ಸಿಡ್ನಿ: ವಿಶ್ವಕಪ್ನಲ್ಲಿ ವಿಕೆಟ್ ಕೀಪಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಿದ್ದ ಅಲೆಕ್ಸ್ ಕ್ಯಾರಿಯನ್ನು ಕ್ರಿಕೆಟ್ ಆಗಸ್ಟ್ 1ರಿಂದ ಆರಂಭವಾಗಲಿರುವ ಆ್ಯಶಸ್ ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾ ಆಯ್ಕೆ ಸಮಿತಿ ಪರಿಗಣಸದೇ ಇರುವುದನ್ನು ಹಲವಾರು ಮಾಜಿ ಕ್ರಿಕೆಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಶನಿವಾರ ಪ್ರಕಟಗೊಂಡ ಆಸೀಸ್ ತಂಡದಲ್ಲಿ ಬಾಲ್ ಟ್ಯಾಂಪರಿಂಗ್ ಪ್ರಕರಣದಿಂದ ಒಂದು ವರ್ಷ ನಿಷೇಧದಿಂದ ಹೊರಬಂದಿರುವ ವಾರ್ನರ್, ಸ್ಮಿತ್ ಹಾಗೂ ಬ್ಯಾನ್ಕ್ರಾಫ್ಟ್ ಜೊತೆಗೆ ಮ್ಯಾಥ್ಯೂ ವೇಡ್ ಅವರಿಗೂ ತಂಡದಲ್ಲಿ ಅವಕಾಶ ನೀಡಲಾಗಿದೆ. ಆದರೆ, ಉತ್ತಮ ಪ್ರದರ್ಶನದ ಹೊರತಾಗಿಯೂ ಅಲೆಕ್ಸ್ ಕ್ಯಾರಿ, ಜೋ ಬರ್ನ್ಸ್, ಕರ್ಟಿಸ್ ಪ್ಯಾಟರ್ಸನ್ ಅವರನ್ನು ತಂಡದಿಂದ ಕೈಬಿಟ್ಟಿರುವುದಕ್ಕೆ ಮಾಜಿ ನಾಯಕ ಸ್ಟಿವ್ ವಾ ಹಾಗೂ ಮಾಜಿ ಬೌಲರ್ ಶೇನ್ ವಾರ್ನ್ ಬೇಸರ ವ್ಯಕ್ತಪಡಿಸಿದ್ದಾರೆ.
ಅಲೆಕ್ಸ್ ಕ್ಯಾರಿ ಆ್ಯಶಸ್ ಸರಣಿಗೆ ಆಯ್ಕೆಯಾಗದಿರುವುದು ನನಗೆ ಬಹುದೊಡ್ಡ ಆಘಾತ ತಂದಿದೆ. ವಿಶ್ವಕಪ್ನಲ್ಲಿ ಕ್ಯಾರಿ ಬ್ಯಾಟಿಂಗ್ ಹಾಗೂ ಕೀಪಿಂಗ್ನಲ್ಲಿ ಮಿಂಚಿದ ಎರಡನೇ ಬೆಸ್ಟ್ ಕೀಪರ್ ಆಗಿಯೂ ಅವರನ್ನು ಆಯ್ಕೆ ಮಾಡದಿರುವುದು ನಿಜಕ್ಕೂ ಆಶ್ಚರ್ಯ ತಂದಿದೆ ಎಂದು ಸ್ಟಿವ್ ವಾ ಟ್ವೀಟ್ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ಪಿನ್ ದಿಗ್ಗಜ ವಾರ್ನ್" ಆ್ಯಶಸ್ಗೆ ಕ್ಯಾರಿಯನ್ನು ಆಯ್ಕೆ ಮಾಡದಿರುವುದು ಆಶ್ಚರ್ಯ ಹಾಗೂ ನೋವುಂಟು ಮಾಡಿದೆ ಎಂದು ತಮ್ಮ ಇನ್ಸ್ಟಾಗ್ರಾಂನಲ್ಲಿ ತಿಳಿಸಿದ್ದಾರೆ.
ಇನ್ನು ಕಳೆದ ಶ್ರೀಲಂಕಾ ಸರಣಿಯ ವೇಳೆ ಶತಕ ಸಿಡಿಸಿದ್ದ ಜೋ ಬರ್ನ್ಸ್ ಹಾಗೂ ಕರ್ಟಿಸ್ ಪ್ಯಾಟರ್ಸನ್ರನ್ನು ಆಯ್ಕೆ ಮಾಡದಿರುವುದಕ್ಕೆ ಕಾರಣವಿದ್ದರೂ, ಅವರ ಬಳಿ ನೀವು ಕ್ಷಮೆ ಕೇಳಬೇಕು ಎಂದು ಆಸೀಸ್ ಮಾಜಿ ನಾಯಕ ಟೇಲರ್ ತಿಳಿಸಿದ್ದಾರೆ.