ETV Bharat / sports

ಐಪಿಎಲ್​ನಿಂದ ಉತ್ತಮ ವೇದಿಕೆ: ಡೇಲ್ ಸ್ಟೇನ್‌ ಹೇಳಿಕೆಗೆ ಈ ರೀತಿ ಪ್ರತಿಕ್ರಿಯಿಸಿದ ರಹಾನೆ!

author img

By

Published : Mar 2, 2021, 9:13 PM IST

ಇಂಡಿಯನ್​ ಪ್ರೀಮಿಯರ್ ಲೀಗ್​ಗಿಂತಲೂ ಪಾಕ್​ ಸೂಪರ್ ಲೀಗ್​ ಹಾಗೂ ಶ್ರೀಲಂಕಾ ಪ್ರೀಮಿಯರ್ ಲೀಗ್​ನಲ್ಲಿ ಕ್ರಿಕೆಟ್​ಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಸ್ಟೇನ್​ ಹೇಳಿಕೆ ನೀಡಿದ್ದು, ಇದೀಗ ವಿವಾದ ಪಡೆದುಕೊಂಡಿದೆ.

Ajinkya Rahane
Ajinkya Rahane

ಅಹಮದಾಬಾದ್​: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಹಣಕ್ಕೆ ಮಾತ್ರ ಆದ್ಯತೆ ನೀಡಲಾಗುತ್ತಿದ್ದು, ಅಲ್ಲಿ ಕ್ರಿಕೆಟ್ ಕಳೆದುಹೋಗುತ್ತಿದೆ ಎಂದು ಹೇಳಿಕೆ ನೀಡಿರುವ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಡೇಲ್​ ಸ್ಟೇನ್​ ಹೇಳಿಕೆಗೆ ರಹಾನೆ ಪ್ರತಿಕ್ರಿಯೆ ನೀಡಲು ನಿರಾಕರಣೆ ಮಾಡಿದ್ದಾರೆ.

ಇಂಡಿಯನ್​ ಪ್ರೀಮಿಯರ್​ ಲೀಗ್​ನಿಂದ ಅನೇಕ ಭಾರತೀಯ ಹಾಗೂ ಸಾಗರೋತ್ತರ ಕ್ರಿಕೆಟರ್ಸ್​ ತಮ್ಮ ಸಾಮರ್ಥ್ಯ ಹೊರಹಾಕಲು ಉತ್ತಮ ವೇದಿಕೆಯಾಗಿದೆ ಎಂದಿರುವ ಅವರು, ಡೇಲ್​ ಸ್ಟೇನ್ ಹೇಳಿಕೆ ಬಗ್ಗೆ ಪ್ರಶ್ನೆ ಮಾಡುತ್ತಿದ್ದಂತೆ ನಾಲ್ಕನೇ ಟೆಸ್ಟ್​ ಪಂದ್ಯದ ಬಗ್ಗೆ ಮಾತನಾಡಲು ನಾನು ಇಲ್ಲಿದ್ದೇನೆ. ಪಿಎಸ್​ಎಲ್​ ಅಥವಾ ಶ್ರೀಲಂಕಾ ಪ್ರೀಮಿಯರ್​ ಲೀಗ್​ ಬಗ್ಗೆ ಮಾತನಾಡಲು ಇಲ್ಲಿಲ್ಲ. ಐಪಿಎಲ್​ ನಮಗೆ ಅನೇಕ ಭಾರತೀಯರಿಗೆ ಹಾಗೂ ವಿದೇಶಿ ಆಟಗಾರರಿಗೆ ಉತ್ತಮ ವೇದಿಕೆಯಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಐಪಿಎಲ್​​ಗಿಂತಲೂ ಇತರ ಲೀಗ್​ಗಳಲ್ಲಿ ಆಡುವುದು ಹೆಚ್ಚು ಲಾಭದಾಯಕ: ಡೇಲ್ ಸ್ಟೇನ್‌

ಪಾಕ್ ಯೂಟ್ಯೂಬ್​ ಚಾನೆಲ್‌ನಲ್ಲಿ ಮಾತನಾಡಿದ್ದ ಸ್ಟೇನ್​, ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಹಣ ಸಿಗುವ ಬಗ್ಗೆ ಚರ್ಚೆಯಾಗುತ್ತದೆ. ಯಾವ ಆಟಗಾರನಿಗೆ ಎಷ್ಟು ಹಣ ಸಿಕ್ಕಿದೆ ಎಂಬುದು ಅಲ್ಲಿ ಮಹತ್ವ ಪಡೆದುಕೊಳ್ಳುತ್ತದೆ. ಜತೆಗೆ ಸೂಪರ್​ ಸ್ಟಾರ್​ ಆಟಗಾರರು ಕಾರಣ ಗುಣಮಟ್ಟದ ಕ್ರಿಕೆಟ್​ ಮರೆತು ಹೋಗುತ್ತದೆ. ಆದರೆ ಪಾಕಿಸ್ತಾನ ಸೂಪರ್ ಲೀಗ್​ ಮತ್ತು ಲಂಕಾ ಪ್ರೀಮಿಯರ್​ ಲೀಗ್​​ನಲ್ಲಿ ಕ್ರಿಕೆಟ್​ಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದಿದ್ದರು.

ಸ್ಟೇನ್​ ಈ ರೀತಿಯ ಹೇಳಿಕೆ ನೀಡುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಅವರ ವಿರುದ್ಧ ಆಕ್ರೋಶ ಕೂಡ ವ್ಯಕ್ತವಾಗುತ್ತಿದ್ದು, ಅನೇಕರು ಟೀಕಾ ಪ್ರಹಾರ ನಡೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.