ಅಹ್ಮದಾಬಾದ್ : ಭಾರತ ತಂಡದ ಆಪ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮೂರು ಮಾದರಿಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತದ ನಾಲ್ಕನೇ ಬೌಲರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಅವರು ಜಹೀರ್ ಖಾನ್(597)ರನ್ನು ಹಿಂದಿಕ್ಕಿದ್ದಾರೆ.
ಇಂಗ್ಲೆಂಡ್ ವಿರುದ್ಧದ 28ನೇ ಓವರ್ನಲ್ಲಿ ಒಲಿ ಪೋಪ್ ವಿಕೆಟ್ ಪಡೆಯುವ ಮೂಲಕ ಮೂರು ಮಾದರಿಯ ಕ್ರಿಕೆಟ್ನಲ್ಲಿ 599 ಬಲಿ ಪಡೆದ ಬೌಲರ್ ಎನಿಸಿದರು. ಅವರು ಪ್ರಸ್ತುತ ಅನಿಲ್ ಕುಂಬ್ಳೆ(953), ಹರ್ಭಜನ್ ಸಿಂಗ್(707) ಮತ್ತು ಕಪಿಲ್ ದೇವ್(687) ನಂತರದ ಸ್ಥಾನದಲ್ಲಿದ್ದಾರೆ.
-
Another one bites the dust!
— BCCI (@BCCI) February 24, 2021 " class="align-text-top noRightClick twitterSection" data="
Ashwin has 3⃣, England 8⃣ down now as Jack Leach is caught at slips.@Paytm #INDvENG #TeamIndia #PinkBallTest
Follow the match 👉https://t.co/9HjQB6CoHp pic.twitter.com/fYDXZJrwfp
">Another one bites the dust!
— BCCI (@BCCI) February 24, 2021
Ashwin has 3⃣, England 8⃣ down now as Jack Leach is caught at slips.@Paytm #INDvENG #TeamIndia #PinkBallTest
Follow the match 👉https://t.co/9HjQB6CoHp pic.twitter.com/fYDXZJrwfpAnother one bites the dust!
— BCCI (@BCCI) February 24, 2021
Ashwin has 3⃣, England 8⃣ down now as Jack Leach is caught at slips.@Paytm #INDvENG #TeamIndia #PinkBallTest
Follow the match 👉https://t.co/9HjQB6CoHp pic.twitter.com/fYDXZJrwfp
77ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ರವಿಚಂದ್ರನ್ ಅಶ್ವಿನ್ 397 ವಿಕೆಟ್ ಪಡೆದಿದ್ದು, ಇನ್ನು 3 ವಿಕೆಟ್ ಪಡೆದರೆ ಟೆಸ್ಟ್ ಕ್ರಿಕೆಟ್ನಲ್ಲಿ 400 ವಿಕೆಟ್ ಮೈಲುಗಲ್ಲನ್ನು ಸ್ಥಾಪಿಸಲಿದ್ದಾರೆ. ಮುತ್ತಯ್ಯ ಮುರುಳೀಧರನ್(72) ನಂತರ ವೇಗವಾಗಿ ಈ ಸಾಧನೆ ಮಾಡಿದ 2ನೇ ಬೌಲರ್ ಎನಿಸಿಕೊಳ್ಳಲಿದ್ದಾರೆ.
ಈ ಪಂದ್ಯದಲ್ಲಿ ಅಶ್ವಿನ್ 3 ವಿಕೆಟ್ ಪಡೆದರೆ, ಅಕ್ಸರ್ ಪಟೇಲ್ 6 ವಿಕೆಟ್ ಪಡೆದು ಇಂಗ್ಲೆಂಡ್ ತಂಡವನ್ನು ಕೇವಲ 112 ರನ್ಗಳಿಗೆ ಆಲೌಟ್ ಮಾಡಲು ನೆರವಾಗಿದ್ದರು.