ಮುಂಬೈ: ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವ ಭಾರತ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಮಹೇಂದ್ರ ಸಿಂಗ್ ಅವರಿಗೆ ಬಿಸಿಸಿಐ ಧನ್ಯವಾದ ಅರ್ಪಿಸಿದೆ.
2019ರ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ದೂರ ಉಳಿದಿದ್ದ ಧೋನಿ ಆಗಸ್ಟ್ 15ರಂದು ತಮ್ಮ ಒಂದೂವರೆ ದಶಕದ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದ್ದರು. ಆದರೆ, ಐಪಿಎಲ್ನಲ್ಲಿ ಆಡುವುದಾಗಿ ಹೇಳಿದ್ದರು.
ಕೋವಿಡ್ 19 ಲಾಕ್ಡೌನ್ ಇದ್ದಿದ್ದರಿಂದ ಧೋನಿಗೆ ವಿದಾಯದ ಪಂದ್ಯವನ್ನು ಏರ್ಪಡಿಸಲು ಬಿಸಿಸಿಐಗೆ ಸಾಧ್ಯವಾಗಿರಲಿಲ್ಲ. ಇದೀಗ ತನ್ನ ಅಧಿಕೃತ ಟ್ವಿಟರ್ನಲ್ಲಿ ಧೋನಿ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದು #ThankYouMSDhoni ಎಂದು ಬರೆದುಕೊಂಡಿದೆ.
ಅದು ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ತಂಡವನ್ನು ಘೋಷಿಸಿದ ಬೆನ್ನಲ್ಲೇ ಈ ಫೋಟೋವನ್ನು ಕವರ್ ಫೋಟೋಗೆ ಶೇರ್ ಮಾಡಿಕೊಂಡಿರುವುದರಿಂದ ಬಹುಶಃ ಧೋನಿಗೆ ವಿದಾಯದ ಪಂದ್ಯವನ್ನು ಏರ್ಪಡಿಸುವುದು ಅನುಮಾನ ಎನ್ನಲಾಗುತ್ತಿದೆ.
2004ರಲ್ಲಿ ಭಾರತ ತಂಡಕ್ಕೆ ಪದಾರ್ಪಣೇ ಮಾಡಿದ್ದ ಧೋನಿ 2007 ಟಿ-20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಹಾಗೂ 2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಗಳನ್ನು ಗೆದ್ದ ಭಾರತದ ಏಕೈಕ ನಾಯಕ ಎಂಬ ವಿಶಿಷ್ಠ ದಾಖಲೆಗೆ ಅವರು ಭಾಜನರಾಗಿದ್ದಾರೆ.
350 ಏಕದಿನ ಪಂದ್ಯಗಳಿಂದ 10773 ರನ್‌ಗಳನ್ನು ಗಳಿಸಿದ್ದಾರೆ. ಅದರಲ್ಲಿ10 ಶತಕ ಮತ್ತು 73 ಅರ್ಧಶತಕಗಳು ಸೇರಿವೆ. 90 ಟೆಸ್ಟ್‌ಗಳಲ್ಲಿ 4,876 ರನ್ ಗಳನ್ನು ಕಲೆಹಾಕಿದ್ದರು. ಅದರಲ್ಲಿ ಆರು ಶತಕ, ಒಂದು ದ್ವಿಶತಕ ಮತ್ತು 33 ಅರ್ಧಶತಕಗಳು ಹಾಗೂ 98 ಟಿ-20 ಪಂದ್ಯಗಳಲ್ಲಿ 1,617 ರನ್‌ಗಳನ್ನು ಗಳಿಸಿದ್ದಾರೆ.