ಸಿಡ್ನಿ : ಸಿಡ್ನಿ ಟೆಸ್ಟ್ ಸಂದರ್ಭದಲ್ಲಿ ಭಾರತೀಯ ಆಟಗಾರರನ್ನು ಜನಾಂಗೀಯವಾಗಿ ನಿಂದಿಸಿದ ಪ್ರೇಕ್ಷಕರನ್ನು ಗುರುತಿಸಲು ಸಾಧ್ಯವಾಗಲಿಲ್ಲ ಮತ್ತು ಸ್ಟ್ಯಾಂಡ್‌ಗಳಿಂದ ಹೊರಹಾಕಲ್ಪಟ್ಟ ಆರು ಮಂದಿ ನಿಜವಾದ ಅಪರಾಧಿಗಳಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಐಸಿಸಿಗೆ ನೀಡಿದ ವರದಿಯಲ್ಲಿ ತಿಳಿಸಿದೆ ಎಂದು ಆಸ್ಟ್ರೇಲಿಯಾ ಮಾಧ್ಯಮಗಳು ವರದಿ ಮಾಡಿವೆ.
ವರದಿಗಳ ಪ್ರಕಾರ, ಸಿಎ ಸಿಡ್ನಿ ಟೆಸ್ಟ್ ಸಂದರ್ಭದಲ್ಲಿ ಮೊಹಮ್ಮದ್ ಸಿರಾಜ್ರನ್ನು ಜನಾಂಗೀಯವಾಗಿ ನಿಂದಿಸಿದ್ದಕ್ಕೆ ಮೈದಾನದಿಂದ ಹೊರ ಹಾಕಲ್ಪಟ್ಟ 6 ಮಂದಿಯನ್ನು ವಿಚಾರಣೆ ನಡೆಸಿದ ನಂತರ ಸಿಎ ತಾನು ಆರೋಪಿಗಳನ್ನು ಗುರುತಿಸುವಲ್ಲಿ ವಿಫಲರಾಗಿರುವುದಾಗಿ ತಿಳಿಸಿದೆ.
ನ್ಯೂ ಸೌತ್ ವೇಲ್ಸ್ ಪೊಲೀಸರಿಂದ ಅಂತಿಮ ವರದಿಗಾಗಿ ಕಾಯುತ್ತಿರುವ ಸಿಎ, ಸಿಡ್ನಿ ಟೆಸ್ಟ್ನಲ್ಲಿ ಘಟನೆ ನಡೆದಾದ ಕ್ಲೈವ್ ಚರ್ಚಿಲ್ ಮತ್ತು ಬ್ರೆವೊಂಗಲ್ ಸ್ಟ್ಯಾಂಡ್ ಬಳಿ ಇದ್ದ ಆ 6 ಮಂದಿ ಸಿರಾಜ್ ವಿರುದ್ಧ ಯಾವುದೇ ಜನಾಂಗೀಯ ನಿಂದನೆಯ ಪದಗಳನ್ನು ಪ್ರಯೋಗಿಸಿಲ್ಲ ಎಂಬುದು ಸಾಬೀತಾಗಿದೆ ಎಂದು ಆಸೀಸ್ ಸುದ್ದಿ ಪತ್ರಿಕೆಗಳು ವರದಿ ಮಾಡಿವೆ.
ಭಾರತೀಯ ಕ್ರಿಕೆಟಿಗರ ವಿರುದ್ಧ ಜನಾಂಗೀಯ ನಿಂದನೆಯಾಗಿರುವುದನ್ನು ನಂಬಲಾಗಿದೆ. ಆದರೆ, ಸಿಎ ತನಿಖಾಧಿಕಾರಿಗಳಿಗೆ ಅಪರಾಧಿಗಳನ್ನು ಗುರುತಿಸಲು ಸಾಧ್ಯವಾಗಲಿಲ್ಲ ಎಂದು ಐಸಿಸಿಗೆ ಕಳುಹಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನು ಓದಿ:ವಿರಾಟ್ ನನ್ನ ನಾಯಕ, ನಾ ಉಪನಾಯಕ, ಇದ್ರಲ್ಲಿ ಬದಲಾವಣೆಯೇನಿಲ್ಲ: ರಹಾನೆ