ಸಿಡ್ನಿ: ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡ ಐಸಿಸಿ ಮಹಿಳಾ ಟ್ವೆಂಟಿ–20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದು, ಇದರ ಬೆನ್ನಲ್ಲೆ ತಂಡಕ್ಕೆ ಬಹುದೊಡ್ಡ ಹೊಡೆತ ಬಿದ್ದಿದೆ.
ತಂಡದ ಆಲ್ರೌಂಡರ್ ಎಲ್ಲಿಸ್ ಪೆರ್ರಿ ಗಾಯಗೊಂಡು ಹೊರಬಿದ್ದಿದ್ದು, ತಂಡಕ್ಕೆ ತುಂಬಲಾರದ ನಷ್ಟವಾಗಿದೆ. ಇದರ ಜತೆಗೆ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಿಂದಲೂ ಅವರು ಹೊರಗುಳಿಯಲಿದ್ದಾರೆ. ಸ್ಫೋಟಕ ಬ್ಯಾಟ್ಸ್ಮನ್ ಎಂದು ಗುರುತಿಸಿಕೊಂಡಿದ್ದ ಎಲ್ಲಿಸ್ ಪೆರ್ರಿ ನ್ಯೂಜಿಲ್ಯಾಂಡ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಸ್ನಾಯು ಸೆಳೆತಕ್ಕೊಳಗಾಗಿ ಪಂದ್ಯದಿಂದ ಅರ್ಧದಲ್ಲೇ ಹೊರ ನಡೆದಿದ್ದರು.
-
Ellyse Perry has been ruled out of the remainder of the T20 World Cup after sustaining a hamstring injury against New Zealand yesterday 💔 pic.twitter.com/uT5JImJwO1
— Australian Women's Cricket Team 🏏 (@AusWomenCricket) March 3, 2020 " class="align-text-top noRightClick twitterSection" data="
">Ellyse Perry has been ruled out of the remainder of the T20 World Cup after sustaining a hamstring injury against New Zealand yesterday 💔 pic.twitter.com/uT5JImJwO1
— Australian Women's Cricket Team 🏏 (@AusWomenCricket) March 3, 2020Ellyse Perry has been ruled out of the remainder of the T20 World Cup after sustaining a hamstring injury against New Zealand yesterday 💔 pic.twitter.com/uT5JImJwO1
— Australian Women's Cricket Team 🏏 (@AusWomenCricket) March 3, 2020
ಪೆರ್ರಿ ಮಹಿಳೆಯರ ಬಿಗ್ಬ್ಯಾಶ್ನಲ್ಲಿ ಫೀಲ್ಡಿಂಗ್ ವೇಳೆ ಬಲ ಭುಜದ ಗಾಯಕ್ಕೆ ತುತ್ತಾಗಿ ಟೂರ್ನಿಯಿಂದಲೇ ಹೊರಬಿದ್ದಿದ್ದರು. ನಂತರ ಫಿಟ್ನೆಸ್ ಪರೀಕ್ಷೆ ಪಾಸ್ ಮಾಡಿ ರಾಷ್ಟ್ರೀಯ ತಂಡಕ್ಕೆ ಮರಳಿದ್ದರು. ಇದೀಗ ಮತ್ತೆ ಗಾಯಗೊಂಡಿರುವುದು ನಿಜಕ್ಕೂ ಹಾಲಿ ಚಾಂಪಿಯನ್ನರಿಗೆ ಭಾರಿ ಆಘಾತವಾಗಿದೆ.
-
The only sour note on an otherwise excellent day for Australia 😰 #AUSvNZ | #T20WorldCup pic.twitter.com/P7L9p85L58
— T20 World Cup (@T20WorldCup) March 2, 2020 " class="align-text-top noRightClick twitterSection" data="
">The only sour note on an otherwise excellent day for Australia 😰 #AUSvNZ | #T20WorldCup pic.twitter.com/P7L9p85L58
— T20 World Cup (@T20WorldCup) March 2, 2020The only sour note on an otherwise excellent day for Australia 😰 #AUSvNZ | #T20WorldCup pic.twitter.com/P7L9p85L58
— T20 World Cup (@T20WorldCup) March 2, 2020
ಇದೀಗ ಅವರು ವಿಶ್ವಕಪ್ ಟೂರ್ನಿಯಿಂದ ಹೊರಗುಳಿಯುತ್ತಿರುವುದರ ಬಗ್ಗೆ ಕೋಚ್ ಮ್ಯಾಥೂವ್ ಮೂಟ್ ಮಾಹಿತಿ ನೀಡಿದ್ದು, ಆಕೆಯ ಸೇವೆ ತಂಡಕ್ಕೆ ತುಂಬಲಾರದ ನಷ್ಟ ಎಂಬುದನ್ನ ಒಪ್ಪಿಕೊಂಡಿದ್ದಾರೆ.