ಮುಂಬೈ: ಕ್ರಿಕೆಟ್ ಜಗತ್ತಿನಲ್ಲಿ ಬ್ಯಾಟಿಂಗ್ ವಿಭಾಗದ ಬಹುಪಾಲು ದಾಖಲೆಗಳನ್ನು ಭಾರತೀಯ ಆಟಗಾರರು ತಮ್ಮ ಹೆಸರಿನಲ್ಲಿಯೇ ಬರೆದುಕೊಂಡಿದ್ದಾರೆ.
ಕ್ರಿಕೆಟ್ ಲೋಕದಲ್ಲಿ ದೇವರು ಎಂದೇ ಖ್ಯಾತರಾದ ಸಚಿನ್ ತಮ್ಮ 22 ವರ್ಷದ ಏಕದಿನ ಕ್ರಿಕೆಟ್ನಲ್ಲಿ ವೃತ್ತಿ ಜೀವನದಲ್ಲಿ 18,426 ರನ್ಗಳಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಇವರ ದಾಖಲೆಯನ್ನು ಬೆನ್ನಟ್ಟುತ್ತಿರುವ 30 ವರ್ಷದ ಕೊಹ್ಲಿ 11020ರನ್ಗಳಿಸಿ ಸಚಿನ್ ನಡೆದಿದ್ದ ದಾರಿಯಲ್ಲಿ ತಾವೂ ಕೂಡ ಸಾಗುತ್ತಿದ್ದಾರೆ.
ಆದರೆ, ಕೊಹ್ಲಿ ದಾಖಲೆಗಳನ್ನು ದಕ್ಷಿಣ ಆಫ್ರಿಕಾದ ಹಾಶಿಂ ಆಮ್ಲಾ ಒಂದೊಂದಾಗಿ ತಮ್ಮ ಹೆಸರಿಗೆ ಬರದುಕೊಂಡು ಬರುತ್ತಿದ್ದರು. ಕಳೆದ 5 ವರ್ಷಗಳಲ್ಲಿ ಕೊಹ್ಲಿ ವೇಗವಾಗಿ ತಲುಪಿದ್ದ 5000, 6000,7000, ದಾಖಲೆಗಳನ್ನು ಹಿಂದಿಕ್ಕಿ ವಿಶ್ವದಾಖಲೆ ಬರೆದಿದ್ದ ಆಮ್ಲ ಕೊನೆಗೂ 8000 ರನ್ಗಳಿನ್ನು ಕೊಹ್ಲಿಗಿಂತ ವೇಗವಾಗಿ ತಲುಪುವಲ್ಲಿ ವಿಫಲರಾಗಿದ್ದಾರೆ.
-
In Odi, Fastest To (Runs)
— CricBeat (@Cric_beat) June 16, 2019 " class="align-text-top noRightClick twitterSection" data="
1000 - Fakhar
2000 - Amla
3000 - Amla
4000 - Amla
5000 - Amla
6000 - Amla
7000 - Amla
8000 - Kohli
9000 - Kohli
10000 - Kohli
11000 - Kohli*
12000 - Sachin
13000 - Sachin
14000 - Sachin
15000 - Sachin
16000 - Sachin
17000 - Sachin
18000 - Sachin
">In Odi, Fastest To (Runs)
— CricBeat (@Cric_beat) June 16, 2019
1000 - Fakhar
2000 - Amla
3000 - Amla
4000 - Amla
5000 - Amla
6000 - Amla
7000 - Amla
8000 - Kohli
9000 - Kohli
10000 - Kohli
11000 - Kohli*
12000 - Sachin
13000 - Sachin
14000 - Sachin
15000 - Sachin
16000 - Sachin
17000 - Sachin
18000 - SachinIn Odi, Fastest To (Runs)
— CricBeat (@Cric_beat) June 16, 2019
1000 - Fakhar
2000 - Amla
3000 - Amla
4000 - Amla
5000 - Amla
6000 - Amla
7000 - Amla
8000 - Kohli
9000 - Kohli
10000 - Kohli
11000 - Kohli*
12000 - Sachin
13000 - Sachin
14000 - Sachin
15000 - Sachin
16000 - Sachin
17000 - Sachin
18000 - Sachin
8000 ಸಾವಿರ ರನ್ ತಲುಪಲು ಕೊಹ್ಲಿ 175 ಇನ್ನಿಂಗ್ಸ್ ಸಾಕಾಗಿತ್ತು. ಆದರೆ ಆಮ್ಲ 176 ಇನ್ನಿಂಗ್ಸ್ ತೆಗೆದುಕೊಳ್ಳುವ ಮೂಲಕ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಕೊಹ್ಲಿಗೆ ಪೈಪೋಟಿ ನೀಡುತ್ತಿದ್ದ ಆಮ್ಲ 2 ಸಾವಿರ ರನ್ದಿಂದ 7 ಸಾವಿರದವರೆಗೆ ಅತಿ ವೇಗವಾಗಿ ರನ್ ಪೂರೈಸಿದ ದಾಖಲೆ ಹೊಂದಿದ್ದರು. ಸದ್ಯ ನಿವೃತ್ತಿ ಅಂಚಿನಲ್ಲಿರುವುದರಿಂದ ಇನ್ಮುಂದೆ ಕೊಹ್ಲಿ ದಾಖಲೆಗಳು ಹಲವು ವರ್ಷಗಳ ತನಕ ಭದ್ರವಾಗುಳಿಯಲಿವೆ.
ವೇಗವಾಗಿ 8 ,9 ,10 ಹಾಗೂ 11 ಸಾವಿರ ಪೂರ್ಣಗೊಳಿಸಿರುವ ದಾಖಲೆ ಸದ್ಯ ಕೊಹ್ಲಿ ಹೆಸರಿನಲ್ಲಿದೆ. ವೇಗವಾಗಿ 12 ರಿಂದ 18 ಸಾವಿರ ಗಳಿಸಿದ ದಾಖಲೆ ಸಚಿನ್ ಹೆಸರಿನಲ್ಲಿದೆ. ಕೊಹ್ಲಿ ಇನ್ನು 5 ವರ್ಷ ಕ್ರಿಕೆಟ್ ಆಡಿದರೆ,16 ರಿಂದ 17 ಸಾವಿರ ರನ್ ತಲುಪಬಹುದು. ಏನೇ ಆದರೂ ಕ್ರಿಕೆಟ್ ಇತಿಹಾಸದಲ್ಲಿ ಈ ದಾಖಲೆಗಳೆಲ್ಲ ಭಾರತೀಯರ ಹೆಸರಿನಲ್ಲೆ ಉಳಿದುಕೊಳ್ಳುತ್ತವೆ ಎನ್ನುವುದೇ ಸಂತೋಷದ ವಿಷಯ.