ETV Bharat / sports

ಕ್ಲೈರ್​ ಪೊಲೊಸಕ್​​: ಇವರೇ ಪುರುಷರ ಟೆಸ್ಟ್ ​ಪಂದ್ಯಕ್ಕೆ ಮೊದಲ ಮಹಿಳಾ ಅಂಪೈರ್​! - ಮೊದಲ ಮಹಿಳಾ ಅಂಪೈರ್​ ಕ್ಲೈರ್ ಪೊಲೊಸಕ್​

ಈಗಾಗಲೇ ನ್ಯೂ ಸೌತ್​ ವೇಲ್ಸ್​ನ 32 ವರ್ಷ ಪೊಲೊಸಕ್ 2019ರಲ್ಲಿ​ ಐಸಿಸಿಯ ಡಿವಿಜನ್ 2 ಲೀಗ್​ನಲ್ಲಿ ನಮೀಬಿಯಾ ಮತ್ತು ಓಮನ್​ ನಡುವಿನ ಪಂದ್ಯದಲ್ಲಿ ಪುರುಷರ ಏಕದಿನ ಪಂದ್ಯಕ್ಕೆ ಮೈದಾನದ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ.

ಕ್ಲೈರ್​ ಪೊಲೊಸಕ್​​
ಕ್ಲೈರ್​ ಪೊಲೊಸಕ್​​
author img

By

Published : Jan 6, 2021, 8:11 PM IST

ಸಿಡ್ನಿ: ಆಸ್ಟ್ರೇಲಿಯಾದ ಕ್ಲೈರ್​ ಪೊಲೊಸಕ್​ ಭಾರತ vs ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್​ ಪಂದ್ಯದಲ್ಲಿ 4ನೇ ಅಂಪೈರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಮೂಲಕ ಪುರುಷರ ಟೆಸ್ಟ್​ ಪಂದ್ಯಕ್ಕೆ ಅಂಪೈರ್ ಆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ನ್ಯೂ ಸೌತ್​ ವೇಲ್ಸ್​ನ ಪೊಲೊಸಕ್ 2019ರಲ್ಲಿ​ ಐಸಿಸಿಯ ಡಿವಿಜನ್ 2 ಲೀಗ್​ನಲ್ಲಿ ನಮೀಬಿಯಾ ಮತ್ತು ಓಮನ್​ ನಡುವಿನ ಪಂದ್ಯದಲ್ಲಿ ಪುರುಷರ ಏಕದಿನ ಪಂದ್ಯಕ್ಕೆ ಮೈದಾನದ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದರು.

ಗುರುವಾರ ನಡೆಯಲಿರುವ ಬಾರ್ಡರ್​ ಗಾವಸ್ಕರ್​ ಟೂರ್ನಿಯ 3ನೇ ಪಂದ್ಯದಲ್ಲಿ 4ನೇ ಅಂಪೈರ್ ಆಗಿ ಕಾರ್ಯ ನಿರ್ವಹಿಸುವ ಮೂಲಕ ದೀರ್ಘಮಾದರಿಯ ಕ್ರಿಕೆಟ್​ನಲ್ಲೂ ತಮ್ಮ ಚಾಪು ಮೂಡಿಸಲಿದ್ದಾರೆ.

ಕ್ಲೈರ್​ ಪೊಲೊಸಕ್​​
ಕ್ಲೈರ್​ ಪೊಲೊಸಕ್​​

ಈ ಪಂದ್ಯದ ಫೀಲ್ಡ್​ ಅಂಪೈರ್​ ಆಗಿ ಮಾಜಿ ವೇಗಿ ಪಾಲ್​ ರೀಫಲ್​ ಮತ್ತು ಪಾಲ್​ ವಿಲ್ಸನ್​ ಹಾಗೂ ಟಿವಿ ಅಂಪೈರ್​ ಆಗಿ ಬ್ರಸ್​ ಆಕ್ಸೆನ್​ಫೋರ್ಡ್​ ಕಾರ್ಯನಿರ್ವಹಿಸಲಿದ್ದಾರೆ. ಆಸ್ಟ್ರೇಲಿಯಾದ ಡೇವಿಡ್ ಬೂನ್​ ಮ್ಯಾಚ್​ ರೆಫ್ರಿಯಾಗಿದ್ದಾರೆ.

ಓದಿ: ಪುರುಷರ ಕ್ರಿಕೆಟ್​ ಪಂದ್ಯಕ್ಕೆ ಮಹಿಳೆ ಅಂಪೈರ್​​! ಕ್ಲೈರ್​ ಪೊಲೊಸಾಕ್ ಇತಿಹಾಸ ಸೃಷ್ಟಿ

ಐಸಿಸಿ ನಿಯಮಗಳ ಪ್ರಕಾರ, ಟೆಸ್ಟ್ ಪಂದ್ಯಗಳ ನಾಲ್ಕನೇ ಅಂಪೈರ್ ಅನ್ನು ತಮ್ಮ ದೇಶದಿಂದ ಐಸಿಸಿ ಅಂಪೈರ್​ಗಳ ಅಂತಾರಾಷ್ಟ್ರೀಯ ಸಮಿತಿಗೆ ನಾಮಿನಿಗಳಾಗಿರುವವರನ್ನು ಆತಿಥೇಯ ಕ್ರಿಕೆಟ್ ಮಂಡಳಿ ನೇಮಿಸುತ್ತದೆ.

ನ್ಯೂ ಸೌತ್ ವೇಲ್ಸ್‌ನ ಗೌಲ್ಬರ್ನ್ ನಗರದ ನಿವಾಸಿಯಾಗಿರುವ ಪೊಲೊಸಾಕ್, ಆಸ್ಟ್ರೇಲಿಯಾದಲ್ಲಿ ನಡೆದ ಪುರುಷರ ಲಿಸ್ಟ್​ ಎ ಕ್ರಿಕೆಟ್​ನಲ್ಲಿ ಕಾರ್ಯನಿರ್ವಹಿಸಿದ ಮೊದಲ ಮಹಿಳಾ ಅಧಿಕಾರಿ ಎಂಬ ಹಿರಿಮೆಯೂ ಇವರಿಗಿದೆ.

ಪಂದ್ಯದ ನಡುವೆ ಮೈದಾನದ ಅಂಪೈರ್​ಗೆ ಏನಾದರೂ ಸಮಸ್ಯೆಯಾದರೆ ಮೂರನೇ ಅಂಪೈರ್​ ಮೈದಾನಕ್ಕೆ ಬರಲಿದ್ದು, ಈ ವೇಳೆ 4ನೇ ಅಂಪೈರ್​ ಮೂರನೇ ಅಂಪೈರ್​ ಆಗಿ ಕಾರ್ಯ ನಿರ್ವಹಿಸಲು ಅವಕಾಶವಿದೆ.

ಓದಿ: ತಂಡವನ್ನು ಬಿಟ್ಟು ಹೋಗಲು ದುಃಖವಾಗುತ್ತಿದೆ, ಮುಂದಿನ 2 ಪಂದ್ಯಗಳಿಗೆ ಶುಭವಾಗಲಿ: ಕೆ.ಎಲ್.ರಾಹುಲ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.