ETV Bharat / sports

ಪಾಕ್​ ಏಕದಿನ ತಂಡದ ನೂತನ ನಾಯಕನಾಗಿ ಆಯ್ಕೆಯಾದ ಸ್ಟಾರ್​ ಬ್ಯಾಟ್ಸ್​ಮನ್​ - pakisthan cricket

2019ರ ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ ತಂಡ ಕಳಪೆ ಪ್ರದರ್ಶನ ತೋರಿದ್ದರಿಂದ ಸರ್ಫರಾಜ್​ ಖಾನ್​ರನ್ನು ನಾಯಕತ್ವದಿಂದ ಕೆಳಗಿಳಿಸಬೇಕೆಂಬ ಕೂಗು ಕೇಳಿ ಬಂದಿತ್ತು. ನಂತರ ಶ್ರೀಲಂಕಾ ವಿರುದ್ಧ ಟಿ20 ಸರಣಿಯಲ್ಲಿ ವೈಟ್​ ವಾಷ್​ ಅಪಮಾನಕ್ಕೆ ತುತ್ತಾಗಿತ್ತು. ಈ ಸೋಲಿನ ನಂತರ ಪಿಸಿಬಿ ನಾಯಕತ್ವದ ಬದಲಾವಣೆ ಮಾಡುವ ಆಲೋಚನೆ ಮಾಡಿತ್ತು.

ಪಾಕ್​ ಏಕದಿನ ತಂಡದ ನೂತನ ನಾಯಕನಾಗಿ ಆಯ್ಕೆಯಾದ ಸ್ಟಾರ್​ ಬ್ಯಾಟ್ಸ್​ಮನ್​

author img

By

Published : May 13, 2020, 10:03 PM IST

ಲಾಹೋರ್: ಸೀಮಿತ ಓವರ್​ಗಳ ಕ್ರಿಕೆಟ್​ಗೆ ಪಾಕ್​ ತಂಡದ ನೂತನ ನಾಯಕನಾಗಿ ಸ್ಟಾರ್ ಬ್ಯಾಟ್ಸ್​ಮನ್​ ಬಾಬರ್​ ಅಜಮ್ ಅವರನ್ನು ಪಿಸಿಬಿ ಆಯ್ಕೆ ಮಾಡಿದೆ.

2019ರ ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ ತಂಡ ಕಳಪೆ ಪ್ರದರ್ಶನ ತೋರಿದ್ದರಿಂದ ಸರ್ಫರಾಜ್​ ಖಾನ್​ರನ್ನು ನಾಯಕತ್ವದಿಂದ ಕೆಳಗಿಳಿಸಬೇಕೆಂಬ ಕೂಗು ಕೇಳಿ ಬಂದಿತ್ತು. ನಂತರ ಶ್ರೀಲಂಕಾ ವಿರುದ್ಧ ಟಿ20 ಸರಣಿಯಲ್ಲಿ ವೈಟ್​ ವಾಷ್​ ಅಪಮಾನಕ್ಕೆ ತುತ್ತಾಗಿತ್ತು. ಈ ಸೋಲಿನ ನಂತರ ಪಿಸಿಬಿ ನಾಯಕತ್ವದ ಬದಲಾವಣೆ ಮಾಡುವ ಆಲೋಚನೆ ಮಾಡಿತ್ತು.

ಇದೀಗ ಟಿ20 ಕ್ರಿಕೆಟ್​ನ ನಂಬರ್​ ಒನ್​ ಬ್ಯಾಟ್ಸ್​ಮನ್​ ಆಗಿರುವ ಸ್ಟಾರ್ ಬ್ಯಾಟ್ಸ್‌ಮನ್ ಬಾಬರ್ ಅಜಮ್ ಅವರನ್ನು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಏಕದಿನ ಹಾಗೂ ಟಿ20 ತಂಡದ ನೂತನ ನಾಯಕನಾಗಿ ಬುಧವಾರ ಘೋಷಿಸಿದೆ.

ಬಾಬರ್​ ಕಳೆದ ಎರಡು ಮೂರು ವರ್ಷಗಳಿಂದ ಎಲ್ಲಾ ಮಾದರಿಯ ಕ್ರಿಕೆಟ್​ನಲ್ಲೂ ಉತ್ತಮ ಬ್ಯಾಟಿಂಗ್​ ಪ್ರದರ್ಶನ ತೋರುತ್ತಿದ್ದಾರೆ. ಅವರು 74 ಏಕದಿನ ಪಂದ್ಯಗಳಿಂದ 3359 ರನ್​, 38 ಟಿ20 ಪಂದ್ಯಗಳಿಂದ 1471 ಹಾಗೂ 26 ಟೆಸ್ಟ್​ ಪಂದ್ಯಗಳಿಂದ 1850 ರನ್​ಗಳಿಸಿದ್ದಾರೆ.

ಇನ್ನು ಟೆಸ್ಟ್​ ತಂಡದ ನಾಯಕನಾಗಿ ಅಜರ್ ಅಲಿ ಆಯ್ಕೆಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.