ಸಿಡ್ನಿ: ಕೊರೊನಾ ಸೋಮಕಿನ ಭೀತಿ ಹಿನ್ನೆಲೆಯಲ್ಲಿ ಚೆಂಡು ಹೊಳೆಯುವಂತೆ ಮಾಡಲು ಲಾಲಾರಸ ಬಳಕೆ ಮಾಡುವುದನ್ನು ಐಸಿಸಿ ನಿರ್ಬಂಧಿಸಿದ್ದು, ಇದ್ದಕ್ಕೆ ಪರ್ಯಾಯವಾಗಿ ಶೈನಿಂಗ್ ವ್ಯಾಕ್ಸ್ ಬಳಕೆ ಬಗ್ಗೆ ಆಸೀಸ್ ವೇಗಿ ಪ್ರಸ್ತಾಪಿಸಿದ್ದಾರೆ.
ಲಾಲಾರಸ ಬಳಸುವುದನ್ನು ನಿಷೇಧ ಮಾಡಿದರೆ ಬ್ಯಾಟ್ ಮತ್ತು ಚೆಂಡಿನ ನಡುವೆ ಸಮತೋಲನ ಸಾಧಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಕ್ರಿಕೆಟ್ ಬಹಳ ನೀರಸವಾಗುವ ಅಪಾಯವನ್ನು ಎದುರಿಸಲಿದೆ ಎಂದು ವೇಗಿ ಮಿಚೆಲ್ ಸ್ಟಾರ್ಕ್ ಎಚ್ಚರಿಸಿದ್ದಾರೆ.
ಚೆಂಡಿನ ಮೇಲೆ ಲಾಲಾರಸವನ್ನು ಬಳಸುವುದು ಕ್ರಿಕೆಟ್‌ನಲ್ಲಿ ಹಳೆಯ ಅಭ್ಯಾಸವಾಗಿದೆ. ಬೆವರು ಅಥವಾ ಲಾಲಾರಸವನ್ನು ಬಳಸಿ ಚೆಂಡು ಒಂದು ಬದಿಯಲ್ಲಿ ಹೊಳೆಯುವಂತೆ ಮಾಡುವ ಮೂಲಕ ಬೌಲರ್‌ಗಳು ರಿವರ್ಸ್ ಸ್ವಿಂಗ್ ಪಡೆದು ಬ್ಯಾಟ್ಸ್‌ಮನ್‌ಗಳನ್ನು ಮೋಸಗೊಳಿಸಲು ಸಹಾಯ ಮಾಡುತ್ತದೆ.
ಅನಿಲ್ ಕುಂಬ್ಳೆ ನೇತೃತ್ವದ ಐಸಿಸಿ ಕ್ರಿಕೆಟ್ ಸಮಿತಿಯು ಆಟ ಪುನಾರಂಭವಾದಾಗ ಚೆಂಡು ಹೊಳೆಯಲು ಲಾಲಾರಸದ (ಉಗುಳು) ಬಳಕೆಯನ್ನು ನಿಷೇಧಿಸುವಂತೆ ಶಿಫಾರಸು ಮಾಡಿದೆ. ಕ್ರಿಕೆಟ್ ಪುನಾರಂಭಕ್ಕಾಗಿ ಐಸಿಸಿ ತನ್ನ ಮಾರ್ಗಸೂಚಿಗಳಲ್ಲಿ ಈ ಅಭ್ಯಾಸವನ್ನು ನಿರ್ಬಂಧಿಸಿದೆ.
ಆದರೆ ಸ್ಟಾರ್ಕ್ ಹೇಳಿಕೆಗೆ ಭಿನ್ನವಾದ ಅಭಿಪ್ರಾಯ ವ್ಯಕ್ತಪಡಿಸಿದ್ದ ಇಂಗ್ಲೆಡ್ ತಂಡದ ನಾಯಕ ಜೋ ರೂಟ್, ಲಾಲಾರಸ ಬಳಕೆ ನಿರ್ಬಂಧದಿಂದ ಬೌಲರ್‌ಗಳ ಕೌಶಲ್ಯ ಸುಧಾರಿಸಬಹುದು ಎಂದಿದ್ದರು.