ಡಾಕಾ: ಬಂಗ್ಲಾದೇಶ ತಂಡದ ಮಾಜಿ ನಾಯಕ ಮುಷ್ರಫ್ ಮಾರ್ತಾಜ ಅವರನ್ನು ವಿಂಡೀಸ್ ಪ್ರವಾಸಕ್ಕಾಗಿ ಘೋಷಿಸಿದ 24 ಸದಸ್ಯರ ತಂಡದಿಂದ ಹೊರಗಿಡಲಾಗಿದೆ. ಆದರೆ ಇತ್ತೀಚೆಗಷ್ಟೇ ನಿಷೇಧ ಮುಕ್ತನಾಗಿರುವ ಶಕಿಬ್ ಅಲ್ ಹಸನ್ ಅವರಿಗೆ ಅವಕಾಶ ನೀಡಲಾಗಿದೆ.
ಜನವರಿ 20ರಿಂದ ಬಾಂಗ್ಲಾದೇಶ ತಂಡ 3 ಪಂದ್ಯಗಳ ಏಕದಿನ ಸರಣಿಗಾಗಿ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ. ಇದಕ್ಕಾಗಿ ತಮೀಮ್ ಇಕ್ಬಾಲ್ ನೇತೃತ್ವದ 24 ಸದಸ್ಯರ ಪ್ರಾಥಮಿಕ ತಂಡವನ್ನು ಘೋಷಣೆ ಮಾಡಿದ್ದು, ಇದರಲ್ಲಿ ಸೀಮಿತ ಓವರ್ಗಳ ತಂಡದ ಮಾಜಿ ನಾಯಕ ಮುಷ್ರಫ್ ಮಾರ್ತಾಜ ಅವರನ್ನು ತಂಡದಿಂದ ಹೊರಗಿಡಲಾಗಿದೆ.
ಆದರೆ ಮ್ಯಾಚ್ ಫಿಕ್ಸಿಂಗ್ ಮಾಡಲು ಬುಕ್ಕಿಗಳನ್ನು ಸಂಪರ್ಕಿಸಿದ್ದ ವಿಚಾರವನ್ನು ಮುಚ್ಚಿಟ್ಟ ತಪ್ಪಿಗೆ ಒಂದು ವರ್ಷ ನಿಷೇಧ ಮುಗಿಸಿರುವ 33 ವರ್ಷದ ಶಕಿಬ್ ಅಲ್ ಹಸನ್ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಇವರು ಸೀಮಿತ ಮತ್ತು ಟೆಸ್ಟ್ ಎರಡೂ ತಂಡದಲ್ಲೂ ಅವಕಾಶ ಪಡೆದಿದ್ದಾರೆ.
ತಂಡದಿಂದ ಹೊರಬಿದ್ದಿರುವ ಮಾರ್ತಾಜ ಬಾಂಗ್ಲಾದೇಶ ಪರ 220 ಏಕದಿನ ಪಂದ್ಯಗಳನ್ನಾಡಿದ್ದಾರೆ. 37 ವರ್ಷದ ಆಟಗಾರ 2020 ಮಾರ್ಚ್ನಲ್ಲಿ ಜಿಂಬಾಬ್ವೆ ವಿರುದ್ಧ 3-0 ಅಂತರದಲ್ಲಿ ಸರಣಿ ಗೆದ್ದ ನಂತರ ನಾಯಕತ್ವದಿಂದ ಕೆಳಗಿಳಿದಿದ್ದರು.
ಬಾಂಗ್ಲಾದೇಶದ ಪ್ರಾಥಮಿಕ ಏಕದಿನ ತಂಡ:
ತಮೀಮ್ ಇಕ್ಬಾಲ್ (ನಾಯಕ), ಮೊಮಿಮುಲ್ ಹಕ್, ತಸ್ಕಿನ್ ಅಹ್ಮದ್, ಖಲೀದ್ ಅಹ್ಮದ್, ಶಕೀಬ್ ಅಲ್ ಹಸನ್, ಹಸನ್ ಮಹಮ್ಮದ್, ನಜ್ಮುಲ್ ಹೊಸೈನ್ ಶಾಂಟೊ, ಮುಸ್ತಫಿಜುರ್ ರಹಮಾನ್, ಮುಶ್ಫಿಕರ್ ರಹೀಮ್, ಮೆಹಿದಿ ಹಸನ್ ಮಿರಾಜ್, ಮೊಹಮ್ಮದ್ ಮಿಥುನ್, ತಜ್ಮುಲ್ ಇಸ್ಲಾಮ್, ಲಿಟ್ಟನ್ ದಾಸ್, ನೂರುಲ್ ಹಸನ್, ಯಾಸಿರ್ ಅಲಿ, ಶದ್ಮನ್ ಇಸ್ಲಾಂ, ಸೈಫ್ ಹಸನ್, ನಯೀಮ್ ಹಸನ್, ಅಬು ಜಯೀದ್, ಎಬಾದೊತ್ ಹೊಸೈನ್.