ಸಿಡ್ನಿ: ಆಸ್ಟ್ರೇಲಿಯಾ ಮಹಿಳಾ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ವುಮನ್ ಅಲಿಸ್ಸಾ ಹೆಲಿ ಟಿ-20 ಕ್ರಿಕೆಟ್ನಲ್ಲಿ 148 ರನ್ಗಳಿಸುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ.
ಬುಧವಾರ ನಡೆದ ಶ್ರೀಲಂಕಾ ಮಹಿಳಾ ತಂಡದ ವಿರುದ್ಧದ ಪಂದ್ಯದಲ್ಲಿ ಕೇವಲ 61 ಎಸೆತಗಳಲ್ಲಿ ಬರೋಬ್ಬರಿ 148 ರನ್ ಬಾರಿಸಿದ ಹೆಲಿ ಟಿ- 20 ಕ್ರಿಕೆಟ್ನಲ್ಲಿ ಗರಿಷ್ಠ ವೈಯಕ್ತಿಕ ರನ್ ಬಾರಿಸಿದ ವಿಶ್ವದಾಖಲೆಗೆ ಪಾತ್ರರಾದರು.
ಆಸ್ಟ್ರೇಲಿಯಾ ಸೀಮರ್ ಮಿಚೆಲ್ ಸ್ಟಾರ್ಕ್ ಪತ್ನಿಯಾಗಿರುವ ಅಲಿಸ್ಸಾ ಹೆಲಿ ಅವರ ಇನ್ನಿಂಗ್ಸ್ನಲ್ಲಿ 7 ಭರ್ಜರಿ ಸಿಕ್ಸರ್ ಹಾಗೂ 19 ಬೌಂಡರಿ ಸೇರಿದ್ದವು. ಇದೇ ವರ್ಷ ಆಸ್ಟ್ರೇಲಿಯಾ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಇಂಗ್ಲೆಂಡ್ ವಿರುದ್ಧ 133 ರನ್ಗಳಿಸಿ ವಿಶ್ವದಾಖಲೆ ಬರೆದಿದ್ದರು. ಬುಧವಾರ ಲ್ಯಾನಿಂಗ್ ನಾನ್ಸ್ಟ್ರೈಕರ್ನಲ್ಲಿ ಇರುವಾಗಲೆ ಹೆಲಿ ಅವರ ವಿಶ್ವದಾಖಲೆ ಪುಡಿಗಟ್ಟಿದ್ದರು.
-
ICYMI: Alyssa Healy stormed into the record-books with an extraordinary 148 to power Australia to a dominant T20 series sweep against Sri Lanka. https://t.co/KiveJ5bKYs pic.twitter.com/bNp9HZCwPD
— cricket.com.au (@cricketcomau) October 2, 2019 " class="align-text-top noRightClick twitterSection" data="
">ICYMI: Alyssa Healy stormed into the record-books with an extraordinary 148 to power Australia to a dominant T20 series sweep against Sri Lanka. https://t.co/KiveJ5bKYs pic.twitter.com/bNp9HZCwPD
— cricket.com.au (@cricketcomau) October 2, 2019ICYMI: Alyssa Healy stormed into the record-books with an extraordinary 148 to power Australia to a dominant T20 series sweep against Sri Lanka. https://t.co/KiveJ5bKYs pic.twitter.com/bNp9HZCwPD
— cricket.com.au (@cricketcomau) October 2, 2019
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಆಸ್ಟ್ರೇಲಿಯಾ ತಂಡ 226 ರನ್ಗಳಿಸಿತ್ತು. ಇದಕ್ಕುತ್ತರವಾಗಿ ಶ್ರೀಲಂಕಾ ಕೇವಲ 97 ರನ್ಗಳಿಸಿ 132 ರನ್ಗಳ ಸೋಲನುಭವಿಸಿತು. ಮೂರು ಪಂದ್ಯಗಳ ಸರಣಿಯನ್ನು ಆಸೀಸ್ ಮಹಿಳೆಯರು ಏಕಪಕ್ಷೀಯವಾಗಿ ಕ್ಲೀನ್ಸ್ವೀಪ್ ಸಾಧಿಸಿದರು.