ದುಬೈ: ಐಪಿಎಲ್ನಲ್ಲಿ ವೇಗದ ಎಸೆತವನ್ನ ಎಸೆದು ದಾಖಲೆ ಬರೆದಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆ್ಯನ್ರಿಷ್ ನಾರ್ಟ್ಜ್ , ತಾವೂ ಕಳೆದ ಎರಡು ವರ್ಷಗಳಿಂದ ತಮ್ಮ ಬೌಲಿಂಗ್ನ ವೇಗವನ್ನು ಹೆಚ್ಚಿಸಿಕೊಳ್ಳುವುದರ ಮೇಲೆ ಹೆಚ್ಚಿನ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದಾರೆ.
ಬುಧವಾರ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದ ವೇಳೆ ಅವರು 156.22 kmph ವೇಗವದಲ್ಲಿ ಬೌಲಿಂಗ್ ಮಾಡುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ವೇಗವಾಗಿ ಬೌಲಿಂಗ್ ಮಾಡಿದ ಬೌಲರ್ ಎಂಬ ಖ್ಯಾತಿಗೆ ಪಾತ್ರರಾದರು. ವಿಶೇಷವೆಂದರೆ ಐಪಿಎಲ್ನಲ್ಲಿ ವೇಗದ ಎಸೆತಗಳ ಪಟ್ಟಿಯ ಮೊದಲ 5ರಲ್ಲಿ 4 ಸ್ಥಾನಗಳಲ್ಲಿ ನಾರ್ಟ್ಜ್ ಹೆಸರೇ ಇದೆ.
ನಾರ್ಟ್ಜ್ ತಮ್ಮ ಮೊದಲ ಓವರ್ನಲ್ಲಿಯೇ ವೇಗವಾಗಿ ಎಸೆತಗಳನ್ನು ಪ್ರಯೋಗಿಸಿದ್ದರು. ಆದರೆ, ರಾಯಲ್ಸ್ ಬ್ಯಾಟ್ಸ್ಮನ್ ಜೋಸ್ ಬಟ್ಲರ್ ಎರಡು ಸ್ಕೋಪ್ ಶಾಟ್ ಮಾಡುವ ಮೂಲಕ 2 ಬೌಂಡರಿ ಗಿಟ್ಟಿಸಿಕೊಂಡರು. ಆದರೆ, ತನ್ನ ಕೊನೆಯ ಎಸೆತದಲ್ಲಿ ಬಟ್ಲರ್ರನ್ನು ಬೌಲ್ಡ್ ಮಾಡುವ ಮೂಲಕ ಅದ್ಭುತವಾಗಿ ತಿರುಗೇಟು ನೀಡಿದರು.
" ಬಟ್ಲರ್ ಜೊತೆಗಿನ ಹೋರಾಟ ತುಂಬಾ ಆಸಕ್ತಿದಾಯಕವಾಗಿತ್ತು. ಅವರು ಮೊದಲ ಬಾರಿ ಪ್ರಯೋಗಿಸಿದಾಗ ನನಗೆ ಅವರು ಸ್ಕೂಪ್ ಶಾಟ್ ಆಡುತ್ತಾರೆಂದು ನನಗೆ ಗೊತ್ತಿತ್ತು. ಆದರೆ ಎರಡನೇ ಬಾರಿಯೂ ಅದೇ ಶಾಟ್ ಹೊಡೆದಾಗ ನನಗೆ ಆಶ್ಚರ್ಯವಾಗಿತ್ತು. ಅವರು ಮತ್ತೊಂದು ಎಸೆತದಲ್ಲೂ ಅದೇ ರೀತಿ ಆಡುತ್ತಾರೆಂದು ನಾನು ಆಲೋಚಿಸಿರಲಿಲ್ಲ. ಆದರೆ ನನ್ನ ಬಲದ ಮೇಲೆ ನನಗೆ ನಂಬಿಕೆಯಿತ್ತು. ಹಾಗಾಗಿ ಕೆಲವು ಬದಲಾವಣೆಯೊಂದಿಗೆ ವಿಕೆಟ್ ಮೇಲೆ ಬೌಲಿಂಗ್ ಮಾಡಿದೆ "ಎಂದು ತಮ್ಮ ಮೊದಲ ಓವರ್ನಲ್ಲೇ ಬಟ್ಲರ್ ವಿಕೆಟ್ ಪಡೆದದ್ದನ್ನು ಶಿಖರ್ ಧವನ್ ಜೊತೆ ನಡೆಸಿದ ಸಂಭಾಷಣೆಯಲ್ಲಿ ತಿಳಿಸಿದ್ದಾರೆ.
-
What is the procedure to reply with Anrich Nortje? 🤔#DCvRR https://t.co/nNPvAe1Uyz pic.twitter.com/ixWtPCu83R
— Delhi Capitals (Tweeting from 🇦🇪) (@DelhiCapitals) October 14, 2020 " class="align-text-top noRightClick twitterSection" data="
">What is the procedure to reply with Anrich Nortje? 🤔#DCvRR https://t.co/nNPvAe1Uyz pic.twitter.com/ixWtPCu83R
— Delhi Capitals (Tweeting from 🇦🇪) (@DelhiCapitals) October 14, 2020What is the procedure to reply with Anrich Nortje? 🤔#DCvRR https://t.co/nNPvAe1Uyz pic.twitter.com/ixWtPCu83R
— Delhi Capitals (Tweeting from 🇦🇪) (@DelhiCapitals) October 14, 2020
ಇನ್ನು ಐಪಿಎಲ್ನಲ್ಲಿ ವೇಗದ ಎಸೆತ ಹಾಕಿರುವ ಬಗ್ಗೆ ಮಾತಮಾಡಿದ ಅವರು, " ಐಪಿಎಲ್ನಲ್ಲಿ ವೇಗದ ಎಸೆತವನ್ನು ಹಾಕಿರುವುದರ ಬಗ್ಗೆ ನನಗೆ ತಿಳಿದಿಲ್ಲ, ಬೌಲಿಂಗ್ ಮಾಡುವಾಗ ನನ್ನ ವೇಗವನ್ನು ಹೆಚ್ಚಿಸುವ ಕೆಲಸ ಮಾಡುತ್ತಿದ್ದೇನೆ. ಕಳೆದ ಎರಡು ವರ್ಷಗಳಿಂದಲೂ ಇದರ ಮೇಲೆ ಕೆಲಸ ಮಾಡುತ್ತಿದ್ದೇನೆ. ಕೊನೆಯಲ್ಲಿ, ಇದು ರೈಟ್ ಲೆಂತ್ನಲ್ಲಿ ಎಸೆಯುವುದರ ಮೇಲೆ ನಿರ್ಧಾರವಾಗಿರುತ್ತದೆ " ಎಂದು ತಿಳಿಸಿದ್ದಾರೆ.
ಇಂಗ್ಲೆಂಡ್ನ ಕ್ರಿಸ್ ವೋಕ್ಸ್ ಅಲಭ್ಯರಾದ ನಂತರ ಡೆಲ್ಲಿ ತಂಡಕ್ಕೆ ಸೇರ್ಪಡೆಗೊಂಡಿದ್ದ ನಾರ್ಟ್ಜ್, ತಮ್ಮದೇ ದೇಶದ ಕಗಿಸೋ ರಬಾಡ ಜೊತೆಯಾಗಿ ಡೆಲ್ಲಿ ತಂಡದ ಬೌಲಿಂಗ್ ಶಕ್ತಿಯಾಗಿ ಟೂರ್ನಿಯಲ್ಲಿ ಅದ್ಭುತ ಯಶಸ್ಸು ಸಾಧಿಸಿದ್ದಾರೆ. ಇವರಿಬ್ಬರ ಅದ್ಭುತ ಬೌಲಿಂಗ್ ಪ್ರದರ್ಶನದಿಂದ ಡೆಲ್ಲಿ ತಂಡ ಆಡಿರುವ 8 ಪಂದ್ಯಗಳಿಂದ 6 ರಲ್ಲಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.