ETV Bharat / sports

ಇಂಗ್ಲೆಂಡ್​ ವಿರುದ್ಧ ಟಿ20 ಸರಣಿ ಮುಗಿಯುತ್ತಿದ್ದಂತೆ ಟಿ20 ಬ್ಲಾಸ್ಟ್​ನಲ್ಲಿ ಸಮರ್​ಸೆಟ್​ ಪರ ಬಾಬರ್​ ಅಜಮ್​ ಕಣಕ್ಕೆ

ಪಾಕ್​ ತಂಡದ ಸೀಮಿತ ಓವರ್​ಗಳ ನಾಯಕ ಕ್ಲಬ್​ ಪರ ಕೊನೆಯ ಏಳು ಗುಂಪು ಮತ್ತು ನಾಕೌಟ್​ ಹಂತದ ಪಂದ್ಯಗಳಿಗೆ ಲಭ್ಯವಿರುತ್ತಾರೆ ಎಂದು ತಿಳಿದುಬಂದಿದೆ. 25 ವರ್ಷದ ಆಟಗಾರ ಪ್ರಸ್ತುತ ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ 3 ಪಂದ್ಯಗಳ ಟಿ20 ಸರಣಿಯಲ್ಲಿ ಪಾಕ್​ ತಂಡವನ್ನು ಮುನ್ನಡೆಸುತ್ತಿದ್ದಾರೆ. ಶುಕ್ರವಾರ ನಡೆದ ಮೊದಲ ಪಂದ್ಯ ಮಳೆಯಿಂದ ರದ್ದುಗೊಂಡಿತ್ತು.

ಟಿ20 ಬ್ಲಾಸ್ಟ್​  ಸಮರ್​ಸೆಟ್​
ಬಾಬರ್​ ಅಜಮ್​
author img

By

Published : Aug 29, 2020, 6:20 PM IST

ಲಂಡನ್​: ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಟಿ 20 ಬ್ಲಾಸ್ಟ್ ಟೂರ್ನಮೆಂಟ್​ನಲ್ಲಿ ಪಾಕಿಸ್ತಾನದ ಬ್ಯಾಟ್ಸ್‌ಮನ್ ಬಾಬರ್ ಅಜಮ್ ಸಮರ್‌ಸೆಟ್ ಪರ ಆಡಲಿದ್ದಾರೆ ಎಂದು ಕ್ಲಬ್ ಶನಿವಾರ ಖಚಿತಪಡಿಸಿದೆ.

ಪಾಕ್​ ತಂಡದ ಸೀಮಿತ ಓವರ್​ಗಳ ನಾಯಕ ಕ್ಲಬ್​ ಪರ ಕೊನೆಯ ಏಳು ಗುಂಪು ಮತ್ತು ನಾಕೌಟ್​ ಹಂತದ ಪಂದ್ಯಗಳಿಗೆ ಲಭ್ಯವಿರುತ್ತಾರೆ ಎಂದು ತಿಳಿದುಬಂದಿದೆ. 25 ವರ್ಷದ ಆಟಗಾರ ಪ್ರಸ್ತುತ ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ 3 ಪಂದ್ಯಗಳ ಟಿ20 ಸರಣಿಯಲ್ಲಿ ಪಾಕ್​ ತಂಡವನ್ನು ಮುನ್ನಡೆಸುತ್ತಿದ್ದಾರೆ. ಶುಕ್ರವಾರ ನಡೆದ ಮೊದಲ ಪಂದ್ಯ ಮಳೆಯಿಂದ ರದ್ದುಗೊಂಡಿತ್ತು.

ಟಿ20 ಬ್ಲಾಸ್ಟ್​
ಬಾಬರ್​ ಅಜಮ್​

ಬಾಬರ್​ ಕಳೆದ ಆವೃತ್ತಿಯಲ್ಲಿ 578 ರನ್​ ಸಿಡಿಸುವ ಮೂಲಕ ಸಮರ್​ಸೆಟ್​​ ಪರ ಅಮೋಘ ಪ್ರದರ್ಶನ ನೀಡಿದ್ದರು. ಇದೀಗ ಟಿ20 ಸರಣಿ ಮುಗಿಯುತ್ತಿದ್ದಂತೆ ಸೆಪ್ಟೆಂಬರ್​ 2 ರಿಂದ ಅಕ್ಟೋಬರ್​ 4ವರೆಗೆ ಇಂಗ್ಲೆಂಡ್​ನಲ್ಲೇ ಉಳಿದು ಟಿ20 ಬ್ಲಾಸ್ಟ್​ನಲ್ಲಿ ಮುಂದುವರಿಯಲಿದ್ದಾರೆ ಎಂದು ತಿಳಿದುಬಂದಿದೆ.

ಸಮರ್​ಸೆಟ್​ಗೆ ಮರಳಿದ ನಂತರ ಮಾತನಾಡಿರುವ ಬಾಬರ್​ ಅಜಮ್​, ನಾನು ಕಳೆದ ವರ್ಷ ಸಮರ್​ಸೆಟ್​ ತಂಡದ ಪರ ಆಡುವುದನ್ನು ಆನಂದಿಸಿದ್ದೇನೆ. ಮತ್ತು ಈ ವರ್ಷವೂ ತಂಡದ ಪರ ಆಡುವ ಅವಕಾಶ ಸಿಕ್ಕಿರುವುದಕ್ಕೆ ಸಂತೋಷವಾಗುತ್ತಿದೆ. ಪ್ರಪಂಚದಾದ್ಯಂತ ಕೋವಿಡ್​ 19 ಇರುವುದರ ಹೊರೆತಾಗಿಯತೂ ನಡೆಯುತ್ತಿರುವ ಈ ಟೂರ್ನಿ ಬಹಳ ಭಿನ್ನವಾಗಿದ್ದು, ಆ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸುತ್ತಿರುವುದಕ್ಕೆ ಇಗ್ಲೆಂಡ್​ ಕ್ರಿಕೆಟ್​ ಮಂಡಳಿಯನ್ನು ಪ್ರಶಂಸಿಸುತ್ತೇನೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.