ತ ದಕ್ಷಿಣ ಆಫ್ರಿಕಾ ಸಾಗುತ್ತಿದ್ದ ಸಂದರ್ಭದಲ್ಲಿ ದಾಳಿಗಿಳಿದ ಬೆನ್​ಸ್ಟೋಕ್ಸ್​ 5 ಓವರ್​ಗಳ ಅಂತರದಲ್ಲಿ ಕೊನೆಯ ಮೂರು ವಿಕೆಟ್​ ಪಡೆದು ಇಂಗ್ಲೆಂಡ್​ಗೆ ರೋಚಕ ಜಯ ತಂದುಕೊಟ್ಟರು.

Cape Town Test
Cape Town Test
author img

By

Published : Jan 8, 2020, 1:44 PM IST

Updated : Jan 8, 2020, 2:19 PM IST

ಕೇಪ್​ಟೌನ್​: ಬೆನ್​ ಸ್ಟೋಕ್ಸ್​ ಅವರ ಮಾರಕ ಬೌಲಿಂಗ್​ ದಾಳಿಯಿಂದ ಇಂಗ್ಲೆಂಡ್​ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಎರಡನೆ ಟೆಸ್ಟ್​ ಪಂದ್ಯವನ್ನು 189 ರನ್​ಗಳಿಂದ ಗೆದ್ದು ಬೀಗಿದೆ.​

438 ರನ್​ಗಳ ಗುರಿ ಪಡೆದ ದಕ್ಷಿಣ ಆಫ್ರಿಕಾ ಕೇವಲ 13 ಓವರ್​ಗಳ ಬೇಕಿತ್ತು. 241ಕ್ಕೆ 7 ವಿಕೆಟ್​ ಕಳೆದುಕೊಂಡು ಡ್ರಾ ಸಾಧಿಸಿಕೊಳ್ಳುವತ್ತಾ ದಕ್ಷಿಣ ಆಫ್ರಿಕಾ ಸಾಗುತ್ತಿದ್ದ ಸಂದರ್ಭದಲ್ಲಿ ದಾಳಿಗಿಳಿದ ಬೆನ್​ಸ್ಟೋಕ್ಸ್​ 5 ಓವರ್​ಗಳ ಅಂತರದಲ್ಲಿ ಕೊನೆಯ ಮೂರು ವಿಕೆಟ್​ ಪಡೆದು ಇಂಗ್ಲೆಂಡ್​ಗೆ ರೋಚಕ ಜಯ ತಂದುಕೊಟ್ಟರು.

ದಕ್ಷಿಣ ಆಫ್ರಿಕಾ ತಂಡದ ಪರ ಪೀಟರ್​ ಮಲಾನ್​ 84(288 ಎಸೆತ), ಡೀನ್​ ಎಲ್ಗರ್​ 34(78), ಕ್ವಿಂಟನ್​ ಡಿಕಾಕ್​ 50(107) ಹಾಗೂ ರಾಸ್ಸಿ ವ್ಯಾನ್​ ಡರ್​ ಡಾಸ್ಸೆನ್​(140) ಡ್ರಾ ಸಾಧಿಸಿಕೊಳ್ಳಲು ನಡೆಸಿದ ಹೋರಾಟ ವ್ಯರ್ಥವಾಯಿತು. ಇನ್ನು ಕೇವಲ 9 ಓವರ್​ಗಳ ಆಟ ಬಾಕಿ ಉಳಿದಿದ್ದ ವೇಳೆ ಕೊನೆಯ 3 ವಿಕೆಟ್​ ಕಳೆದುಕೊಂಡು ಸೋಲು ಕಂಡಿತು.

ಇಂಗ್ಲೆಂಡ್​ ಪರ ಬೆನ್​ ಸ್ಟೋಕ್ಸ್​ 3, ಜೇಮ್ಸ್​ ಆ್ಯಂಡರ್ಸನ್​ 2, ಜೋ ಡೆನ್ಲಿ 2, ಬ್ರಾಡ್, ಡೊಮಿನಿಕ್​ ಬೆಸ್​, ಸಾಮ್​ ಕರ್ರನ್​ ತಲಾ ಒಂದು ವಿಕೆಟ್​ ಪಡೆದು ಸರಣಿ ಸಮಬಲ ಸಾಧಿಸಲು ನೆರವಾದರು.

3 ವಿಕೆಟ್​ ಹಾಗೂ ಎರಡೂ ಇನ್ನಿಂಗ್ಸ್​ನಿಂದ 119 ರನ್​ಗಳಿಸಿದ ಬೆನ್​ಸ್ಟೋಕ್ಸ್​ ​ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಮೂರನೇ ಟೆಸ್ಟ್​ ಪಂದ್ಯ ಪೋರ್ಟ್​ ಎಲಿಜಬತ್​ನಲ್ಲಿ ಜನವರಿ 16 ರಿಂದ ನಡೆಯಲಿದೆ.

Intro:Body:Conclusion:
Last Updated : Jan 8, 2020, 2:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.