ಮ್ಯಾಂಚೆಸ್ಟರ್: ಟೆಸ್ಟ್ ಇಂಡೀಸ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಕ್ರೈಗ್ ಬ್ರಾಥ್ವೇಟ್ ಬೇಡದ ದಾಖಲೆಯೊಂದಕ್ಕೆ ಪಾತ್ರರಾಗಿದ್ದಾರೆ. ಅವರು ಸ್ಟುವರ್ಟ್ ಬ್ರಾಡ್ ಮತ್ತು ಜೇಮ್ಸ್ ಆ್ಯಂಡರ್ಸನ್ ಇಬ್ಬರಿಗೂ 500ನೇ ವಿಕೆಟ್ ಆಗಿ ಔಟಾಗಿದ್ದಾರೆ.
ವಿಂಡೀಸ್ ವಿರುದ್ಧದ ಕೊನೆಯ ಟೆಸ್ಟ್ನ ಕೊನೆಯ ದಿನ ವೇಗಿ ಸ್ಟುವರ್ಟ್ ಬ್ರಾಡ್ 500 ವಿಕೆಟ್ ಸಾಧನೆ ಮಾಡಿದ್ದರು. ಅವರು ತಮ್ಮ 140ನೇ ಪಂದ್ಯದಲ್ಲಿ ಈ ಸಾಧನೆ ಮಾಡುವ ಮೂಲಕ ಟೆಸ್ಟ್ ಕ್ರಿಕೆಟ್ ಇರಿಹಾಸದಲ್ಲಿ ಈ ಸಾಧನೆ ಮಾಡಿದ 7ನೇ ಬೌಲರ್ ಹಾಗೂ 4ನೇ ವೇಗದ ಬೌಲರ್ ಮತ್ತು ಇಂಗ್ಲೆಂಡ್ನ ದ್ವಿತೀಯ ಬೌಲರ್ ಎನಿಸಿಕೊಂಡರು.
ಇಂಗ್ಲೆಂಡ್ ತಂಡದ ಹಿರಿಯ ಬೌಲರ್ ಜೇಮ್ಸ್ ಆ್ಯಂಡರ್ಸನ್ ಕೂಡ (589) ಈಗಾಗಲೇ ಟೆಸ್ಟ್ ಕ್ರಿಕೆಟ್ನಲ್ಲಿ 500 ವಿಕೆಟ್ ಸಾಧನೆ ಮಾಡಿದ್ದಾರೆ. ಇಲ್ಲಿ ವಿಶೇಷವೆಂದರೆ ಆ್ಯಂಡರ್ಸನ್ ಕೂಡ ವಿಂಡೀಸ್ ವಿರುದ್ಧವೇ 2017ರ ವಿಸ್ಡನ್ ಟ್ರೋಫಿಯಲ್ಲಿ ಈ ಮಹತ್ವದ ಮೈಲಿಗಲ್ಲನ್ನ ಸ್ಥಾಪಿಸಿದ್ದರು. ಆ್ಯಂಡರ್ಸನ್ಗೂ 500ನೇ ವಿಕೆಟ್ ಆಗಿ ಔಟಾಗಿದ್ದು ಇದೇ ಕ್ರೈಗ್ ಬ್ರಾತ್ವೇಟ್ ಎನ್ನುವುದು ಆಶ್ಚರ್ಯಕರ ಸಂಗತಿಯಾಗಿದೆ.
ಟೆಸ್ಟ್ ಕ್ರಿಕೆಟ್ ಇತಿಹಾಸಲದಲ್ಲಿ ಶ್ರೀಲಂಕಾದ ದಿಗ್ಗಜ ಮತ್ತಯ್ಯ ಮುರುಳೀಧರನ್ 800 ವಿಕೆಟ್ ಪಡೆದು ಗರಿಷ್ಠ ವಿಕೆಟ್ ಪಡೆದವರ ಸಾಲಿನಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ನಂತರ ಆಸ್ಟ್ರೇಲಿಯಾದ ಶೇನ್ ವಾರ್ನ್(709), 3ನೇ ಸ್ಥಾನದಲ್ಲಿ ಭಾರತದ ಅನಿಲ್ ಕುಂಬ್ಳೆ(619), 4ನೇ ಸ್ಥಾನದಲ್ಲಿ ಜೇಮ್ಸ್ ಆ್ಯಂಡರ್ಸನ್(587), 5ನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಗ್ಲೇನ್ ಮೆಕ್ಗ್ರಾತ್(563) ಹಾಗೂ 6ನೇ ಸ್ಥಾನದಲ್ಲಿ ವೆಸ್ಟ್ ಇಂಡೀಸ್ನ ಕರ್ಟ್ನಿ ವಾಲ್ಶ್ (519) ಇದ್ದಾರೆ.