ಅಹ್ಮದಾಬಾದ್: 2ನೇ ಟಿ20 ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡ ಸಂಘಟಿತ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ಅತಿಥೇಯ ಭಾರತ ತಂಡಕ್ಕೆ 165ರನ್ಗಳ ಸ್ಪರ್ಧಾತ್ಮಕ ಮೊತ್ತದ ಗುರಿ ನೀಡಿದೆ.
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2ನೇ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಇಂಗ್ಲೆಂಡ್ಗೆ ಬ್ಯಾಟಿಂಗ್ ನೀಡಿತು. ಆರಂಭಿಕನಾಗಿ ಕಣಕ್ಕಿಳಿದಿದ್ದ ಜೋಸ್ ಬಟ್ಲರ್ರನ್ನು ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್ ಎಲ್ಬಿ ಬಲೆಗೆ ಬೀಳಿಸಿ ಭಾರತಕ್ಕೆ ಮುನ್ನಡೆ ತಂದುಕೊಟ್ಟರು.
ಆದರೆ ಮೊದಲ ಪಂದ್ಯದ ಹೀರೋ ಜೇಸನ್ ರಾಯ್ ಮತ್ತೆ ತಮ್ಮ ಸ್ಪೋಟಕ ಬ್ಯಾಟಿಂಗ್ ಮುಂದುವರಿಸಿ ಕೇವಲ 35 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 4 ಬೌಂಡರಿಗಳ ಸಹಿತ 46 ರನ್ ಸಿಡಿಸಿದರು. ಡೇವಿಡ್ ಮಲನ್ ಜೊತೆಗೆ 2ನೇ ವಿಕೆಟ್ಗೆ 63 ರನ್ಗಳ ಜೊತೆಯಾಟ ಕೂಡ ನೀಡಿದರು.
-
England post 164/6 from their 20 overs!
— ICC (@ICC) March 14, 2021 " class="align-text-top noRightClick twitterSection" data="
Can India chase this down to level the series? #INDvENG | https://t.co/J566y2WPGj pic.twitter.com/lssQ8bHsQq
">England post 164/6 from their 20 overs!
— ICC (@ICC) March 14, 2021
Can India chase this down to level the series? #INDvENG | https://t.co/J566y2WPGj pic.twitter.com/lssQ8bHsQqEngland post 164/6 from their 20 overs!
— ICC (@ICC) March 14, 2021
Can India chase this down to level the series? #INDvENG | https://t.co/J566y2WPGj pic.twitter.com/lssQ8bHsQq
ಮಲನ್ 23 ಎಸೆತಗಳಲ್ಲಿ 24 ರನ್ ಸಿಡಿಸಿ ಚಹಾಲ್ಗೆ ವಿಕೆಟ್ ಒಪ್ಪಿಸಿದರು. ಇವರ ಬೆನ್ನಲ್ಲೇ ರಾಯ್ ಕೂಡ ವಾಷಿಂಗ್ಟನ್ ಬೌಲಿಂಗ್ನಲ್ಲಿ ಭುವಿಗೆ ಕ್ಯಾಚ್ ನೀಡಿ ಔಟಾದರು.
ನಂತರ ಬಂದವರು ತಂಡದ ಮೊತ್ತವನ್ನು ಹೆಚ್ಚಿಸುವ ಆತುರದಲ್ಲಿ ವಿಕೆಟ್ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಒಪ್ಪಿಸಿದರು. ಜಾನಿ ಬೈರ್ಸ್ಟೋವ್ 20, ಮಾರ್ಗನ್ 28, ಬೆನ್ ಸ್ಟೋಕ್ಸ್ 24 ರನ್ಗಳಿಸಿದರು.
ಭಾರತದ ಪರ ಭುವನೇಶ್ವರ್ ಕುಮಾರ್ 28ಕ್ಕೆ 1, ಸುಂದರ್ 29ಕ್ಕೆ 2, ಶಾರ್ದುಲ್ ಠಾಕೂರ್ 29ಕ್ಕೆ 2, ಚಹಾಲ್ 34ಕ್ಕೆ 1 ವಿಕೆಟ್ ಪಡೆದರು.