ಹೈದರಾಬಾದ್: 2019ರ ವಿಶ್ವಕಪ್ನಿಂದ ಅವಕಾಶವಂಚಿತನಾದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಹೈದರಾಬಾದ್ನ ಅಂಬಾಟಿ ರಾಯುಡು ದಿಢೀರ್ ನಿವೃತ್ತಿ ಘೋಷಿಸಿದ್ದರು.
ಆದರೆ, ಇದೀಗ ಕ್ರಿಕೆಟ್ ಬಿಟ್ಟಿರಲಾಗದ ಅವರು ಮತ್ತೆ ಕ್ರಿಕೆಟ್ ಆಡಲು ನಿರ್ಧರಿಸಿದ್ದಾರೆ. ಐಪಿಎಲ್ನಲ್ಲಿ ಆಡುವುದರ ಜೊತೆಗೆ ದೇಶಿ ಕ್ರಿಕೆಟ್ಗೆ ಮರಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಕುರಿತು ಆದಷ್ಟು ಬೇಗ ಬಿಸಿಸಿಐಗೆ ಪತ್ರ ಬರೆಯಲು ನಿರ್ಧರಿಸಿದ್ದಾರೆ.
ದಿಢೀರ್ ನಿವೃತ್ತಿ ಘೋಷಿಸಲು ಕಾರಣ ಕೇಳಿದ್ದಕ್ಕೆ " ನಾನು ವಿಶ್ವಕಪ್ ಆಡುವುದಕ್ಕಾಗಿ 4 ವರ್ಷ ಬಹಳ ಕಷ್ಟ ಪಟ್ಟಿದ್ದೆ. ಆದರೆ, ನನಗೆ ವಿಶ್ವಕಪ್ ತಂಡದಲ್ಲಿ ಅವಕಾಶ ಸಿಗದಿದ್ದರಿಂದ ಇದೇ ನಿವೃತ್ತಿಗೆ ಒಳ್ಳೆಯ ಸಮಯ ಎಂದು ಅನಿಸಿತು ಅದಕ್ಕೆ ಆ ನಿರ್ಧಾರ ತೆಗೆದುಕೊಂಡೆ" ಎಂದಿದ್ದಾರೆ.
ಮತ್ತೆ ನಿರ್ಧಾರ ಬದಲಿಸಿಕೊಂಡಿದ್ದೇಕೆ ಎಂಬುದಕ್ಕೆ ಉತ್ತರಿಸಿರುವ ರಾಯುಡು" ನನಗೆ ಚೆನ್ನೈ ಸೂಪರ್ ತುಂಬಾ ಬೆಂಬಲ ನೀಡಿದೆ. ಸಿಎಸ್ಕೆ ಅಧಿಕಾರಿಗಳು ನನಗೆ ಕ್ರಿಕೆಟ್ನಲ್ಲಿ ಮುಂದುವರಿಯುವಂತೆ ಕೇಳಿಕೊಂಡಿದ್ದಾರೆ. ನನಗೂ ಕ್ರಿಕೆಟ್ ಮೇಲೆ ಪ್ರಿತಿಯಿದೆ, ಆಟವನ್ನು ಎಂಜಾಯ್ ಮಾಡುವ ಬಯಕೆಯಿಂದ ನಿರ್ಧಾರ ಬದಲಿಸಿಕೊಂಡಿದ್ದೇನೆ" ಎಂದು ರಾಯುಡು ತಿಳಿಸಿದ್ದಾರೆ.
ನಾನು ಮೊದಲು ಫಿಟ್ನೆಸ್ ಕಡೆಗೆ ಮೊದಲ ಆದ್ಯತೆ ನೀಡುತ್ತೇನೆ, ವಿದೇಶಿ ಲೀಗ್ಗಳಲ್ಲಿ ಆಡುವುದಿಲ್ಲ, ಭಾರತ ತಂಡಕ್ಕೆ ಮತ್ತೆ ಆಡುತ್ತೇನೆ ಎಂಬುದು ಸದ್ಯಕ್ಕೆ ದೂರದ ಮಾತು. ಆದರೆ, ಹಂತ ಹಂತವಾಗಿ ದೇಶಿ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ತೋರಿ ನಂತರ ಭಾರತ ತಂಡದಲ್ಲಿ ಅವಕಾಶ ಪಡೆಯಲು ಇಚ್ಛಿಸುತ್ತೇನೆ ಎಂದು 33 ವರ್ಷದ ರಾಯುಡು ವಿಶ್ವಾಸ ವ್ಯಕ್ತಪಡಿಸಿದ್ದಾರೆ.