ಅಬುಧಾಬಿ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 7 ವಿಕೆಟ್ಗಳ ಜಯ ಸಾಧಿಸಿದ ರಾಜಸ್ಥಾನ್ ರಾಯಲ್ಸ್ ಪ್ಲೇ ಆಫ್ ಆಸೆ ಜೀವಂತವಾಗಿರಿಸಿಕೊಂಡಿದ್ದರೆ, ಇತ್ತ ಚೆನ್ನೈ ಹೀನಾಯ ಪ್ರದರ್ಶನದಿಂದ ಸೋಲನುಭವಿಸಿ ಪ್ಲೇ ಆಫ್ ಹಾದಿಯಿಂದ ಬಹುತೇಕ ಹೊರಬಿದ್ದಿದೆ.
ಚೆನ್ನೈ ಸೂಪರ್ ಕಿಂಗ್ಸ್ ನೀಡಿದ 126 ರನ್ಗಳ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ಆರಂಭದಲ್ಲಿ ವಿಕೆಟ್ ಕಳೆದುಕೊಂಡರು ನಾಯಕ ಸ್ಮಿತ್ ಹಾಗೂ ಬಟ್ಲರ್ ಅವರ ಬೊಂಬಾಟ್ ಜೊತೆಯಾಟದ ನೆರವಿನಿಂದ 7 ವಿಕೆಟ್ಗಳ ಜಯ ಸಾಧಿಸಿ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೇರಿದೆ.
ಆರಂಭಿಕರಾಗಿ ಕಣಕ್ಕಿಳಿದ ಬೆನ್ಸ್ಟೋಕ್ಸ್ (19), ಉತ್ತಪ್ಪ(4), ಸಂಜು ಸಾಮ್ಸನ್(0) ತಂಡದ ಮೊತ್ತ 28 ರನ್ಗಳಿಗೆ 3 ವಿಕೆಟ್ ಒಪ್ಪಿಸಿದರು. ಆದರೆ 4ನೇ ವಿಕೆಟ್ ಜೊತೆಯಾಟದಲ್ಲಿ ಒಂದಾದ ಜೋಸ್ ಬಟ್ಲರ್ ಹಾಗೂ ಸ್ಟಿವ್ ಸ್ಮಿತ್ ಮುರಿಯದ 4 ನೇ ವಿಕೆಟ್ ಜೊತೆಯಾಟದಲ್ಲಿ 98 ರನ್ ಸೇರಿಸಿ ಇನ್ನು 15 ಎಸೆತಗಳಿರುವಂತೆ ತಂಡವನ್ನು ಗೆಲುವಿನ ದಡ ಸೇರಿಸಿದರು.
-
That's that from Match 37.
— IndianPremierLeague (@IPL) October 19, 2020 " class="align-text-top noRightClick twitterSection" data="
A 97-run partnership between Buttler and Smith guide @rajasthanroyals to a 7-wicket win over #CSK.#Dream11IPL pic.twitter.com/B6hDh7HnGV
">That's that from Match 37.
— IndianPremierLeague (@IPL) October 19, 2020
A 97-run partnership between Buttler and Smith guide @rajasthanroyals to a 7-wicket win over #CSK.#Dream11IPL pic.twitter.com/B6hDh7HnGVThat's that from Match 37.
— IndianPremierLeague (@IPL) October 19, 2020
A 97-run partnership between Buttler and Smith guide @rajasthanroyals to a 7-wicket win over #CSK.#Dream11IPL pic.twitter.com/B6hDh7HnGV
ಬಟ್ಲರ್ 48 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 7 ಬೌಂಡರಿ ಸಹಿತ 70 ರನ್ಗಳಿಸಿದರೆ, ಸ್ಮಿತ್ 34 ಎಸೆತಗಳಲ್ಲಿ 2 ಬೌಂಡರಿ ಸಹಿತ 26 ರನ್ಗಳಿಸಿ ಗೆಲುವಿನ ರೂವಾರಿಗಳಾದರು.ಸಿಎಸ್ಕೆ ಪರ ದೀಪಕ್ ಚಹಾರ್ 18ಕ್ಕೆ 2 ವಿಕೆಟ್ ಪಡೆದರೆ, ಜೋಶ್ ಹೆಜಲ್ವುಡ್ 19ಕ್ಕೆ1 ವಿಕೆಟ್ ಪಡೆದರು.
ಇದಕ್ಕು ಮೊದಲು ಬ್ಯಾಟಿಂಗ್ ನಡೆಸಿದ್ದ ಸಿಎಸ್ಕೆ ರಾಯಲ್ಸ್ ಬೌಲಿಂಗ್ಗೆ ನಲುಗಿ ಕೇವಲ 125 ರನ್ಗಳ ಸಾಧಾರಣ ಮೊತ್ತ ದಾಖಲಿಸಿತ್ತು. ಜಡೇಜಾ ಔಟಾಗದೆ 35 ಹಾಗೂ ಧೋನಿ 28 ರನ್ಗಳಿಸಿದ್ದರು.
ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ ರಾಯಲ್ಸ್ ತಂಡದ ಗೋಪಾಲ್ 14 ರನ್ ನೀಡಿ 1ವಿಕೆಟ್, ರಾಹುಲ್ ತೆವಾಟಿಯಾ 18 ರನ್ಗೆ 1 ವಿಕೆಟ್ ಹಾಗೂ ಕಾರ್ತಿಕ್ ತ್ಯಾಗಿ 35 ರನ್ ನೀಡಿ 1 ವಿಕೆಟ್ ಪಡೆದರು.