ETV Bharat / sports

ಅಮರೇಂದ್ರ ಬಾಹುಬಲಿ ಅನು ನೇನು... ಈ ಸಾರಿ ಪ್ರಭಾಸ್​ ಸಿನಿಮಾ ಡೈಲಾಗ್​ ಹೇಳಿ ಮಿಂಚಿದ ವಾರ್ನರ್​ - Mahesh babu

ಕೊರೊನಾದಿಂದ ಕ್ರಿಕೆಟ್​ ಜಗತ್ತು ಸ್ತಗಿತಗೊಂಡಿದೆ. ಆಟಗಾರರು ತಮ್ಮ ಕುಟುಂಬದವರ ಜೊತೆ ಕಾಲ ಕಳೆಯುತ್ತಿದ್ದರೆ, ಇನ್ನು ಕೆಲವರು ಸಾಮಾಜಿಕ ಜಾಲಾತಾಣದಲ್ಲಿ ಇತರೆ ಆಟಗಾರರೊಂದಿಗೆ ಆನ್​ಲೈನ್​ ಸಂವಾದ ನಡೆಸುತ್ತಿದ್ದಾರೆ.

Australia Batsman warner turns Bahubali in Tik tok
ಡೇವಿಡ್​ ವಾರ್ನರ್​ ಟಿಕ್​ಟಾಕ್​
author img

By

Published : May 17, 2020, 8:37 AM IST

ನವದೆಹಲಿ: ಬ್ಯಾಟಿಂಗ್ ಸ್ಟಾರ್​ ಆಗಿ ಮೈದಾನದಲ್ಲಿದ್ದ ಮೆರೆದಾಡುತ್ತಿದ್ದ ಡೇವಿಡ್​ ವಾರ್ನರ್​ ಇದೀಗ ಹೋಮ್​ ಕ್ವಾರಂಟೈನ್​ನಲ್ಲಿದ್ದು, ಟಿಕ್​​ ಟಾಕ್​ ಸ್ಟಾರ್​ ಆಗಿ ಮಿಂಚುತ್ತಿದ್ದಾರೆ.

ಕೊರೊನಾದಿಂದ ಕ್ರಿಕೆಟ್​ ಜಗತ್ತು ಸ್ತಗಿತಗೊಂಡಿದೆ. ಆಟಗಾರರು ತಮ್ಮ ಕುಟುಂಬದವರ ಜೊತೆ ಕಾಲ ಕಳೆಯುತ್ತಿದ್ದರೆ, ಇನ್ನು ಕೆಲವರು ಸಾಮಾಜಿಕ ಜಾಲಾತಾಣದಲ್ಲಿ ಇತರೆ ಆಟಗಾರರೊಂದಿಗೆ ಆನ್​ಲೈನ್​ ಸಂವಾದ ನಡೆಸುತ್ತಿದ್ದಾರೆ.

ಆದರೆ ಆಸ್ಟ್ರೇಲಿಯಾದ ಡೇವಿಡ್​ ವಾರ್ನರ್​ ಮಾತ್ರ ಬಿಡುವಿನ ಸಮಯವನ್ನು ಸಖತ್ತಾಗಿ ಎಂಜಾಯ್​ ಮಾಡುತ್ತಿದ್ದಾರೆ. ಇತ್ತೀಚೆಗೆ ಟಿಕ್​ಟಾಕ್​ ಖಾತೆ ತೆರೆದಿದ್ದ ಅವರು, ತೆಲುಗು ಹೀರೋಗಳ ಡೈಲಾಗ್​, ಸಾಂಗ್​ಗೆ ಡಬ್ಬಿಂಗ್​ ಮಾಡುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

ಮೊದಲಿಗೆ ಅಲಾ ವೈಕುಂಠಪುರಂ ಲೋ ಚಿತ್ರದ ‘ಬುಟ್ಟ ಬೊಮ್ಮ’ ಗೀತೆಗೆ ತಮ್ಮ ಪತ್ನಿ ಹಾಗೂ ಮಗಳೊಂದಿಗೆ ನೃತ್ಯ ಮಾಡಿದ್ದರು. ನಂತರ ಮಹೇಶ್​ ಬಾಬು ಅವರ ಸಿಗ್ನೇಚರ್​ ಡೈಲಾಗ್​ ಆಗಿರುವ ‘ಒಕ್ಕ ಸಾರಿ ಕಮಿಟ್​ ಆಯ್ತೆ, ನಾ ಮಾತ ನೆನೆ ವಿನ್ನನು’ಹೇಳುವ ಮೂಲಕ ತೆಲುಗು ಅಭಿಮಾನಿಗಳ ಮನಗೆದ್ದಿದ್ದರು.

ಇದೀಗ ಭಾರತದ ಇತಿಹಾಸದಲ್ಲಿ ಅತಿ ಹೆಚ್ಚು ಪ್ರಸಿದ್ದಿಯಾಗಿರುವ ತೆಲುಗು ಸಿನಿಮಾ ಬಾಹುಬಲಿ ಚಿತ್ರದ ಡೈಲಾಗ್​ಗೆ ಟಿಕ್​ಟಾಕ್​ ಮಾಡಿ ಮಿಂಚಿದ್ದಾರೆ. ವಿಶೇಷವೆಂದರೆ ಅವರು ಈ ಬಾರಿ ಬಾಹುಬಲಿಯಂತೆಯೇ ವೇಷ ಧರಿಸಿದ್ದು, ‘ಅಮರೇಂದ್ರ ಬಾಹುಬಲಿ ಅನು ನೇನು’ ಡೈಲಾಗ್​ಗೆ​ ಟಬ್ಬಿಂಗ್​ ಮಾಡಿದ್ದಾರೆ. ಇವರಿಗೆ ಇವರ ಮಗಳು ಕೂಡ ಸಾಥ್​ ನೀಡಿದ್ದಾರೆ. ಈ ವಿಡಿಯೋದಲ್ಲಿ ಈ ಚಿತ್ರ ಯಾವುದು ಎಂದು ಗೆಸ್​ ಮಾಡಿ ಎಂದು ಸನ್​ರೈಸರ್ಸ್​ ಹೈದರಾಬಾದ್​ ಟ್ಯಾಗ್​ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.