ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡ 7 ವರ್ಷಗಳ ನಂತರ ಬಿಳಿ ಜರ್ಸಿ ತೊಡಲು ಸಜ್ಜಾಗಿದೆ. ಮಹಿಳಾ ದಿನಾಚರಣೆಯ ದಿನದಂದು ಬಿಸಿಸಿಐ ಮಹಿಳಾ ಕ್ರಿಕೆಟಿಗರಿಗೆ ಖುಷಿ ಸುದ್ದಿ ನೀಡಿದ್ದು, ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯ ಆಯೋಜಿಸುವುದಾಗಿ ಘೋಷಿಸಿದೆ.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಹಿಳಾ ದಿನದ ಪ್ರಯುಕ್ತ ಈ ಮಹತ್ವದ ಘೋಷಣೆ ಮಾಡಿದ್ದಾರೆ. ಆದರೆ ಶಾ ಅವರು ಇಂಗ್ಲೆಂಡ್ ಮತ್ತು ಭಾರತದ ವನಿತೆಯರ ಟೆಸ್ಟ್ ಪಂದ್ಯದ ಆಯೋಜನೆಯ ದಿನಾಂಕ, ಸ್ಥಳದ ಬಗ್ಗೆ ಮಾಹಿತಿ ನೀಡಿಲ್ಲ.
-
On the occasion of #InternationalWomensDay, I’m pleased to announce that #TeamIndia @BCCIWomen will play a one-off Test match against @ECB_cricket later this year. The women in blue will be donning the whites again 🙏🏻 🇮🇳
— Jay Shah (@JayShah) March 8, 2021 " class="align-text-top noRightClick twitterSection" data="
">On the occasion of #InternationalWomensDay, I’m pleased to announce that #TeamIndia @BCCIWomen will play a one-off Test match against @ECB_cricket later this year. The women in blue will be donning the whites again 🙏🏻 🇮🇳
— Jay Shah (@JayShah) March 8, 2021On the occasion of #InternationalWomensDay, I’m pleased to announce that #TeamIndia @BCCIWomen will play a one-off Test match against @ECB_cricket later this year. The women in blue will be donning the whites again 🙏🏻 🇮🇳
— Jay Shah (@JayShah) March 8, 2021
ಅಂತಾರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ಭಾರತ ಮಹಿಳಾ ಕ್ರಿಕೆಟ್ ತಂಡ ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧ ಈ ವರ್ಷದ ನಂತರ ಟೆಸ್ಟ್ ಪಂದ್ಯವನ್ನಾಡಲಿದೆ ಎಂದು ಘೋಷಿಸುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ. ವುಮೆನ್ ಇನ್ ಬ್ಲೂ ಮತ್ತೆ ವೈಟ್ ಜರ್ಸಿ ತೊಡಲಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
2014ರಲ್ಲಿ ಭಾರತ ವನಿತೆಯರ ತಂಡ ತನ್ನ ಕೊನೆಯ ಟೆಸ್ಟ್ ಪಂದ್ಯವನ್ನು ದಕ್ಷಿಣ ಆಫ್ರಿಕಾ ವಿರುದ್ಧ ಮೈಸೂರಿನಲ್ಲಿ ಆಡಿತ್ತು. ಇದೀಗ 7 ವರ್ಷಗಳ ನಂತರ ಮತ್ತೆ ದೀರ್ಘ ಮಾದರಿಯ ಕ್ರಿಕೆಟ್‌ಗೆ ಮರಳುತ್ತಿದೆ.
ಇದನ್ನೂ ಓದಿ: ಮಹಿಳೆಯರ ಕ್ರಿಕೆಟ್‌ಗೆ ತೋರುದೀಪವಾದ ಹರ್ಮನ್ ಪ್ರೀತ್ ಕೌರ್ ಇನ್ನಿಂಗ್ಸ್!