ಅಡಿಲೇಡ್: ಪ್ರಸ್ತುತ ಪಾಕಿಸ್ತಾನ ವಿರುದ್ಧ ಅಡಿಲೇಡ್ ಮೈದಾನದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ನ ಎರಡನೇ ದಿನದಾಟದಲ್ಲಿ ತ್ರಿಶತಕ ಸಿಡಿಸಿ ಮಿಂಚಿದ್ದ ಆಸೀಸ್ ಆರಂಭಿಕ ಆಟಗಾರ ಡೇವಿಡ್ ವಾರ್ನರ್, ಲಾರಾ ದಾಖಲೆಯ ಬಗ್ಗೆ ಮಾತನಾಡಿದ್ದಾರೆ.
ವಿಂಡೀಸ್ ಮಾಜಿ ಆಟಗಾರ ಬ್ರಿಯಾನ್ ಲಾರಾ ಟೆಸ್ಟ್ ಇತಿಹಾಸ ಗರಿಷ್ಠ ವೈಯಕ್ತಿಕ ಗಳಿಕೆಯನ್ನು(400) ಮುರಿಯಲು ಟೀಂ ಇಂಡಿಯಾದ ರೋಹಿತ್ ಶರ್ಮಾರಿಂದ ಸಾಧ್ಯ ಎಂದು ವಾರ್ನರ್ ಭವಿಷ್ಯ ನುಡಿದ್ದಾರೆ.
ವಾರ್ನರ್ 335ರನ್ ಗಳಿಸಿದ್ದ ವೇಳೆ ನಾಯಕ ಟಿಮ್ ಪೇನ್ ಇನ್ನಿಂಗ್ಸ್ ಡಿಕ್ಲೇರ್ ಮಾಡಿದ್ದರಿಂದ ಐತಿಹಾಸಿಕ ದಾಖಲೆ ವಾರ್ನರ್ ಕೈತಪ್ಪಿತ್ತು. ಪಂದ್ಯದ ಬಳಿಕ ಲಾರಾ ದಾಖಲೆ ಬಗ್ಗೆ ಮಾತನಾಡುತ್ತಾ ವಾರ್ನರ್, ಒಂದಲ್ಲ ಒಂದು ದಿನ ಆ ದಾಖಲೆ ಬ್ರೇಕ್ ಆಗಲಿದೆ. ಆ ರೆಡಾರ್ಕ್ ನನ್ನ ಪ್ರಕಾರ ರೋಹಿತ್ ಶರ್ಮಾ ಮುರಿಯಲಿದ್ದಾರೆ ಎಂದು ಹೇಳಿದ್ದಾರೆ.
ರೋಹಿತ್ ಶರ್ಮಾ ಈಗಾಗಲೇ ಏಕದಿನ ಪಂದ್ಯದಲ್ಲಿ ಸರ್ವಾಧಿಕ ಗಳಿಕೆ (264) ದಾಖಲೆ ಹೊಂದಿದ್ದು, ಟೆಸ್ಟ್ನಲ್ಲೂ ಈ ದಾಖಲೆಯನ್ನು ಮುಂದೊಂದು ದಿನ ಬರೆಯಲಿದ್ದಾರೆ ಎಂದು ವಾರ್ನರ್ ಹೇಳಿದ್ದಾರೆ.