ವೆಲ್ಲಿಂಗ್ಟನ್: ಆತಿಥೇಯ ನ್ಯೂಜಿಲ್ಯಾಂಡ್ ವಿರುದ್ಧ ನಡೆದ 4ನೇ ಟಿ-20 ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 50 ರನ್ಗಳ ಗೆಲುವು ಸಾಧಿಸುವ ಮೂಲಕ 5 ಪಂದ್ಯಗಳ ಕ್ರಿಕೆಟ್ ಸರಣಿಯಲ್ಲಿ 2-2 ಅಂತರದ ಸಮಬಲ ಸಾಧಿಸಿದ್ದು, ಕೊನೆ ಪಂದ್ಯ ರೋಚಕತೆ ಪಡೆದುಕೊಂಡಿದೆ.
-
A clinical performance from Australia as they bowl New Zealand out for 106 to set up a 50-run win in the fourth #NZvAUS T20I.
— ICC (@ICC) March 5, 2021 " class="align-text-top noRightClick twitterSection" data="
The series is well and truly alive!
📝 Scorecard: https://t.co/vHY5nULqOo pic.twitter.com/6PaQJ9OAiy
">A clinical performance from Australia as they bowl New Zealand out for 106 to set up a 50-run win in the fourth #NZvAUS T20I.
— ICC (@ICC) March 5, 2021
The series is well and truly alive!
📝 Scorecard: https://t.co/vHY5nULqOo pic.twitter.com/6PaQJ9OAiyA clinical performance from Australia as they bowl New Zealand out for 106 to set up a 50-run win in the fourth #NZvAUS T20I.
— ICC (@ICC) March 5, 2021
The series is well and truly alive!
📝 Scorecard: https://t.co/vHY5nULqOo pic.twitter.com/6PaQJ9OAiy
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ತಂಡದ ಪರ ನಾಯಕ ಆ್ಯರೊನ್ ಫಿಂಚ್(79) ಏಕಾಂಗಿ ಹೋರಾಟ ನಡೆಸಿ 20 ಓವರ್ಗಳಲ್ಲಿ ತಂಡ 156 ರನ್ಗಳಿಕೆ ಮಾಡಲು ಸಹಾಯವಾದರು. ಉಳಿದಂತೆ ಕಾಂಗರೂ ಪಡೆಯ ಯಾವೊಬ್ಬ ಬ್ಯಾಟ್ಸಮನ್ ಕೂಡಾ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ.
ವೇಡ್ (14), ಪಿಲಿಪ್ಪಿ (13),ಮ್ಯಾಕ್ಸ್ವೆಲ್ (18), ಸ್ಟೋನಿಸ್ (19), ಅಗರ್ (0), ಮಾರ್ಷ್ (6) ರನ್ಗಳಿಕೆ ಮಾಡಿದರು. ನ್ಯೂಜಿಲ್ಯಾಂಡ್ ಪರ ಇಶಾ ಸೋದಿ 3 ವಿಕೆಟ್ ಪಡೆದುಕೊಂಡರೆ, ಬೌಲ್ಟ್ 2 ಹಾಗೂ ಸ್ಯಾಂಟ್ನರ್ 1ವಿಕೆಟ್ ಕಬಳಿಸಿದರು.
157 ರನ್ಗಳ ಗುರಿ ಬೆನ್ನತ್ತಿದ್ದ ನ್ಯೂಜಿಲ್ಯಾಂಡ್ ತಂಡ ಆರಂಭದಿಂದಲೂ ಕುಸಿತಕ್ಕೊಳಗಾಯಿತು. ಗಪ್ಟಿಲ್ (7),ಟಿಮ್ ಸೀಫರ್ಟ್ (19), ವಿಲಿಯಮ್ಸನ್ (8), ಡೆವೊನ್ ಕೊನ್ವೆ (17) ರನ್ಗಳಿಕೆ ಮಾಡಿದರು.
ಇದನ್ನೂ ಓದಿ: ಇಂಡಿಯಾ vs ಇಂಗ್ಲೆಂಡ್ 4ನೇ ಟೆಸ್ಟ್: ಹೊಸ ದಾಖಲೆ ಬರೆದ ಹಿಟ್ಮ್ಯಾನ್ ರೋಹಿತ್!
ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬಿಸಿದ ಗ್ಲೇನ್ ಪಿಲಿಪ್ಸ್(1), ಜೇಮ್ಸ್ ನೀಶಮ್(3), ಸ್ಯಾಂಟ್ನರ್ (3), ಸೌಥಿ (6) ಜೇಮೀಸನ್ (30), ಸೋದಿ (0)ಹಾಗೂ ಬೌಲ್ಟ್ (6) ರನ್ಗಳಿಕೆ ಮಾಡಿದರು. ತಂಡ ಕೊನೆಯದಾಗಿ 18.5 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 106 ರನ್ಗಳಿಕೆ ಮಾಡುವಲ್ಲಿ ಮಾತ್ರ ಶಕ್ತವಾಯಿತು. ಜತೆಗೆ 50ರನ್ಗಳ ಸೋಲು ಕಂಡಿದೆ.
ಐದು ಪಂದ್ಯಗಳ ಸರಣಿಯಲ್ಲಿ ಆರಂಭಿಕ ಎರಡು ಪಂದ್ಯಗಳಲ್ಲಿ ಗೆಲುವು ದಾಖಲು ಮಾಡಿದ್ದ ನ್ಯೂಜಿಲ್ಯಾಂಡ್ ತದನಂತರದ ಎರಡು ಪಂದ್ಯಗಳಲ್ಲಿ ಸೋಲು ಕಂಡಿರುವ ಕಾರಣ ಇದೀಗ ಸರಣಿ 2-2 ಅಂತರದಿಂದ ಸಮಗೊಂಡಿದ್ದು, ಫೈನಲ್ ಪಂದ್ಯ ಗೆಲ್ಲುವ ತಂಡ ಪ್ರಶಸ್ತಿಗೆ ಮುತ್ತಿಕ್ಕಲಿದೆ.