ದುಬೈ: ನಾಯಕ ವಿರಾಟ್ ಕೊಹ್ಲಿ ಸಿಡಿಸಿದ ಅರ್ಧಶತಕದ ಬಲದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 145 ರನ್ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ.
ಆರಂಭಿಕರಾಗಿ ಕಣಕ್ಕಿಳಿದಿದ್ದ ಆರ್ಸಿಬಿ ತಂಡದ ಫಿಂಚ್ 15 ಹಾಗೂ ಪಡಿಕ್ಕಲ್ 22 ರನ್ಗಳಿಗೆ ವಿಕೆಟ್ ಒಪ್ಪಿಸುವ ಮೂಲಕ ನಿರಾಶೆ ಮೂಡಿಸಿದರು.
-
Given that our bowlers are in excellent form, we feel this is a competitive total.
— Royal Challengers Bangalore (@RCBTweets) October 25, 2020 " class="align-text-top noRightClick twitterSection" data="
Thoughts? 👇🏻#PlayBold #IPL2020 #WeAreChallengers #Dream11IPL #RCBvCSK pic.twitter.com/dnMyMt0QS2
">Given that our bowlers are in excellent form, we feel this is a competitive total.
— Royal Challengers Bangalore (@RCBTweets) October 25, 2020
Thoughts? 👇🏻#PlayBold #IPL2020 #WeAreChallengers #Dream11IPL #RCBvCSK pic.twitter.com/dnMyMt0QS2Given that our bowlers are in excellent form, we feel this is a competitive total.
— Royal Challengers Bangalore (@RCBTweets) October 25, 2020
Thoughts? 👇🏻#PlayBold #IPL2020 #WeAreChallengers #Dream11IPL #RCBvCSK pic.twitter.com/dnMyMt0QS2
2 ವಿಕೆಟ್ ಕಳೆದುಕೊಡು ಅಘಾತಕ್ಕೊಳಗಾಗಿದ್ದ ಆರ್ಸಿಬಿಗೆ ಕೊಹ್ಲಿ ಹಾಗೂ ಎಬಿಡಿ 82 ರನ್ಗಳ ಜೊತೆಯಾಟ ನಡೆಸಿ ಚೇತರಿಕೆ ನೀಡಿದರು. ಆದರೆ 36 ಎಸೆತಗಳಲ್ಲಿ 39 ರನ್ಗಳಿಸಿದ್ದ ಎಬಿಡಿ 18 ಓವರ್ನಲ್ಲಿ ಅಬ್ಬರದ ಹೊಡೆತಕ್ಕೆ ಮುಂದಾಗಿ ವಿಕೆಟ್ ಕೈಚೆಲ್ಲಿಕೊಂಡರು. ನಂತರ ಬಂದ ಮೊಯೀನ್ ಅಲಿ 1 ರನ್ಗಳಿಗೆ ವಿಕೆಟ್ ಒಪ್ಪಿಸಿದರು.
ಆಕರ್ಷಕದ ಅರ್ಧಶತಕ ಸಿಡಿಸಿದ ಕೊಹ್ಲಿ 43 ಎಸೆತಗಳಲ್ಲಿ ತಲಾ ಒಂದು ಸಿಕ್ಸರ್ ಹಾಗೂ ಒಂದು ಬೌಂಡರಿ ಸಹಿತ 50 ರನ್ಗಳಿಸಿ ಔಟಾದರು.
ಸಿಎಸ್ಕೆ ಪರ ಸ್ಯಾಮ್ ಕರ್ರನ್ 19ಕ್ಕೆ 3, ದೀಪಕ್ ಚಹಾರ್ 31ಕ್ಕೆ 2 ಹಾಗೂ ಸ್ಯಾಂಟ್ನರ್ 23ಕ್ಕೆ1 ವಿಕೆಟ್ ಪಡೆದು ಮಿಂಚಿದರು.