ಹೈದರಾಬಾದ್: ಭಾರತೀಯ ಕ್ರಿಕೆಟ್ ಮಂಡಳಿ ನೂತನ ಅಧ್ಯಕ್ಷರಾಗಿ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ ಇಂದು ಅಧಿಕಾರ ಸ್ವೀಕಾರ ಮಾಡಿದ್ದಾರೆ. ಇವರ ಜತೆಗೆ ವಿವಿಧ ಹುದ್ದೆಗಳಿಗೂ ಕೆಲವರು ನೇಮಕಗೊಂಡಿದ್ದು, ಗಂಗೂಲಿ ಅಧ್ಯಕ್ಷಗಿರಿಯ ಹೊಸ ಬೆಟಾಲಿಯನ್ ಇಂತಿದೆ.
ಬಿಸಿಸಿಐ ಅಧ್ಯಕ್ಷ
ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ ಬಿಸಿಸಿಐನ 39ನೇ ಅಧ್ಯಕ್ಷರಾಗಿದ್ದು, ಮುಂದಿನ 9 ತಿಂಗಳ ಕಾಲ ಈ ಹುದ್ದೆಯಲ್ಲಿ ಸೇವೆ ಸಲ್ಲಿಕೆ ಮಾಡಲಿದ್ದಾರೆ. 47 ವರ್ಷದ ಗಂಗೂಲಿ ಈಗಾಗಲೇ ಬೆಂಗಾಲ್ ಕ್ರಿಕೆಟ್ನ ಅಧ್ಯಕ್ಷರಾಗಿ ಸೇವೆ ಸಲ್ಲಿಕೆ ಮಾಡಿದ್ದು, ಬಿಸಿಸಿಐನ ಸಲಹಾ ಸಮಿತಿಯಲ್ಲೂ ಕಾರ್ಯ ನಿರ್ವಹಿಸಿದ್ದಾರೆ.
ಬಿಸಿಸಿಐ ಕಾರ್ಯದರ್ಶಿ
ಕೇಂದ್ರ ಗೃಹ ಸಚಿವ ಅಮಿತ್ ಶಾ ಪುತ್ರ 31 ವರ್ಷದ ಜಯ್ ಶಾ ಕಾರ್ಯದರ್ಶಿಯಾಗಿಯಾಗಿ ಆಯ್ಕೆಯಾಗಿದ್ದು, 2009ರಿಂದ ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ನಲ್ಲಿ ಗುರುತಿಸಿಕೊಂಡಿದ್ದು, 2013ರವರೆಗೆ ಜಂಟಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ.
ಖಂಜಾಚಿ
44 ವರ್ಷದ ಅರುಣ್ ಸಿಂಗ್ ಧುಮಾಲ್ ಬಿಸಿಸಿಐನ ನೂತನ ಖಂಜಾಚಿಯಾಗಿದ್ದು, ಇವರು ಬಿಸಿಸಿಐನ ಮಾಜಿ ಅಧ್ಯಕ್ಷರಾಗಿರುವ ಅನುರಾಗ್ ಠಾಕೂರ್ ಅವರ ಸಹೋದರನಾಗಿದ್ದಾರೆ. ಹಿಮಾಚಲ ಕ್ರಿಕೆಟ್ ಸಂಸ್ಥೆಯಲ್ಲಿ ಕೆಲಸ ಮಾಡಿರುವ ಅನುಭವ ಇವರಿಗೆ ಇದೆ.
ಜಂಟಿ ಕಾರ್ಯದರ್ಶಿಯಾಗಿ ಕೇರಳ ಕ್ರಿಕೆಟ್ ಅಸೋಸಿಯೇಷನ್ನ ಜಯೇಶ್ ಜಾರ್ಜ್ ಹಾಗೂ ಉತ್ತರಾಖಂಡದ ಮಹಿಮ್ ವರ್ಮಾ ಹೊಸ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.