ಕೊಲೊಂಬೊ: ಬಾಂಗ್ಲದೇಶ ತಂಡದ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ತಂಡ 122 ರನ್ಗಳ ಭರ್ಜರಿ ಜಯ ಪಡೆಯುವ ಮೂಲಕ 3-0ಯಲ್ಲಿ ಸರಣಿ ಜಯಿಸಿದೆ.
ಮೊದಲೆರಡು ಪಂದ್ಯಗಳನ್ನ ಗೆದ್ದು ಸರಣಿ ಗೆಲುವು ಖಚಿತ ಪಡಿಸಿಕೊಂಡಿದ್ದ ಲಂಕಾ ಕೊನೆಯ ಪಂದ್ಯವನ್ನು ಏಕಪಕ್ಷೀಯವಾಗಿ ಗೆದ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಸಿಂಹಳೀಯರು 8 ವಿಕೆಟ್ ಕಳೆದು ಕೊಂಡು 294 ರನ್ಗಳಿಸಿತು. ಮ್ಯಾಥ್ಯೂಸ್ 87, ನಾಯಕ ಕರುಣರತ್ನೆ 46, ಕುಸಾಲ್ ಪರೆರಾ 42, ಕುಸಾಲ್ ಮೆಂಡಿಸ್ 54, ದಾಸುನ್ ಶನಾಕ 30 ರನ್ಗಳಿಸಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು.
ಬಾಂಗ್ಲಾದೇಶದ ಪರ ಶಫೀವುಲ್ ಇಸ್ಲಾಮ್ 3, ಸೌಮ್ಯ ಸರ್ಕಾರ್ 3, ರುಬೆಲ್ ಹುಸೇನ್ ಹಾಗೂ ತೈಜುಲ್ ಇಸ್ಲಾಮ್ ತಲಾ ಒಂದು ವಿಕೆಟ್ ಪಡೆದರು.
295 ರನ್ಗಳ ಗುರಿ ಪಡೆದಿದ್ದ ಬಾಂಗ್ಲಾ ಲಂಕಾ ಬೌಲರ್ ದಾಳಿಗೆ ತತ್ತರಿಸಿ 36 ಓವರ್ಗಳಲ್ಲಿ 172 ರನ್ಗಳಿಗೆ ಆಲೌಟ್ ಆಯಿತು. ಸೌಮ್ಯ ಸರ್ಕಾರ್ 69 ಹಾಗೂ ತೈಜುಲ್ ಇಸ್ಲಾಮ್ 39 ರನ್ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರು 20 ರ ಗಡಿ ದಾಟಲಿಲ್ಲ.
ಉತ್ತಮ ಬೌಲಿಂಗ್ ನಡೆಸಿದ ದಾಸುನ್ ಶನಾಕ 3 ವಿಕೆಟ್, ಲಹಿರು ಕುಮಾರ, ಕಸುನ್ ರಜಿತಾ ತಲಾ 2, ಅಕಿಲಾ ದನಂಜಯಾ ಹಾಗೂ ಹಸರಂಗಾ ತಲಾ ಒದು ವಿಕೆಟ್ ಪಡೆದು ಶ್ರೀಲಂಕಾ ಕ್ಲೀನ್ ಸ್ವೀಪ್ ಸಾಧಿಸಲು ನೆರವಾದರು. 4 ವರ್ಷಗಳ ಬಳಿ ಲಂಕಾ ತಂಡ ಮೊದಲ ಸರಣಿ ಜಯಿಸಿತು.
ಈ ಪಂದ್ಯವನ್ನು ಗೆದ್ದ ಲಂಕಾ ಕ್ರಿಕೆಟ್ ಮಂಡಳಿ ಕಳೆದ ವಾರವಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ನುವಾನ್ ಕುಲಶೇಖರ್ಗೆ ಅರ್ಪಿಸಿದರು.