ಮುಂಬೈ: ಭಾರತದ ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಮತ್ತು ಅವರ ಪತ್ನಿ ಹಾಗೂ ಬಾಲಿವುಡ್ ನಟಿ ಸಾಗರಿಕಾ ಘಾಟ್ಗೆ ದಂಪತಿ ಅಭಿಮಾನಿಗಳಿಗೆ ಸಂತಸದ ಸುದ್ದಿ ನೀಡಿದ್ದ, ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿದ್ದಾರೆಂದು ತಿಳಿದುಬಂದಿದೆ.
ಪ್ರಸ್ತುತ ಯುಎಇನಲ್ಲಿರುವ ಜಹೀರ್ ಖಾನ್ ಹಾಗೂ ಸಾಗರಿಕಾ 2017 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಾಗರಿಕಾ ಶಾರುಕ್ ಖಾನ್ ನಟಿಸಿರುವ ಚಕ್ ದೇ ಇಂಡಿಯಾ ಸಿನಿಮಾದಲ್ಲಿ ಹಾಕಿ ಆಟಗಾರ್ತಿಯಾಗಿ ನಟಿಸಿದ್ದರು.
ಕಳೆದವಾರ 42 ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಜಹೀರ್ ಖಾನ್ ಒಂದು ವಾರದ ಒಳಗೆ ತಾವೂ ತಂದೆಯಾಗುತ್ತಿರುವ ಸುದ್ದಿಯನ್ನು ನೀಡಿದ್ದಾರೆ.
ಮುಂಬೈ ಮಿರರ್ ಈ ಸುದ್ದಿಯನ್ನು ಪ್ರಕಟಿಸಿದ್ದು ಜಹೀರ್ ದಂಪತಿಯ ಆಪ್ತರು ಸುದ್ದಿಯನ್ನ ಹಂಚಿಕೊಂಡಿದ್ದಾರೆಂದು ಎಂದು ತಿಳಿದು ಬಂದಿದೆ. ಆದರೆ ಈ ಜೋಡಿ ಇನ್ನು ಈ ವಿಚಾರವನ್ನು ಬಹಿರಂಗ ಪಡಿಸಿಲ್ಲ.
ಇತ್ತೀಚೆಗೆ ಭಾರತ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ತಂದೆಯಾಗಿದ್ದರು. ನಂತರ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ಅವರು 2021 ರಲ್ಲಿ ಪೋಷಕರಾಗುವುದಾಗಿ ಘೋಷಿಸಿಕೊಂಡಿದ್ದರು.