ದುಬೈ : ಇಂಗ್ಲೆಂಡ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಟಾಮ್ ಬ್ಯಾಂಟನ್ ಹಾಗೂ ಪಾಕಿಸ್ತಾನದ ಹಿರಿಯ ಬ್ಯಾಟ್ಸ್ಮನ್ ಮೊಹಮ್ಮದ್ ಹಫೀಜ್ ಐಸಿಸಿ ಬುಧವಾರ ಬಿಡುಗಡೆ ಮಾಡಿರುವ ನೂತನ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರಿ ಏರಿಕೆ ಕಂಡಿದ್ದಾರೆ.
ಮಂಗಳವಾರ ಮುಕ್ತಾಯವಾದ ಕೊನೆಯ ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿರುವ ಅವರಿಬ್ಬರು ಗಮನಾರ್ಹ ಏರಿಕೆ ಕಂಡಿದ್ದಾರೆ. ರದ್ದಾದ ಮೊದಲ ಪಂದ್ಯ ಸೇರಿದಂತೆ ಸರಣಿಯಲ್ಲಿ 137 ರನ್ಗಳಿಸಿ ಬ್ಯಾಂಟನ್ ಬರೋಬ್ಬರಿ 152 ಸ್ಥಾನ ಏರಿಕೆ ಕಂಡು 43ನೇ ಸ್ಥಾನಕ್ಕೆ ಜಂಪ್ ಆಗಿದ್ದಾರೆ.
ಸತತ ಎರಡು ಅರ್ಧಶತಕದ ಸಹಿತ 155 ರನ್ ಬಾರಿಸಿದ ಮೊಹ್ಮದ್ ಹಫೀಜ್ 68ರಿಂದ 44ಕ್ಕೆ ಬಡ್ತಿ ಪಡೆದಿದ್ದಾರೆ. ಅವರು 86 ರನ್ಗಳ ನೆರವಿನಿಂದ ಪಾಕಿಸ್ತಾನ ತಂಡ ಕೊನೆಯ ಟಿ20 ಗೆದ್ದು ಸರಣಿಯನ್ನು 1-1ರಲ್ಲಿ ಸಮಬಲ ಸಾಧಿಸಿತ್ತು.
-
📈 @MRFWorldwide ICC T20I Rankings after the #ENGvPAK series:
— ICC (@ICC) September 2, 2020 " class="align-text-top noRightClick twitterSection" data="
👉 Babar Azam remains on top
👉 Dawid Malan enters top five
Updated rankings: https://t.co/H7CnAiw0YT pic.twitter.com/I48ApCdiTV
">📈 @MRFWorldwide ICC T20I Rankings after the #ENGvPAK series:
— ICC (@ICC) September 2, 2020
👉 Babar Azam remains on top
👉 Dawid Malan enters top five
Updated rankings: https://t.co/H7CnAiw0YT pic.twitter.com/I48ApCdiTV📈 @MRFWorldwide ICC T20I Rankings after the #ENGvPAK series:
— ICC (@ICC) September 2, 2020
👉 Babar Azam remains on top
👉 Dawid Malan enters top five
Updated rankings: https://t.co/H7CnAiw0YT pic.twitter.com/I48ApCdiTV
ಟೂರ್ನಿಯಲ್ಲಿ ಒಂದು ಅರ್ಧಶತಕದ ಸಹಿತ 84 ರನ್ಗಳಿಸಿದ್ದ ಡೇವಿಡ್ ಮಲನ್ ಮತ್ತೆ ಟಾಪ್ 5ಗೆ ಎಂಟ್ರಿ ಕೊಟ್ಟಿದ್ದಾರೆ. ಜಾನಿ ಬ್ಯಾರಿಸ್ಟೋವ್ ಒಂದು ಸ್ಥಾನ ಏರಿಕೆ ಕಂಡಿದ್ದು 22ನೇ ಸ್ಥಾನ ಪಡೆದಿದ್ದಾರೆ.
ಬಾಬರ್ ಅಜಮ್ ಹಾಗೂ ಕೆಎಲ್ ರಾಹುಲ್ ಮೊದಲೆರಡು ಸ್ಥಾನಗಳಲ್ಲಿ ಮುಂದುವರಿದಿದ್ದಾರೆ. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ 10ನೇಸ್ಥಾನದಲ್ಲಿರುವ ಮತ್ತೊಬ್ಬ ಭಾರತೀಯ ಬ್ಯಾಟ್ಸ್ಮನ್ ಆಗಿದ್ದಾರೆ.
ಬೌಲಿಂಗ್ ಶ್ರೇಯಾಂಕದ ಸರಣಿಯಲ್ಲಿ 5 ವಿಕೆಟ್ ಪಡೆದ ಶದಾಬ್ ಖಾನ್ ಒಂದು ಸ್ಥಾನ ಏರಿಕೆ ಕಂಡಿದ್ದು, 9ರಿಂದ 8 ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.