ಅಡಿಲೇಡ್: ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಭಾರತದಿಂದ ಉತ್ತಮ ಸ್ಪರ್ಧೆಯನ್ನು ನಿರೀಕ್ಷಿಸಿದ್ವಿ, ಇಷ್ಟು ಬೇಗ ಪಂದ್ಯ ಮುಕ್ತಾರವಾಗುತ್ತದೆ ಎಂದು ತಿಳಿದಿರಲಿಲ್ಲ ಎಂದು ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಟಿಮ್ ಪೈನ್ ಹೇಳಿದ್ದಾರೆ.
ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ 1-0 ಮುನ್ನಡೆ ಸಾಧಿಸಿದ್ದು, ಪಂದ್ಯ ಮುಗಿದ ಬಳಿಕ ಮಾತನಾಡಿದ ಆಸಿಸ್ ನಾಯಕ "ಎರಡೂ ತಂಡಗಳು ವೇಗವಾಗಿ ವಿಕೆಟ್ ಪಡೆಯುವ ಸಾಮರ್ಥ್ಯ ಹೊಂದಿವೆ ಎಂದು ತಿಳಿದಿದೆ. ಆದರೆ, ಇಷ್ಟು ಬೇಗ ಫಲಿತಾಂಶ ಕಾಣುತ್ತದೆ ಎಂದು ತಿಳಿದಿರಲಿಲ್ಲ. ನಾನು ನಿಜವಾಗ ನಾಯಿಗಳ ಕಾದಾಟ(dogfight) ನಿರೀಕ್ಷಿಸಿದ್ದೆ" ಎಂದಿದ್ದಾರೆ.
-
The Vodafone Player of the Match is Aussie skipper Tim Paine for his crucial knock and outstanding work behind the stumps! #AUSvIND pic.twitter.com/dtKyBorruO
— cricket.com.au (@cricketcomau) December 19, 2020 " class="align-text-top noRightClick twitterSection" data="
">The Vodafone Player of the Match is Aussie skipper Tim Paine for his crucial knock and outstanding work behind the stumps! #AUSvIND pic.twitter.com/dtKyBorruO
— cricket.com.au (@cricketcomau) December 19, 2020The Vodafone Player of the Match is Aussie skipper Tim Paine for his crucial knock and outstanding work behind the stumps! #AUSvIND pic.twitter.com/dtKyBorruO
— cricket.com.au (@cricketcomau) December 19, 2020
"ಸಿಕ್ಕ ಅವಕಾಶ ಬಳಸಿಕೊಂಡ ನಮ್ಮ ಬೌಲರ್ಗಳು ಉತ್ತಮ ಪ್ರದರ್ಶನ ತೋರಿದ್ರು. ಸರಣಿಯಲ್ಲಿ ಉತ್ತಮ ಆರಂಭ ದೊರಕಿದ್ದು, ಸಂತೋಷವಾಗಿದೆ. ಆರಂಭಿಕ ಆಟಗಾರ ಬರ್ನ್ಸ್ ನಮ್ಮ ತಂಡದ ಪ್ರಮುಖ ಭಾಗವಾಗಿದ್ದಾರೆ. ಉತ್ತಮ ಬೌಲಿಂಗ್ ಪ್ರದರ್ಶನದ ನಡುವೆ ಬ್ಯಾಟಿಂಗ್ನತ್ತ ಕೊಂಚ ಗಮನ ಹರಿಸಬೇಕಿದೆ" ಎಂದು ತಿಳಿಸಿದ್ದಾರೆ. ಮೊದಲ ಇನ್ನಿಂಗ್ಸ್ನಲ್ಲಿ ಅಜೇಯ 73 ರನ್ ಗಳಿಸಿದ್ದ ಟಿಮ್ ಪೈನ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಓದಿ ಮೊದಲ ಟೆಸ್ಟ್ನಲ್ಲಿ ಮುಗ್ಗರಿಸಿದ ಟೀಂ ಇಂಡಿಯಾ.. ಆಸ್ಟ್ರೇಲಿಯಾಗೆ 8 ವಿಕೆಟ್ಗಳ ಭರ್ಜರಿ ಜಯ
ಮೊದಲ ಇನ್ನಿಂಗ್ಸ್ನಲ್ಲಿ ಭಾರತ 244 ರನ್ಗಳಿಸಿದ್ರೆ, ಆಸ್ಟ್ರೇಲಿಯಾ ತಂಡ 191 ರನ್ ಗಳಿಗೆ ಸರ್ವಪತನ ಕಂಡಿತ್ತು. ದ್ವೀತೀಯ ಇನ್ನಿಂಗ್ಸ್ನಲ್ಲಿ ಆಸೀಸ್ ಬೌಲರ್ಗಳ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ ಕೇವಲ 36 ರನ್ ಗಳಿಸಿತು. 90 ರನ್ಗಳ ಸುಲಭ ಗುರಿ ಬೆನ್ನಟ್ಟಿದ ಕಾಂಗರೂ ಪಡೆ 2 ವಿಕೆಟ್ ಕಳೆದುಕೊಂಡು 93 ರನ್ ಗಳಿಸುವ ಮೂಲಕ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.