ಅಡಿಲೇಡ್: ಆಸ್ಟ್ರೇಲಿಯಾ-ಪಾಕಿಸ್ತಾನ ನಡುವಿನ ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಆತಿಥೇಯರು ಇನ್ನಿಂಗ್ಸ್ ಹಾಗೂ 48 ರನ್ಗಳಿಂದ ಗೆಲುವು ದಾಖಲಿಸಿದ್ದಾರೆ. ಈ ಮೂಲಕ ಎರಡು ಟೆಸ್ಟ್ ಪಂದ್ಯಗಳ ಸರಣಿಯನ್ನು ಕ್ಲೀನ್ಸ್ವೀಪ್ ಮಾಡಿದೆ.
ಪಿಂಕ್ ಬಾಲ್ ಟೆಸ್ಟ್ನಲ್ಲಿ ಮೊದಲು ಬ್ಯಾಟ್ ಮಾಡಿದ್ದ ಆಸ್ಟ್ರೇಲಿಯಾ ಡೇವಿಡ್ ವಾರ್ನರ್ ದಾಖಲೆಯ ತ್ರಿಶತಕದ ನೆರವಿನಿಂದ 3 ವಿಕೆಟ್ ನಷ್ಟಕ್ಕೆ 589 ರನ್ಗಳ ಬೃಹತ್ ಮೊತ್ತ ಕಲೆಹಾಕಿತ್ತು.
ಪಾಕ್ ಬೌಲರ್ಗಳ ದಾಳಿ ಪುಡಿಗಟ್ಟಿದ ವಾರ್ನರ್... ತ್ರಿಶತಕ ಸಿಡಿಸಿ ನಾಟೌಟ್
ಆಸೀಸ್ ಮೊತ್ತಕ್ಕೆ ಪ್ರತಿಯಾಗಿ ಬ್ಯಾಟಿಂಗ್ಗೆ ಇಳಿದಿದ್ದ ಪ್ರವಾಸಿ ಪಾಕಿಸ್ತಾನ ಬಾಬರ್ ಅಜಂ(97) ಹಾಗೂ ಬೌಲರ್ ಯಾಸಿರ್ ಶಾ ಚೊಚ್ಚಲ ಶತಕ(113) ನೆರವಿನಿಂದ 302 ರನ್ ಗಳಿಸಿ ಸರ್ವಪತನವಾಯಿತು.
287 ರನ್ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದ ಪಾಕಿಸ್ತಾನ ಶಾನ್ ಮಸೂದ್(68), ಅಸಾದ್ ಶಫೀಕ್(57) ಮೊಹಮ್ಮದ್ ರಿಜ್ವಾನ್ (45) ರನ್ ಕೊಡುಗೆಯ ಹೊರತಾಗಿಯೂ 239 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಇನ್ನಿಂಗ್ಸ್ ಸೋಲು ಕಾಣಬೇಕಾಯಿತು.
-
Australia sweep series 2-0!
— ICC (@ICC) December 2, 2019 " class="align-text-top noRightClick twitterSection" data="
Josh Hazlewood's over yielded the last two wickets and Pakistan are bowled out for 239.
The hosts win by an innings and 48 runs.#AUSvPAK SCORECARD 👇https://t.co/hynzrUEFTm pic.twitter.com/0o0mTdZ8kG
">Australia sweep series 2-0!
— ICC (@ICC) December 2, 2019
Josh Hazlewood's over yielded the last two wickets and Pakistan are bowled out for 239.
The hosts win by an innings and 48 runs.#AUSvPAK SCORECARD 👇https://t.co/hynzrUEFTm pic.twitter.com/0o0mTdZ8kGAustralia sweep series 2-0!
— ICC (@ICC) December 2, 2019
Josh Hazlewood's over yielded the last two wickets and Pakistan are bowled out for 239.
The hosts win by an innings and 48 runs.#AUSvPAK SCORECARD 👇https://t.co/hynzrUEFTm pic.twitter.com/0o0mTdZ8kG
ಮೊದಲ ಟೆಸ್ಟ್ ಪಂದ್ಯವನ್ನು ಪಾಕಿಸ್ತಾನ ಇನ್ನಿಂಗ್ಸ್ ಹಾಗೂ 5 ರನ್ಗಳಿಂದ ಕೈಚೆಲ್ಲಿತ್ತು. ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ 60 ಅಂಕ ಹೆಚ್ಚಿಸಿಕೊಂಡು ಒಟ್ಟಾರೆ 176 ಅಂಕಗಳೊಂದಿಗೆ ದ್ವಿತೀಯ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.
ಮೊದಲ ಟೆಸ್ಟ್ನಲ್ಲಿ ಶತಕ ಹಾಗೂ ದ್ವಿತೀಯ ಟೆಸ್ಟ್ನಲ್ಲಿ ತ್ರಿಶತಕ ಸಿಡಿಸಿ ಮಿಂಚಿದ ಡೇವಿಡ್ ವಾರ್ನರ್ ಅರ್ಹವಾಗಿಯೇ ಪಂದ್ಯಶ್ರೇಷ್ಠ ಹಾಗೂ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.
-
Australia opener David Warner is Player of the Match for his sensational triple hundred! 👏#AUSvPAK pic.twitter.com/biGHUrkxSl
— ICC (@ICC) December 2, 2019 " class="align-text-top noRightClick twitterSection" data="
">Australia opener David Warner is Player of the Match for his sensational triple hundred! 👏#AUSvPAK pic.twitter.com/biGHUrkxSl
— ICC (@ICC) December 2, 2019Australia opener David Warner is Player of the Match for his sensational triple hundred! 👏#AUSvPAK pic.twitter.com/biGHUrkxSl
— ICC (@ICC) December 2, 2019