ಮೆಲ್ಬೋರ್ನ್: ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಡಿಸೆಂಬರ್ 17 ರಿಂದ ಅಡಿಲೇಡ್ನಲ್ಲಿ ನಡೆಯುವ ಅಹರ್ನಿಶಿ ಪಂದ್ಯದ ಮೂಲಕ ಬಾರ್ಡರ್ - ಗವಾಸ್ಕರ್ ಟೆಸ್ಟ್ ಸರಣಿ ಪ್ರಾರಂಭಿಸಲಿದ್ದು, ಪ್ರತಿಷ್ಠಿತ ಸರಣಿಗೆ 17 ಆಟಗಾರರ ತಂಡವನ್ನು ಕ್ರಿಕೆಟ್ ಆಸ್ಟ್ರೇಲಿಯಾ ಘೋಷಿಸಿದೆ.
ಸೀನ್ ಅಬಾಟ್, ಮಿಚೆಲ್ ಸ್ವೆಪ್ಸನ್ ಮತ್ತು ಮೈಕೆಲ್ ನೇಸರ್ ಆಸೀಸ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. "ಮಾರ್ಷ್ ಶೆಫೀಲ್ಡ್ ಶೀಲ್ಡ್ನ ಆರಂಭಿಕ ಸುತ್ತಿನಲ್ಲಿ ಹಲವು ಆಟಗಾರರು ಅಸಾಧಾರಣ ಪ್ರದರ್ಶನ ನೀಡಿದ್ದಾರೆ" ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ರಾಷ್ಟ್ರೀಯ ಸೆಲೆಕ್ಟರ್ ಟ್ರೆವರ್ ಹೊನ್ಸ್ ಹೇಳಿದ್ದಾರೆ.
"ಕ್ಯಾಮೆರಾನ್ ಗ್ರೀನ್ ಮತ್ತು ವಿಲ್ ಪುಕೊವ್ಸ್ಕಿ ಉತ್ತಮ ಪ್ರದರ್ಶನ ತೋರಿದ್ದಾರೆ. ಈ ಇಬ್ಬರ ಅದ್ಭುತ ಪ್ರದರ್ಶನದಿಂದಾಗಿ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಯಿತು. ಅತ್ಯಂತ ಪ್ರಬಲ ಎದುರಾಳಿಯ ವಿರುದ್ಧ ಪ್ರಚಂಡ ಟೆಸ್ಟ್ ಸರಣಿಯಾಗಲು ಈ ಯುವಕರನ್ನು ತಂಡದಲ್ಲಿ ಸೇರಿಸಿಕೊಂಡಿರುವುದಕ್ಕೆ ನಾವು ತುಂಬಾ ಸಂತೋಷಪಟ್ಟಿದ್ದೇವೆ" ಎಂದಿದ್ದಾರೆ. ಬಲಗೈ ವೇಗಿ ಪ್ಯಾಟ್ ಕಮ್ಮಿನ್ಸ್ ಟಿಮ್ ಪೇನ್ ನೇತೃತ್ವದ ಟೆಸ್ಟ್ ತಂಡದ ಉಪನಾಯಕನಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಘೋಷಿಸಿದೆ.
"ವೈಟ್ ಬಾಲ್ ತಂಡದಂತೆಯೇ ನಾವು ನಾಯಕ ಮತ್ತು ಉಪನಾಯಕನ ಸಾಂಪ್ರದಾಯಿಕ ನಾಯಕತ್ವದ ಮಾದರಿಗೆ ಹಿಂದಿರುಗಿದ್ದು, ಅನುಭವಿ ಆಟಗಾರರ ಗುಂಪನ್ನು ಹೊಂದಿದ್ದೇವೆ." ಎಂದು ಹೊನ್ಸ್ ಹೇಳಿದ್ದಾರೆ.
ಡ್ರಮ್ಮೊಯ್ನ್ ಓವಲ್ ಮತ್ತು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಪ್ರವಾಸಿ ಭಾರತ ಮತ್ತು ಭಾರತ 'ಎ' ತಂಡದ ವಿರುದ್ಧ ಆಡಲು ಕ್ರಿಕೆಟ್ ಆಸ್ಟ್ರೇಲಿಯಾ ,19 ಆಟಗಾರರ ಆಸ್ಟ್ರೇಲಿಯಾ 'ಎ' ತಂಡವನ್ನು ಆಯ್ಕೆ ಮಾಡಿದೆ. ಇದರಲ್ಲಿ ಟೆಸ್ಟ್ ತಂಡದ ನಾಯಕ ಪೈನ್ ಸೇರಿದಂತೆ ಇತರ 9 ಆಟಗಾರರು ಸ್ಥಾನ ಪಡೆದುಕೊಂಡಿದ್ದಾರೆ.
-
JUST IN: Australia have announced their Test squad to face India #AUSvIND
— cricket.com.au (@cricketcomau) November 12, 2020 " class="align-text-top noRightClick twitterSection" data="
Full details: https://t.co/naLfIBuML4 pic.twitter.com/R2zhIR7X0m
">JUST IN: Australia have announced their Test squad to face India #AUSvIND
— cricket.com.au (@cricketcomau) November 12, 2020
Full details: https://t.co/naLfIBuML4 pic.twitter.com/R2zhIR7X0mJUST IN: Australia have announced their Test squad to face India #AUSvIND
— cricket.com.au (@cricketcomau) November 12, 2020
Full details: https://t.co/naLfIBuML4 pic.twitter.com/R2zhIR7X0m
ಆಸ್ಟ್ರೇಲಿಯಾ ತಂಡ: ಸೀನ್ ಅಬಾಟ್, ಜೋ ಬರ್ನ್ಸ್, ಪ್ಯಾಟ್ ಕಮ್ಮಿನ್ಸ್, ಕ್ಯಾಮೆರಾನ್ ಗ್ರೀನ್, ಜೋಶ್ ಹೇಜಲ್ವುಡ್, ಟ್ರಾವಿಸ್ ಹೆಡ್, ಮಾರ್ನಸ್ ಲಾಬುಶೇನ್, ನಾಥನ್ ಲಿಯಾನ್, ಮೈಕೆಲ್ ನೇಸರ್, ಟಿಮ್ ಪೇನ್ (ನಾಯಕ), ಜೇಮ್ಸ್ ಪ್ಯಾಟಿನ್ಸನ್, ವಿಲ್ ಪುಕೊವ್ಸ್ಕಿ, ಸ್ಟೀವ್ ಸ್ಮಿತ್, ಮಿಚೆಲ್ ಸ್ಟೆಪ್ಸನ್ , ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್
ಆಸ್ಟ್ರೇಲಿಯಾ 'ಎ' ತಂಡ: ಸೀನ್ ಅಬಾಟ್, ಆಷ್ಟನ್ ಅಗರ್, ಜೋ ಬರ್ನ್ಸ್, ಜಾಕ್ಸನ್ ಬರ್ಡ್, ಅಲೆಕ್ಸ್ ಕ್ಯಾರಿ (ಕೀಪರ್), ಹ್ಯಾರಿ ಕಾನ್ವೇ, ಕ್ಯಾಮೆರಾನ್ ಗ್ರೀನ್, ಮಾರ್ಕಸ್ ಹ್ಯಾರಿಸ್, ಟ್ರಾವಿಸ್ ಹೆಡ್, ಮೊಯಿಸಸ್ ಹೆನ್ರಿಕ್ಸ್, ನಿಕ್ ಮ್ಯಾಡಿನ್ಸನ್, ಮಿಚೆಲ್ ಮಾರ್ಷ್, ಮೈಕೆಲ್ ನೇಸರ್, ಟಿಮ್ ಪೇನ್, ಜೇಮ್ಸ್ ಪ್ಯಾಟಿನ್ಸನ್, ವಿಲ್ ಪುಕೊವ್ಸ್ಕಿ, ಮಾರ್ಕ್ ಸ್ಟೆಕೆಟೀ, ವಿಲ್ ಸದರ್ಲ್ಯಾಂಡ್, ಮಿಚೆಲ್ ಸ್ವೆಪ್ಸನ್