ETV Bharat / sports

ಕೋಚ್​ಗೆ​ ನಿಂದನೆ ಆರೋಪ... ಅಶೋಕ್​ ದಿಂಡಾರನ್ನು ರಣಜಿ ತಂಡದಿಂದ ಹೊರದಬ್ಬಿದ ಬೆಂಗಾಲ್​ ಕ್ರಿಕೆಟ್​ ಬೋರ್ಡ್​ - ದಿಂಡಾರನ್ನು ತಂಡದಿಂ ಕೈಬಿಟ್ಟ ಸಿಎಬಿ

35 ವರ್ಷದ ವೇಗಿ ಅಶೋಕ್​ ದಿಂಡಾ ಬೌಲಿಂಗ್​ ಕೋಚ್​ ರಣದೇಬ್​ ಬೋಸ್​ ಬೆಂಗಾಲ್​ ತಂಡದ ನಾಯಕ ಅಭಿಮನ್ಯು ಈಶ್ವರನ್​ ಅವರ ಜೊತೆ ಗುಟ್ಟಾಗಿ ಮಾತನಾಡಿದ್ದನ್ನು ನೋಡಿ ಕೋಪಗೊಂಡು ಅವರನ್ನು ನಿಂದಿಸಿದ್ದರು ಎನ್ನಲಾಗ್ತಿದೆ.

Ashok Dinda axed from Bengal Ranji squad

author img

By

Published : Dec 25, 2019, 1:11 PM IST

ಕೋಲ್ಕತ್ತಾ: ಬೌಲಿಂಗ್​ ಕೋಚ್​ ರಣದೇಬ್​ ಬೋಸ್​ರನ್ನು ನಿಂದಿಸಿ ಕ್ಷಮೆ ಕೇಳಲು ಒಪ್ಪದ ಹಿರಿಯ ವೇಗಿ ಅಶೋಕ್​ ದಿಂಡಾರನ್ನು ಬೆಂಗಾಲ್​ ಕ್ರಿಕೆಟ್​ ಬೋರ್ಡ್​ ಅಸೋಸಿಯೇಷನ್​ ರಣಜಿ ತಂಡದಿಂದ ಕೈಬಿಟ್ಟಿದೆ.

35 ವರ್ಷದ ವೇಗಿ ಅಶೋಕ್​ ದಿಂಡಾ ಬೌಲಿಂಗ್​ ಕೋಚ್​ ರಣದೇಬ್​ ಬೋಸ್​ ಬೆಂಗಾಲ್​ ತಂಡದ ನಾಯಕ ಅಭಿಮನ್ಯು ಈಶ್ವರನ್​ ಅವರ ಜೊತೆ ಗುಟ್ಟಾಗಿ ಮಾತನಾಡಿದ್ದನ್ನು ನೋಡಿ ಕೋಪಗೊಂಡು ಅವರನ್ನು ನಿಂದಿಸಿದ್ದರು ಎನ್ನಲಾಗ್ತಿದೆ. ನಂತರ ಸಿಎಬಿ ಕಾರ್ಯದರ್ಶಿ ರಣದೇಬ್​ ಬೋಸ್​ ಬಳಿ ಕ್ಷಮೆ ಕೇಳುವಂತೆ ಹೇಳಿದರೂ, ದಿಂಡಾ ಇದಕ್ಕೊಪ್ಪದ ಕಾರಣ ಅವರ ವಿರುದ್ಧ ಮೈದಾನದಲ್ಲಿ ಅಶಿಸ್ತು ಪ್ರದರ್ಶನ ತೋರಿದ ಆರೋಪದ ಮೇಲೆ ರಣಜಿ ತಂಡದಿಂದ ಕೈಬಿಟ್ಟಿದೆ.

ಈ ಕುರಿತು ಮಾತನಾಡಿರುವ ತಂಡದ ಮುಖ್ಯ ಕೋಚ್​ ಅರುಣ್​ ಲಾಲ್​ "ಅಶೋಕ್​ ದಿಂಡ ಬೌಲಿಂಗ್ ಕೋಚ್​ರನ್ನು ನಿಂದಿಸಿದ್ದಾರೆ. ಸಿಎಬಿ ಕಾರ್ಯದರ್ಶಿಗಳು ಕ್ಷಮೆ ಕೇಳುವಂತೆ ಸೂಚಿಸಿದ್ದರೂ ದಿಂಡ ಒಪ್ಪದಿರುವ ಕಾರಣ ಅವರನ್ನು ತಂಡದಿಂದ ಕೈಬಿಡಲಾಗಿದೆ. ಆದರೆ ಆಂಧ್ರಪ್ರದೇಶ ವಿರುದ್ಧದ ಪಂದ್ಯದಲ್ಲಿ ದಿಂಡರಂತಹ ವೇಗಿ ನಮ್ಮ ತಂಡಕ್ಕೆ ಅಗತ್ಯವಿತ್ತು. ಈ ಪಿಚ್​ಗೆ ಅವರು ಸೂಕ್ತವಾದ ಬೌಲರ್​ ಆಗಿದ್ದರು. ನಾನು ಮಂಗಳವಾರ ಬೇಗ ಮನೆಗೆ ಬಂದ ನಂತರ ಈ ಘಟನೆ ನಡೆದಿದೆ. ಇದೀಗ ನಮ್ಮ ಯೋಜನೆಯೆಲ್ಲಾ ತಲೆಕೆಳಗಾಗಿದೆ. ಹಾಗಂತ ಯಾರೂ ಅನಿವಾರ್ಯವಲ್ಲ. ಖಂಡಿತವಾಗಿಯೂ ನಾನು CAB ನಿರ್ಧಾರವನ್ನು ಬೆಂಬಲಿಸುತ್ತೇನೆ" ಎಂದು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಅವರು ಬೆಂಗಾಲ್​ ರಣಜಿ ತಂಡದ ಪರ ಆಡಲು ನಿರಾಕರಿಸಿದ್ದರು. ಸಯ್ಯದ್​ ಮುಷ್ತಾಕ್​ ಅಲಿ ಟೂರ್ನಿಯಲ್ಲಿ ಹೆಚ್ಚು ಬೆಂಚ್​ ಕಾಯ್ದಿರಿಸಿದ ಕಾರಣ ಈ ನಿರ್ದಾರ ತೆಗೆದುಕೊಂಡಿದ್ದರು. ಇದೀಗ ಅವರ ದುರ್ವರ್ತನೆಯಿಂದ ತಂಡವೇ ಅವರನ್ನು ಕೈಬಿಟ್ಟಿದೆ.

ಅಶೋಕ್​ ದಿಂಡ 116 ಪ್ರಥಮ ದರ್ಜೆ ಕ್ರಿಕೆಟ್​ನಿಂದ 420 ವಿಕೆಟ್ಸ್​ ಪಡೆದಿದ್ದಾರೆ. ಇವರನ್ನು ತಂಡದಿಂದ ಕೈಬಿಟ್ಟಿರುವ ಸಿಎಬಿ ಸದ್ಯಕ್ಕೆ ಬದಲಿ ಆಟಗಾರನನ್ನು ಇನ್ನು ಘೋಷಿಸಿಲ್ಲ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.