ಸಿಡ್ನಿ: ಸೆಪ್ಟೆಂಬರ್ ತಿಂಗಳಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಸೀಮಿತ ಓವರ್‌ಗಳ ಸರಣಿಗಾಗಿ 26 ಮಂದಿಯ ಆಸ್ಟ್ರೇಲಿಯಾ ಪ್ರಾಥಮಿಕ ತಂಡದಲ್ಲಿ ಡೇನಿಯಲ್ ಸ್ಯಾಮ್ಸ್, ರಿಲೆ ಮೆರೆಡಿತ್ ಮತ್ತು ಜೋಶ್ ಫಿಲಿಪ್ ಅವರನ್ನು ಸೇರಿಸಿಕೊಳ್ಳಲಾಗಿದೆ.
ಕಳೆದ ಅಕ್ಟೋಬರ್‌ನಿಂದ ಆಸ್ಟ್ರೇಲಿಯಾ ಪರ ಆಡದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ತಂಡದಿಂದ ದೂರ ಉಳಿದಿದ್ದು, ಪೀಟರ್ ಹ್ಯಾಂಡ್ಸ್‌ಕಾಂಬ್, ಶಾನ್ ಮಾರ್ಷ್ ಮತ್ತು ನಾಥನ್ ಕೌಲ್ಟರ್-ನೈಲ್ ಅವರನ್ನು ಪಟ್ಟಿಯಿಂದ ಹೊರಗಿಡಲಾಗಿದೆ. ಮಾರ್ಕಸ್ ಸ್ಟೋಯ್ನಿಸ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ.
ಕ್ರಿಕೆಟ್ ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಸೆಪ್ಟೆಂಬರ್‌ನಲ್ಲಿ ಯುಕೆಯಲ್ಲಿ ಸೀಮಿತ ಓವರ್‌ಗಳ ಸರಣಿ ಆಯೋಜಿಸುವ ಬಗ್ಗೆ ಚರ್ಚೆಯಲ್ಲಿವೆ.
ಈ ಕುರಿತು ಪ್ರತಿಕ್ರಿಯಿಸಿದ ಕ್ರಿಕೆಟ್ ಆಸ್ಟ್ರೇಲಿಯಾದ ರಾಷ್ಟ್ರೀಯ ತಂಡಗಳ ಕಾರ್ಯನಿರ್ವಾಹಕ ಜನರಲ್ ಮ್ಯಾನೇಜರ್ ಬೆನ್ ಆಲಿವರ್, ಸರಣಿ ಆಯೋಜಿಸಲು ಕೆಲವೊಂದು ಅಡೆತಡೆಗಳಿವೆ ಎಂಬುದನ್ನು ಒಪ್ಪಿಕೊಂಡಿದ್ದು, ಏನೆಲ್ಲ ಪ್ರಯತ್ನಗಳನ್ನು ಮಾಡಲು ಸಾಧ್ಯವಿದೆಯೋ ಅವುಗಳನ್ನು ಮಾಡಲಾಗುವುದು ಎಂದಿದ್ದಾರೆ. ಅಲ್ಲದೆ, ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ (ಇಸಿಬಿ) ಅತ್ಯುತ್ತಮ ಕ್ರಿಕೆಟ್ ಪಾಲುದಾರರಾಗಿದ್ದು, ಸರಣಿ ಆಯೋಜಿಸಲು ಎಲ್ಲಾ ಸಹಕಾರವನ್ನು ನಾವು ನೀಡುತ್ತೇವೆ ಎಂದು ಹೇಳಿದ್ದಾರೆ.
ಸರಣಿ ಆಯೋಜನೆ ಬಗ್ಗೆ ಇಸಿಬಿ ಮತ್ತು ಸರ್ಕಾರದೊಂದಿಗೆ ಸೇರಿ ನಾವು ಕೆಲಸ ಮಾಡುತ್ತಿದ್ದೇವೆ. ಸರಿಯಾದ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಈ ನಡುವೆ ಆಟಗಾರರ ಗುರುತಿಸುವಿಕೆ ಮತ್ತು ಪ್ರವಾಸದ ಸಿದ್ಧತೆ ಮಾಡಿಕೊಳ್ಳುವ ಸಲುವಾಗಿ ತಂಡದ ಪ್ರಾಥಮಿಕ ಪಟ್ಟಿ ಪ್ರಕಟ ಮಾಡಲಾಗಿದೆ ಎಂದು ಆಲಿವರ್ ತಿಳಿಸಿದ್ದಾರೆ.
ಆಸ್ಟ್ರೇಲಿಯಾದ ಪ್ರಾಥಮಿಕ ತಂಡ:
ಸೀನ್ ಅಬಾಟ್, ಆ್ಯಷ್ಟನ್ ಅಗರ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮ್ಮಿನ್ಸ್, ಆ್ಯರನ್ ಫಿಂಚ್, ಜೋಶ್ ಹ್ಯಾಝಲ್‌ವುಡ್, ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್‌ಚಾಗ್ನೆ, ನಾಥನ್ ಲಿಯಾನ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಬೆನ್ ಮೆಕ್‌ಡರ್ಮೊಟ್, ರಿಲೆ ಮೆರೆಡಿತ್, ಮೈಕೆಲ್ ನೇಸರ್, ಜೋಶ್ ಫಿಲಿಪ್, ಡೇನಿಯಲ್ ಸ್ಯಾಮ್ಸ್, ಡಿ'ಆರ್ಸಿ ಶಾರ್ಟ್, ಕೇನ್ ರಿಚರ್ಡ್ಸನ್, ಸ್ಟೀವನ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಆಂಡ್ರ್ಯೂ ಟೈ, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್, ಆಡಮ್ ಜಂಪಾ