ETV Bharat / sports

ನಾವು ಪಿಸಿಬಿಯಲ್ಲಿರುವವರೆಗೂ ಬಾಬರ್ ಅಜಮ್​ ನಾಯಕರಾಗಿರುತ್ತಾರೆ : ಪಿಸಿಬಿ ಸಿಇಒ ವಾಸೀಂ ಖಾನ್​ - ಪಾಕಿಸ್ತಾನ ತಂಡದ ನಾಯಕತ್ವ

ಬಾಬರ್​ಗೆ ಅತ್ಯುತ್ತಮ ಭವಿಷ್ಯವಿದೆ ಎಂದು ನಾವು ಭಾವಿಸುತ್ತೇವೆ. ಆತ ನಮ್ಮ ಅತ್ಯುತ್ತಮ ಬ್ಯಾಟ್ಸ್​ಮನ್​, ದಿನದಿನಕ್ಕೆ ಉತ್ತಮವಾಗುತ್ತಿದ್ದಾರೆ..

ಬಾಬರ್ ಅಜಮ್
ಬಾಬರ್ ಅಜಮ್
author img

By

Published : Dec 1, 2020, 4:39 PM IST

ಕರಾಚಿ : ಪಾಕಿಸ್ತಾನ ತಂಡಕ್ಕೆ ದೀರ್ಘಾವಧಿಯ ಆಧಾರದ ಮೇಲೆ ಮೂರು ಸ್ವರೂಪಗಳಿಗೆ ನಾಯಕನನ್ನಾಗಿ ನೇಮಕ ಮಾಡಲಾಗಿದೆ ಎಂದು ಪಿಸಿಬಿ ಸಿಇಒ ತಿಳಿಸಸಿದ್ದಾರೆ.

ಎನ್ಸಾನ್ ಮಣಿ ಮತ್ತು ನಾನು ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿರುವವರೆಗೂ ಬಾಬರ್ ಅಜಮ್​ ನಾಯಕನಾಗಿ ಮುಂದುವರಿಯಲಿದ್ದಾರೆ" ಎಂದು ಅವರು ಹೇಳಿದ್ದಾರೆ. "ಆತ (ಬಾಬರ್​) ನಮ್ಮ ಅತ್ಯುತ್ತಮ ಬ್ಯಾಟ್ಸ್​ಮನ್ ಆಗಿರುವುದರಿಂದ ಅವರನ್ನು ನಾಯಕನನ್ನಾಗಿ ನೇಮಕ ಮಾಡಿದ್ದೇವೆ.

ಆತ ಯುವ ಮತ್ತು ಬಲಿಷ್ಠ ಹಾಗೂ ಎಲ್ಲಾ ಮೂರೂ ಫಾರ್ಮ್ಯಾಟ್​ಗಳಲ್ಲೂ ತಾವಾಗಿಯೇ ಜವಾಬ್ದಾರಿ ತೆಗೆದುಕೊಳ್ಳುವುದಾಗಿ ಬಯಸಿದ್ದರು" ಎಂದು ಪಿಸಿಬಿ ಸಿಇಒ ವಾಸೀಂ ಖಾನ್ ಸಂದರ್ಶನದಲ್ಲಿ ಹೇಳಿದ್ದಾರೆ.

ಪಾಕಿಸ್ತಾನ ಕ್ರಿಕೆಟ್‌ನಲ್ಲಿ ನಾಯಕತ್ವ ನಿರಂತರವಾಗಿ ಬದಲಾಗುತ್ತಿರುವ ಬಗ್ಗೆ ಪಿಸಿಬಿ ಅಧಿಕಾರಿಗೆ ನೆನಪಿಸಿದಾಗ, ಬಾಬರ್ ಆ ಸ್ಥಾನದಲ್ಲಿ ದೀರ್ಘಕಾಲ ಉಳಿಯಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಬಾಬರ್​ಗೆ ಅತ್ಯುತ್ತಮ ಭವಿಷ್ಯವಿದೆ ಎಂದು ನಾವು ಭಾವಿಸುತ್ತೇವೆ. ಆತ ನಮ್ಮ ಅತ್ಯುತ್ತಮ ಬ್ಯಾಟ್ಸ್​ಮನ್​, ದಿನದಿನಕ್ಕೆ ಉತ್ತಮವಾಗುತ್ತಿದ್ದಾರೆ.

ಅವರನ್ನು ಮೊದಲಿಗೆ ಸೀಮಿತ ಓವರ್​ಗಳಲ್ಲಿ ನಾಯಕರಾಗಿ ನೇಮಿಸಿದಾಗ ಅವರ ಮಾನಸಿಕ ಸ್ಥಿತಿ ಬಲಿಷ್ಠವಾಗಿದೆ ಎಂಬುದು ನಮಗೆ ಅರಿವಾಗಿದೆ. ಅದಕ್ಕಾಗಿ ಮೂರು ಮಾದರಿಯ ಕ್ರಿಕೆಟ್​ಗೆ ಅವರನ್ನೇ ನಾಯಕನಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.