ETV Bharat / sports

ಕೊಹ್ಲಿ ಎದುರು ಆಡಿದ್ದೆ, ಇದೀಗ ಅವರ ಜೊತೆ ಡ್ರೆಸ್ಸಿಂಗ್ ರೂಮ್​ ಹಂಚಿಕೊಳ್ಳುವ ಅದೃಷ್ಟ ಸಿಕ್ಕಿದೆ: ತೆವಾಟಿಯಾ - ವಿರಾಟ್​ ಕೊಹ್ಲಿ- ತೆವಾಟಿಯಾ

ಶನಿವಾರ ಬಿಸಿಸಿಐ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗಾಗಿ ಘೋಷಿಸಿದ 19 ಸದಸ್ಯರ ಭಾರತೀಯ ತಂಡದಲ್ಲಿ ಮುಂಬೈ ಬ್ಯಾಟ್ಸ್‌ಮನ್‌ ಸೂರ್ಯಕುಮಾರ್ ಯಾದವ್, ಜಾರ್ಖಂಡ್​ ವಿಕೆಟ್ ಕೀಪರ್ ಇಶಾನ್ ಕಿಶನ್‌ ಜೊತೆಗೆ ತೆವಾಟಿಯಾ ಕೂಡ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ರಾಹುಲ್​ ತೆವಾಟಿಯಾ
ರಾಹುಲ್​ ತೆವಾಟಿಯಾ
author img

By

Published : Feb 21, 2021, 12:00 PM IST

Updated : Feb 21, 2021, 12:15 PM IST

ಹೈದರಾಬಾದ್​: ಹರಿಯಾಣ ಪರ ಸತತ ಆವೃತ್ತಿಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದ ರಾಹುಲ್ ತೆವಾಟಿಯಾ ಕಳೆದ ಐಪಿಎಲ್ ಆವೃತ್ತಿಯಲ್ಲಿ ಗಮನಾರ್ಹ ಪ್ರದರ್ಶನದ ಮೂಲಕ ಕ್ರಿಕೆಟ್​ ವಲಯದಲ್ಲಿ ಭಾರಿ ಚರ್ಚೆಗೆ ಬಂದಿದ್ದರು. ಇದೀಗ ಅದೇ ಪ್ರದರ್ಶನ ಅವರಿಗೆ ರಾಷ್ಟ್ರೀಯ ತಂಡದಲ್ಲಿ ಆಡುವ ಅವಕಾಶ ಕಲ್ಪಿಸಿಕೊಟ್ಟಿದೆ.

ಶನಿವಾರ ಬಿಸಿಸಿಐ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗಾಗಿ ಘೋಷಿಸಿದ 19 ಸದಸ್ಯರ ಭಾರತೀಯ ತಂಡದಲ್ಲಿ ಮುಂಬೈ ಬ್ಯಾಟ್ಸ್‌ಮನ್‌ ಸೂರ್ಯಕುಮಾರ್ ಯಾದವ್, ಜಾರ್ಖಂಡ್​ ವಿಕೆಟ್ ಕೀಪರ್ ಇಶಾನ್ ಕಿಶನ್‌ ಜೊತೆಗೆ ತೆವಾಟಿಯಾ ಕೂಡ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

2020ರ ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ತೋರಿದ ನಂತರ ಕ್ರಿಕೆಟ್​ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದರು. ಇದೀಗ ಹರಿಯಾಣ ತಂಡದ ಪರ ಆಡುವಾಗ ಎದುರಿಸಿದ ಸವಾಲು ತಮ್ಮನ್ನು ಉತ್ತಮ ಕ್ರಿಕೆಟ್ ಆಟಗಾರನನ್ನಾಗಿ ಬದಲಾಯಿಸಿದೆ ಎಂದು ಹೇಳಿರುವ ತೆವಾಟಿಯಾ, ವಿರಾಟ್ ಕೊಹ್ಲಿಯಂತಹ ಶ್ರೇಷ್ಠ ಆಟಗಾರರ ಜೊತೆಗೆ ಡ್ರೆಸ್ಸಿಂಗ್‌ ರೂಮ್‌ನಲ್ಲಿ ಹಂಚಿಕೊಳ್ಳುವುದಕ್ಕೆ ಕಾತುರನಾಗಿದ್ದೇನೆ ಎಂದು ತಿಳಿಸಿದ್ದಾರೆ.

ವಿರಾಟ್ ​ಕೊಹ್ಲಿ
ವಿರಾಟ್ ​ಕೊಹ್ಲಿ

ಭಾರತ ತಂಡಕ್ಕೆ ಆಯ್ಕೆಯಾದ ನಂತರ ಮಾಧ್ಯಮದ ಜೊತೆ ಮಾತನಾಡಿದ ತೆವಾಟಿಯಾ, ಹರಿಯಾಣ ತಂಡದಲ್ಲಿ ಅಮಿತ್​ ಮಿಶ್ರಾ, ಚಹಾಲ್ ಮತ್ತು ಜಯಂತ್​ ಯಾದವ್​ ಅವರಂತಹ ಅನುಭವಿಗಳೊಂದಿಗೆ ಪೈಪೋಟಿ ನಡೆಸಿ ರಾಜ್ಯ ತಂಡದಲ್ಲಿ ಆಡುವುದು ಅತ್ಯಂತ ಕಠಿಣ ಕೆಲಸ ಎಂದು ಭಾವಿಸುತ್ತೇನೆ. ಆದರೆ ಹರಿಯಾಣ ತಂಡದಲ್ಲಿ ಅವಕಾಶ ಪಡೆದು, ಉತ್ತಮ ಪ್ರದರ್ಶನ ನೀಡಿದ್ದರಿಂದ ನನಗೆ ಆತ್ಮ ವಿಶ್ವಾಸ ಹೆಚ್ಚಿಸಿದೆ ಮತ್ತು ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.

"ಐಪಿಎಲ್​ನಲ್ಲಿ ನಾನು ವಿರಾಟ್ ಕೊಹ್ಲಿ ವಿರುದ್ಧ ಆಡಿದ್ದೇನೆ. ಇದೀಗ ನಾನು ಕೊಹ್ಲಿ ಜೊತೆಯಲ್ಲಿ ಆಡಲಿದ್ದೇನೆ ಮತ್ತು ಅವರ ಜೊತೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳಲಿದ್ದೇನೆ. ಅಲ್ಲದೆ ಕೊಹ್ಲಿ ಮತ್ತು ವಿಶ್ವ ಶ್ರೇಷ್ಠ ಭಾರತದ ಕೆಲವು ಆಟಗಾರರೊಂದಿಗೆ ಡ್ರೆಸ್ಸಿಂಗ್ ರೂಮ್ ಶೇರ್ ಮಾಡಲು ನಾನು ಕಾತರನಾಗಿದ್ದೇನೆ. ಅವರೆಲ್ಲರು ವಿಶ್ವದ ಬಲಿಷ್ಠ ತಂಡಗಳೆದುರು ಯಾವ ರೀತಿ ಆಡುತ್ತಾರೆ ಎಂಬುದನ್ನು ನಾನು ತಿಳಿದುಕೊಳ್ಳಲು ಎದುರು ನೋಡುತ್ತಿದ್ದೇನೆ" ಎಂದು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

ಇದನ್ನು ಓದಿ:ಇಂಗ್ಲೆಂಡ್​ ವಿರುದ್ಧದ ಟಿ-20 ಸರಣಿಗೆ ಟೀಂ ಇಂಡಿಯಾ ಪ್ರಕಟ: ಹೊಸ ಪ್ರತಿಭೆಗಳಿಗೆ ಬಿಸಿಸಿಐ ಮಣೆ

Last Updated : Feb 21, 2021, 12:15 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.