ETV Bharat / sports

ಹಾರ್ದಿಕ್​ ಪಾಂಡ್ಯ ಸಾಮರ್ಥ್ಯವನ್ನ ಭಾರತ ತಂಡ ವ್ಯರ್ಥ ಮಾಡಿಕೊಳ್ಳುತ್ತಿದೆ: ಅಜಯ್ ಜಡೇಜಾ ಬೇಸರ

ಭಾರತ ತಂಡದ ಕೆಲವು ಆರಂಭಿಕ ಬ್ಯಾಟ್ಸ್​ಮನ್​ಗಳು ಬೇಗ ವಿಕೆಟ್​ ಕಳೆದುಕೊಂಡರೆ ಹಾರ್ದಿಕ್ ಪಾಂಡ್ಯ ತಮ್ಮ ನೈಸರ್ಗಿಕ ಆಕ್ರಮಣಕಾರಿ ಆಟ ಕ್ರಮಬದ್ಧವಾಗಿ ಆಡಲು ಸಾಧ್ಯವಿಲ್ಲ ಎಂದು ಅಜಯ್ ಜಡೇಜಾ ಅಭಿಪ್ರಾಯಪಟ್ಟಿದ್ದಾರೆ. ಕೊನೆಯ ಪಂದ್ಯದಲ್ಲಿ ಪಾಂಡ್ಯರ ಆಟ ನೋಡಿ ಅವರು ತಿಳಿಸಿದ್ದಾರೆ.

ಹಾರ್ದಿಕ್ ಪಾಂಡ್ಯ
ಹಾರ್ದಿಕ್ ಪಾಂಡ್ಯ
author img

By

Published : Dec 3, 2020, 6:12 PM IST

ಮುಂಬೈ: ಸ್ಫೋಟಕ ಬ್ಯಾಟ್ಸ್​ಮನ್​ ಹಾರ್ದಿಕ್ ಪಾಂಡ್ಯ ಅವರನ್ನು ಕೆಳ ಕ್ರಮಾಂಕದಲ್ಲೇ ಆಡಿಸುವುದಕ್ಕೆ ಸೀಮಿತವನ್ನಾಗಿಸುತ್ತಿರುವುದು ತುಂಬಾ ಬೇಸರದ ಸಂಗತಿ, ಆತನನ್ನು ಬ್ಯಾಟ್ಸ್​ಮನ್​ ಆಗಿ ಬಳಸಿಕೊಳ್ಳುವುದರಲ್ಲಿ ಟೀಮ್ ಇಂಡಿಯಾ ವಿಫಲವಾಗುತ್ತಿದೆ ಎಂದು ಭಾರತ ತಂಡದ ಮಾಜಿ ನಾಯಕ ಅಜಯ್ ಜಡೇಜಾ ಅಭಿಪ್ರಾಯ ಪಟ್ಟಿದ್ದಾರೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯ ಬಗ್ಗೆ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ವಿಶ್ಲೇಷಣೆ ಮಾಡುವ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ಅವರ ಬ್ಯಾಟಿಂಗ್ ಸ್ಥಾನದ ಕುರಿತು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಾರ್ದಿಕ್ ಪಾಂಡ್ಯ
ಹಾರ್ದಿಕ್ ಪಾಂಡ್ಯ

ಭಾರತ ತಂಡದ ಕೆಲವು ಆರಂಭಿಕ ಬ್ಯಾಟ್ಸ್​ಮನ್​ಗಳು ಬೇಗ ವಿಕೆಟ್​ ಕಳೆದುಕೊಂಡರೆ ಹಾರ್ದಿಕ್ ಪಾಂಡ್ಯ ತಮ್ಮ ನೈಸರ್ಗಿಕ ಆಕ್ರಮಣಕಾರಿ ಆಟವನ್ನು ಕ್ರಮಬದ್ಧವಾಗಿ ಆಡಲು ಸಾಧ್ಯವಿಲ್ಲ ಎಂದು ಅಜಯ್ ಜಡೇಜಾ ಅಭಿಪ್ರಾಯಪಟ್ಟಿದ್ದಾರೆ. ಕೊನೆಯ ಪಂದ್ಯದಲ್ಲಿ ಪಾಂಡ್ಯರ ಆಟ ನೋಡಿ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ನಟರಾಜನ್ ಆಯ್ಕೆ ಮಾಡಿದ್ದಕ್ಕೆ ಅಂದು ನನ್ನನ್ನು ಪ್ರಶ್ನಿಸಿದವರಿಗೆ ಇಂದು ಆತನೇ ಉತ್ತರಿಸಿದ್ದಾನೆ: ಸೆಹ್ವಾಗ್​

"ಭಾರತ ಮೊದಲ ನಾಲ್ಕು ವಿಕೆಟ್​ಗಳನ್ನು ಬೇಗ ಕಳೆದುಕೊಂಡರೆ, ಆಕ್ರಮಣಕಾರಿ ಆಟಕ್ಕೆ ಹೆಸರುವಾಸಿಯಾಗಿರುವ ಪಾಂಡ್ಯದ ಆಟದಲ್ಲಿ ತೀವ್ರ ಬದಲಾವಣೆಯಾಗಲಿದೆ. ಒಂದು ವೇಳೆ ಅವರನ್ನು ಕೇವಲ ಒಂದು ವಿಕೆಟ್​ ಕಳೆದುಕೊಂಡಾಗ ಕ್ರೀಸ್​ಗೆ ಬಂದರೆ ಅವರು ಹೇಗೆ ಆಡಬಹುದು?" ಎಂದು ಪಾಂಡ್ಯಗೆ ಮೇಲಿನ ಕ್ರಮಾಂಕ ನೀಡಬೇಕು ಎಂದು ಅವರು ಪರೋಕ್ಷವಾಗಿ ಅಭಿಪ್ರಾಯಪಟ್ಟಿದ್ದಾರೆ.

ಇದೇ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ 3 ಅಥವಾ 4ನೇ ಕ್ರಮಾಂಕದಲ್ಲಿ ಆಡಿದರೆ ಅವರು ಈಗ ಕೆಳಕ್ರಮಾಂಕದಲ್ಲಿ ಗಳಿಸುತ್ತಿರುವ ತ್ವರಿತ ರನ್​ಗಳು​ ಭಾರತ ತಂಡಕ್ಕೆ ಹೆಚ್ಚು ಮೌಲ್ಯ ತಂದುಕೊಡಲಿದೆ ಎಂದು ಮಾಜಿ ಆರಂಭಿಕ ಬ್ಯಾಟ್ಸ್​ಮನ್​ ಹೇಳಿದ್ದಾರೆ

" ಕೆಲವೊಂದು ಸಂರ್ಭದಲ್ಲಿ ಹಾರ್ದಿಕ್ ಪಾಂಡ್ಯ 6 ಅಥವಾ 7ನೇ ಕ್ರಮಾಂಕದಲ್ಲಿ ಆಡುತ್ತಿರುವುದರಿಂದ ಅವರ ಸಾಮರ್ಥ್ಯ ವ್ಯರ್ಥವಾಗುತ್ತಿದೆ ಎಂದು ನಾನು ಭಾವಿಸುತ್ತೇನೆ. ಒಂದು ವೇಳೆ ಅವರು 3 ಅಥವಾ 4ನೇ ಕ್ರಮಾಂಕದಲ್ಲಿ ಆವರು ಆಡಿದರೆ ಮೊದಲ ಎಸೆತದಲ್ಲಿ ಔಟಾಗಬಹುದು, ಆದರೆ, ಔಟಾಗದಿದ್ದರೆ ಭಾರತ ತಂಡಕ್ಕೆ ಖಂಡಿತ ಆತನಿಂದ ಉತ್ತಮ ಸೇವೆ ಸಿಗಲಿದೆ ಎಂದು ಅವರು" ಹೇಳಿದ್ದಾರೆ.

ಹಾರ್ದಿಕ್ ಪಾಂಡ್ಯ 6ನೇ ಕ್ರಮಾಂಕದಲ್ಲಿ ಆಸ್ಟ್ರೇಲಿಯಾ ವಿರುದ್ದ 3 ಪಂದ್ಯಗಳಿಂದ ಒಟ್ಟಾರೆ 210 ರನ್​ಗಳಿಸಿದ್ದರು. ಅವರು ಮೊದಲ ಪಂದ್ಯದಲ್ಲಿ 90 , 2ನೇ ಪಂದ್ಯದಲ್ಲಿ 28 ಹಾಗೂ ಮೂರನೇ ಪಂದ್ಯದಲ್ಲಿ ಔಟಾಗದೇ 92 ರನ್​ಗಳಿಸಿದ್ದರು. ಕೊನೆಯ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.