ETV Bharat / sports

ಪಾಕಿಸ್ತಾನಕ್ಕೆ ಆಘಾತ: 2ನೇ ಟೆಸ್ಟ್​ನಿಂದಲೂ ಬಾಬರ್ ಅಜಮ್​ ಔಟ್​ - ಮೊಹಮ್ಮದ್ ರಿಜ್ವಾನ್​

ಕಿವೀಸ್‌ ವಿರುದ್ಧದ ಮೊದಲ ಟೆಸ್ಟ್​ ಮುಗಿದ ನಂತರ ಬಾಬರ್​ ನೆಟ್ಸ್​ನಲ್ಲಿ ಕೆಲವು ಸಮಯ ಅಭ್ಯಾಸ ನಡೆಸಿದ್ದರು. ಆದರೆ ನಾಳೆಯಿಂದ ಆರಂಭವಾಗುವ ಟೆಸ್ಟ್​ನಲ್ಲಿ ಅವರು ಕಣಕ್ಕಿಳಿಯುತ್ತಿಲ್ಲ ಎಂದು ತಿಳಿದು ಬಂದಿದೆ.

ಎರಡನೇ ಟೆಸ್ಟ್​ನಿಂದಲೂ ಬಾಬರ್ ಅಜಮ್​ ಔಟ್​
ಎರಡನೇ ಟೆಸ್ಟ್​ನಿಂದಲೂ ಬಾಬರ್ ಅಜಮ್​ ಔಟ್​
author img

By

Published : Jan 2, 2021, 5:30 PM IST

ಕ್ರೈಸ್ಟ್​ಚರ್ಚ್​: ಪಾಕಿಸ್ತಾನ ತಂಡದ ಕಾಯಂ ನಾಯಕ ಬಾಬರ್ ಅಜಮ್​ ಗಾಯದಿಂದ ಚೇತರಿಕೆ ಕಾಣದ ಕಾರಣ ಎರಡನೇ ಟೆಸ್ಟ್​ನಿಂದಲೂ ಹೊರಗುಳಿಯಲಿದ್ದಾರೆ. ಕ್ರೈಸ್ಟ್​ಚರ್ಚ್​ನಲ್ಲಿ ನಡೆಯುವ ಈ ಪಂದ್ಯದಲ್ಲಿ ಬಾಬರ್ ಅನುಪಸ್ಥಿತಿಯಲ್ಲೂ ನಾವು ಉತ್ತಮ ಪ್ರದರ್ಶನ ತೋರಲಿದ್ದೇವೆ ಎಂದು ಹಂಗಾಮಿ ನಾಯಕ ರಿಜ್ವಾನ್​ ತಿಳಿಸಿದ್ದಾರೆ.

ಮೊದಲ ಟೆಸ್ಟ್​ ಮುಗಿದ ನಂತರ ಬಾಬರ್​ ನೆಟ್ಸ್​ನಲ್ಲಿ ಕೆಲವು ಸಮಯ ಅಭ್ಯಾಸ ನಡೆಸಿದ್ದರು. ಆದರೆ ನಾಳೆಯಿಂದ ಆರಂಭವಾಗುವ ಟೆಸ್ಟ್​ನಲ್ಲಿ ಅವರು ಕಣಕ್ಕಿಳಿಯುತ್ತಿಲ್ಲ ಎಂದು ತಿಳಿದು ಬಂದಿದೆ.

ಬಾಬರ್​ ಶೇ. 100ರಷ್ಟು ಫಿಟ್​ ಇದ್ದಾರೆ ಎಂಬುದರ ಬಗ್ಗೆ ವಿಶ್ವಾಸವಿಲ್ಲ. ಅವರು ಸಂಪೂರ್ಣ ಫಿಟ್​ನೆಸ್ ಪಡೆಯದೆ ಪಂದ್ಯವನ್ನಾಡುವ ಅವಕಾಶವನ್ನು ತೆಗೆದುಕೊಳ್ಳುವುದಿಲ್ಲ ಎಂಬುದು ನನಗೆ ಗೊತ್ತಿದೆ ಎಂದು ರಿಜ್ವಾನ್​ ಹೇಳಿದ್ದಾರೆ.

ಬಾಬರ್​ ಇಲ್ಲದಿರುವುದು ನಮಗೆ ದೊಡ್ಡ ಹೊಡೆತ. ಆದರೂ ಸರಣಿ ನಮ್ಮಿಂದ ದೂರ ಹೋಗಿಲ್ಲ. ನಾವು ನಮ್ಮಲ್ಲಿರುವ ಬಲದಲ್ಲೇ ಉತ್ತಮ ಪ್ರದರ್ಶನ ತೋರಿ ಕೊನೆಯ ಪಂದ್ಯ ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸಲು ಸಮರ್ಥರಾಗಿದ್ದೇವೆ ಎಂದು ರಿಜ್ವಾನ್​ ಹೇಳಿದ್ದಾರೆ.

ಕಳೆದ ತಿಂಗಳು ಕ್ವೀನ್ಸ್​ಟೌನ್​ನಲ್ಲಿ ಫೀಲ್ಡಿಂಗ್ ಅಭ್ಯಾಸ ಮಾಡುವ ​ಸಂದರ್ಭದಲ್ಲಿ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಇವರ ಅನುಪಸ್ಥಿತಿಯಲ್ಲಿ ಆಡಿದ್ದ ಪಾಕಿಸ್ತಾನ ಉತ್ತಮ ಹೋರಾಟದ ನಡುವೆಯೂ 101 ರನ್​ಗಳ ಸೋಲು ಕಂಡಿತ್ತು.

ಓದಿ: ಟೀಂ ಇಂಡಿಯಾಗೆ ಮತ್ತೊಂದು ಆಘಾತ: ಅಭ್ಯಾಸದ ವೇಳೆ ಗಾಯಗೊಂಡ ಪೂಜಾರಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.