ETV Bharat / sports

ಬಿಸಿಸಿಐ ಹಂಗಾಮಿ ಸಿಇಒ ಆಗಿ ಹೇಮಂಗ್​ ಅಮಿನ್​ ನೇಮಕ - ಐಪಿಎಲ್​

ಕಳೆದ ಎರಡು ವರ್ಷಗಳಿಂದ ಹೇಮಂಗ್​ ಅಮಿನ್​ ಅವರು ಬಿಸಿಸಿಐನಲ್ಲಿ ಕಠಿಣ ಪರಿಶ್ರಮದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಅವರನ್ನು ಬಿಸಿಸಿಐ ಹಂಗಾಮಿ ಸಿಒ ಆಗಿ ಆಯ್ಕೆ ಮಾಡಲಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೇಮಂಗ್​ ಅಮಿನ್ ಬಿಸಿಸಿಐ ಸಿಇಒ
ಹೇಮಂಗ್​ ಅಮಿನ್ ಬಿಸಿಸಿಐ ಸಿಇಒ
author img

By

Published : Jul 14, 2020, 1:56 PM IST

Updated : Jul 16, 2020, 3:06 PM IST

ಮುಂಬೈ: ಇತ್ತೀಚೆಗೆ ಸಿಇಒ ಸ್ಥಾನಕ್ಕೆ ರಾಹುಲ್​ ಜೋಹ್ರಿ ನೀಡಿದ್ದ ರಾಜೀನಾಮೆಯನ್ನು ಅಂಗೀಕರಿಸಿರುವ ಬಿಸಿಸಿಐ ಅವರ ಸ್ಥಾನಕ್ಕೆ ಹಂಗಾಮಿ ಸಿಇಒ ಆಗಿ ಐಪಿಎಲ್​ನ ಸಿಇಒ ಹೇಮಂಗ್​ ಅಮಿನ್​ ಅವರನ್ನು ನೇಮಕ ಮಾಡಿರುವುದಾಗಿ ಸೋಮವಾರ ತಿಳಿಸಿದೆ.

ಕಳೆದ ಎರಡು ವರ್ಷಗಳಿಂದ ಹೇಮಂಗ್​ ಅಮಿನ್​ ಅವರು ಬಿಸಿಸಿಐನಲ್ಲಿ ಕಠಿಣ ಪರಿಶ್ರಮದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಅವರನ್ನು ಬಿಸಿಸಿಐ ಹಂಗಾಮಿ ಸಿಒ ಆಗಿ ಆಯ್ಕೆ ಮಾಡಲಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೇಮಂಗ್​ ಅಮಿನ್
ಹೇಮಂಗ್​ ಅಮಿನ್

ಈ ಹುದ್ದೆಗೆ ಅಮಿನ್​ ಸರಿಯಾದ ವ್ಯಕ್ತಿ. ಪ್ರಾಮಾಣಿಕವಾಗಿ ಹೇಳಬೇಕು ಎಂದರೆ ಬಿಸಿಸಿಐಗೆ ಅವರು ನೀಡಿರುವ ಕೊಡುಗೆ ಜೋಹ್ರಿಗಿಂತ ಮೈಲಿಗಳಷ್ಟು ಮುಂದಿದೆ. ಅವರು ಬಿಸಿಸಿಐನ ಹಣಕಾಸು ಸಂಬಂಧಿತ ವ್ಯವಹಾರಗಳನ್ನು ಚೆನ್ನಾಗಿ ನಿರ್ವಹಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಕಳೆದ ವರ್ಷ ಐಪಿಎಲ್​ ಉದ್ಘಾಟನಾ ಸಮಾರಂಭದ ಬದಲಾಗಿ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ದೇಣಿಗೆ ನೀಡುವ ಕುರಿತು ನಿರ್ಧಾರ ಕೈಗೊಂಡ ಬಿಸಿಸಿಐ ತೀರ್ಮಾನದಲ್ಲಿ ಹೇಮಂಗ್​ ಅವರ ಪಾತ್ರ ಪ್ರಮುಖವಾಗಿತ್ತು ಎಂದು ತಿಳಿದು ಬಂದಿದೆ.

Last Updated : Jul 16, 2020, 3:06 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.