ಅಬುಧಾಬಿ: 5 ಬಾರಿಯ ವಿಶ್ವಚಾಂಪಿಯನ್ ಆಸ್ಟ್ರೇಲಿಯಾ ತನ್ನ ಗತವೈಭವದ ಹಳಿಗೆ ಮರಳಿದೆ. ಪಾಕಿಸ್ತಾನದ ತಂಡದ ವಿರುದ್ಧವೂ ಸರಣಿ ಇನ್ನು 2 ಪಂದ್ಯಗಳಿರುವಂತೆ ಸರಣಿ ವಶಪಡಿಸಿಕೊಂಡಿದೆ.
ಬುಧವಾರ ಅಬುಧಾಬಿಯಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಫಿಂಚ್ ಪಡೆ 80 ರನ್ಗಳ ಭರ್ಜರಿ ಜಯಸಾಧಿಸಿತು.
Australia seal the series win with a 3-0 lead!
— ICC (@ICC) March 27, 2019 " class="align-text-top noRightClick twitterSection" data="
Adam Zampa takes his ODI best 4/43 while Pat Cummins takes 3/24 as Pakistan are bowled out for 186 - Australia win by 80 runs in Abu Dhabi!#PAKvAUS LIVE ➡️ https://t.co/RtB0aBmSyQ pic.twitter.com/veLOTkp7ze
">Australia seal the series win with a 3-0 lead!
— ICC (@ICC) March 27, 2019
Adam Zampa takes his ODI best 4/43 while Pat Cummins takes 3/24 as Pakistan are bowled out for 186 - Australia win by 80 runs in Abu Dhabi!#PAKvAUS LIVE ➡️ https://t.co/RtB0aBmSyQ pic.twitter.com/veLOTkp7zeAustralia seal the series win with a 3-0 lead!
— ICC (@ICC) March 27, 2019
Adam Zampa takes his ODI best 4/43 while Pat Cummins takes 3/24 as Pakistan are bowled out for 186 - Australia win by 80 runs in Abu Dhabi!#PAKvAUS LIVE ➡️ https://t.co/RtB0aBmSyQ pic.twitter.com/veLOTkp7ze
ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಆಸಿಸ್ ತಂಡಕ್ಕೆ ನಾಯಕ ಆ್ಯರೋನ್ ಫಿಂಚ್ 90, ಪೀಟರ್ ಹ್ಯಾಂಡ್ಸ್ಕಾಂಬ್ 47, ಗ್ಲೇನ್ ಮ್ಯಾಕ್ಸ್ವೆಲ್ 71ರನ್ ಗಳಿಸಿ 266 ರನ್ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು.
ಪಾಕಿಸ್ತಾನದ ಪರ ಉಸ್ಮಾನ್ ಶೇನ್ವಾರಿ, ಜುನೈದ್ಖಾನ್, ಯಾಸಿರ್ ಶಾ, ಇಮಾದ್ ವಾಸಿಂ, ಹ್ಯಾರಿಸ್ ಸೊಹೈಲ್ ತಲಾ ಒಂದು ವಿಕೆಟ್ ಪಡೆದರು.
267 ರನ್ಗಳ ಗುರಿ ಪಡೆದ ಪಾಕಿಸ್ತಾನ ಆಸೀಸ್ ಬೌಲಿಂಗ್ ದಾಳಿಗೆ ಸಿಲುಕಿ 44.4 ಓವರ್ಗಳಲ್ಲಿ 186 ರನ್ಗಳಿಗೆ ಆಲೌಟ್ ಆಗುವ ಮೂಲಕ 80 ರನ್ಗಳ ಸೋಲನುಭವಿಸಿತು. ಮಲಿಕ್ 32, ಉಮರ್ ಅಕ್ಮಲ್ 36, ಇಮಾದ್ ವಾಸಿಂ 43 ರನ್ಗಳಿಸಿ ಕೊಂಚ ಪ್ರತಿರೋಧ ತೋರಿದರೂ ಗೆಲುವು ಸಾಧಿಸಲಾಗಲಿಲ್ಲ.
ಪ್ಯಾಟ್ ಕಮಿನ್ಸ್ 3, ಆ್ಯಂಡಂ ಜಂಪಾ 4 ,ಮ್ಯಾಕ್ಸ್ವೆಲ್, ಬೆಹ್ರೆನ್ಡ್ರಾಫ್, ಲಿಯಾನ್ ತಲಾ ಒಂದು ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.