ಲಾಹೋರ್: ಪ್ರಪಂಚದಾದ್ಯಂತ ಕೊರೊನಾ ಹಾವಳಿಗೆ ಭಾರತ, ಚೀನಾ, ಅಮೆರಿಕ, ಇಟಲಿ ಸೇರಿದಂತೆ ಹತ್ತಾರು ರಾಷ್ಟ್ರಗಳು ಸಾವಿರಾರು ಪ್ರಾಣ ಕಳೆದುಕೊಂಡು ಆಘಾತದಲ್ಲಿವೆ. ಈ ಸಮಯದಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಸರಣಿ ಆಯೋಜನೆ ಮಾಡಬೇಕೆಂದು ಅಖ್ತರ್ ಮನವಿ ಮಾಡಿದ್ದರು.
ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿದ ಭಾರತ ಲೆಜೆಂಡ್ಗಳಾದ ಕಪಿಲ್ದೇವ್ ಭಾರತದ ಬಳಿ ಸಾಕಷ್ಟು ಹಣವಿದೆ ಪಾಕಿಸ್ತಾನದ ಜೊತೆ ಕ್ರಿಕೆಟ್ ಆಡುವುದು ಬೇಕಾಗಿಲ್ಲ ಎಂದರೆ, ಸುನಿಲ್ ಗವಾಸ್ಕರ್ ಲಾಹೋರ್ನಲ್ಲಿ ಹಿಮಪಾತವಾಗಬಹುದು, ಆದರೆ ಇಂಡೋ-ಪಾಕ್ ನಡುವೆ ದ್ವಿಪಕ್ಷೀಯ ಸರಣಿ ಅಸಾಧ್ಯ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಮೀಜ್ ರಾಜಾರ ಅವರ ಯೂಟ್ಯೂಬ್ ಚಾನೆಲ್ನಲ್ಲಿ ತಮಾಷೆ ಮಾಡಿದ್ದರು.
-
Well Sunny bhai, we did have a snowfall in Lahore last year :)
— Shoaib Akhtar (@shoaib100mph) April 14, 2020 " class="align-text-top noRightClick twitterSection" data="
So nothing is impossible. pic.twitter.com/CwbEGBc45N
">Well Sunny bhai, we did have a snowfall in Lahore last year :)
— Shoaib Akhtar (@shoaib100mph) April 14, 2020
So nothing is impossible. pic.twitter.com/CwbEGBc45NWell Sunny bhai, we did have a snowfall in Lahore last year :)
— Shoaib Akhtar (@shoaib100mph) April 14, 2020
So nothing is impossible. pic.twitter.com/CwbEGBc45N
ಕಪಿಲ್ ದೇವ್ ಮಾತಿಗೆ ಅಫ್ರಿದಿ ಬೇಸರ ವ್ಯಕ್ತಪಡಿಸಿದ್ದರು. ಅಖ್ತರ್ ಕೂಡ ಕಪಿಲ್ ದೇವ್ ಅವರಿಂದ ಇಂತಹ ಹೇಳಿಕೆ ನಿರೀಕ್ಷಿಸಲಾಗಿರಲಿಲ್ಲ ಎಂದು ತಿಳಿಸಿದ್ದರು. ಅಲ್ಲದೇ ಗವಾಸ್ಕರ್ ತಮಾಷೆಯ ಟ್ವೀಟ್ಗೂ ಪ್ರತಿಕ್ರಿಯೆ ನೀಡಿದ್ದು, ಸನ್ನಿಬಾಯ್ ಕಳೆದ ವರ್ಷ ಲಾಹೋರ್ನಲ್ಲಿ ಹಿಮ ಬಿದ್ದಿದೆ. ಅಸಾದ್ಯವಾದದ್ದು ಯಾವುದು ಇಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಭಾರತ ಮತ್ತು ಪಾಕಿಸ್ತಾನ 2012ರಲ್ಲಿ ಕೊನೆಯ ಬಾರಿ ಏಕದಿನ ಪಂದ್ಯದಲ್ಲಿ ಕಾಣಿಸಿಕೊಂಡಿದ್ದವು. ಆದರೆ, ಎರಡು ದೇಶಗಳ ರಾಜಕೀಯ ಕಲಹಗಳಿಂದ ಕ್ರಿಕೆಟ್ ಆಡಲು ಸಾಧ್ಯವಾಗಿಲ್ಲ. ಎರಡು ದೇಶಗಳು ಕೇವಲ ಐಸಿಸಿ ಟ್ರೋಫಿ ಹಾಗೂ ಏಷ್ಯಾಕಪ್ ಟೂರ್ನಿಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿವೆ.