ETV Bharat / sports

ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಲಂಕಾಗೆ 'ಬುಮ್ರಾ'ಘಾತ - ಬುಮ್ರಾ

ವಿಶ್ವಕಪ್​ ಲೀಗ್​ನ ತಮ್ಮ ಕೊನೆಯ ಪಂದ್ಯದಲ್ಲಿ ಭಾರತ -ಶ್ರೀಲಂಕಾ ಮುಖಾಮುಖಿಯಾಗುತ್ತಿದ್ದು ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡಿದ್ದ ಲಂಕಾಗೆ ಬುಮ್ರಾ ಆಘಾತ ನೀಡಿದ್ದಾರೆ.

Bumra star
author img

By

Published : Jul 6, 2019, 4:26 PM IST

Updated : Jul 6, 2019, 6:42 PM IST

ಲೀಡ್ಸ್​: ವಿಶ್ವಕಪ್​ ಲೀಗ್​ನ ತಮ್ಮ ಕೊನೆಯ ಪಂದ್ಯದಲ್ಲಿ ಭಾರತ -ಶ್ರೀಲಂಕಾ ಮುಖಾಮುಖಿಯಾಗುತ್ತಿದ್ದು ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡಿದ್ದ ಲಂಕಾಗೆ ಬುಮ್ರಾ ಆಘಾತ ನೀಡಿದ್ದಾರೆ.

ಇಂದು ವಿಶ್ವಕಪ್​ನ ಎಲ್ಲಾ ಲೀಗ್​ ಪಂದ್ಯಗಳಲ್ಲಿ ಭಾರತ-ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ ತಂಡಗಳು ಆಡಲಿವೆ. ಲೀಡ್ಸ್​ನಲ್ಲಿ ಭಾರತದ ವಿರುದ್ಧ ಟಾಸ್​ ಗೆದ್ದು ಬ್ಯಾಟಿಂಗ್​ ನಡೆಸುತ್ತಿರುವ ಲಂಕಾ ಬುಮ್ರಾ ದಾಳಿಗೆ ಸಿಲುಕಿ ಆರಂಭಿಕರನ್ನು ಕಳೆದುಕೊಂಡಿದೆ.

ಇನ್ನಿಂಗ್ಸ್​ನ 4ನೇ ಓವರ್​ನಲ್ಲಿ ಲಂಕಾ ತಂಡದ ನಾಯಕ ಕರುಣರತ್ನೆ (10) ವಿಕೆಟ್​ ಪಡೆದ ಬುಮ್ರಾ 8 ಓವರ್​ನಲ್ಲಿ ಕುಶಾಲ್​ ಪೆರೆರಾ(18)ರನ್ನು ಪೆವಿಲಿಯನ್​ಗಟ್ಟಿದರು. ಸ್ಫೋಟಕ್ಕೆ ಆಟಕ್ಕೆ ಮುಂದಾದ ಫರ್ನಾಂಡೋ ಪಾಂಡ್ಯಗೆ ವಿಕೆಟ್​ ಒಪ್ಪಿಸಿದರೆ ಕುಶಾಲ್​ ಮೆಂಡಿಸ್​ ರವೀಂದ್ರ ಜಡೇಜಾ ಬೌಲಿಂಗ್​ನಲ್ಲಿ ಸ್ಟಂಪ್​ ಔಟ್​ ಆದರು.

ಭಾರತ ತಂಡ ಇಂದು ಚಹಾಲ್​ ಬದಲು ರವೀಂದ್ರ ಜಡೇಜಾರನ್ನು, ಶಮಿ ಬದಲು ಕುಲದೀಪ್​ ಯಾದವ್​ರನ್ನು ಆಡುತ್ತಿದ್ದಾರೆ.

ಈ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿ, ಇಂದೇ ನಡೆಯುವ ಆಸೀಸ್​ ಹಾಗೂ ದ.ಆಫ್ರಿಕಾ ನಡುವಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಜಯಸಿದರೆ ಭಾರತ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಲಿದೆ. ಒಂದು ವೇಳೆ ಆಸೀಸ್​ ಜಯಿಸಿದರೆ ಭಾರತ ಗೆದ್ದರೂ ಕೂಡ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು 3 ನೇಸ್ಥಾನದಲ್ಲಿರುವ ಇಂಗ್ಲೆಂಡ್​ ತಂಡವನ್ನು ಎದುರಿಸಲಿದೆ.

Intro:Body:Conclusion:
Last Updated : Jul 6, 2019, 6:42 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.