ಮೈಸೂರು: ರಾಜು ಭಟ್ಕಳ್ (66) ಹಾಗೂ ಎಂ.ಜಿ.ನವೀನ್ ಅವರ ಸಮಯೋಜಿತ ಆಟದ ನೆರವಿನಿಂದ ಶಿವಮೊಗ್ಗ ಲಯನ್ಸ್ ವಿರುದ್ಧ ಬಿಜಾಪುರ ಬುಲ್ಸ್ 17 ರನ್ಗಳಿಂದ ಗೆಲುವು ಸಾಧಿಸಿದೆ.
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯಾವಳಿಯಲ್ಲಿ ಟಾಸ್ ಸೋತು ಬ್ಯಾಟಿಂಗ್‍ಗಿಳಿದ ಬಿಜಾಪುರ ಬುಲ್ಸ್ ತಂಡವು 20 ಓವರ್‍ನಲ್ಲಿ 4 ವಿಕೆಟ್ ನಷ್ಟಕ್ಕೆ 195 ರನ್ ಕಲೆ ಹಾಕಿತು. ಇನ್ನು ತಂಡದ ಪರ ರಾಜು ಭಟ್ಕಳ್(66), ರಿಷಬ್ ಸಿಂಗ್(3), ಎಂ.ಜಿ.ನವೀನ್(68), ಜಸ್ವಂತ್ ಆಚಾರ್ಯ(9), ಸುನಿಲ್ ರಾಜು(36), ಎನ್.ಪಿ.ಭರೇತ್(3) ರನ್ ಬಾರಿಸಿದರು.
ಬಳಿಕ ಈ ಮೊತ್ತವನ್ನು ಬೆನ್ನತ್ತಿದ್ದ ಶಿವಮೊಗ್ಗ ಲಯನ್ಸ್ ತಂಡ 20 ಓವರ್‍ನಲ್ಲಿ 178 ರನ್ ಗಳಿಸಲಷ್ಟೇ ಶಕ್ತವಾಯಿತು. ತಂಡದ ಪರ ಅರ್ಜುನ ಹೊಯ್ಸಳ(69), ಎಂ.ನಂದೀಶ್ (45 ನಾಟೌಟ್) ಆಟ ವ್ಯರ್ಥವಾಯಿತು.