ಲಾಹೋರ್: ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ಗಿಂತ ಭಾರತ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಅತ್ಯುತ್ತಮ ನಾಯಕ ಎಂದು ಹೇಳಿದ್ದಾರೆ.
ಟ್ವಿಟರ್ನಲ್ಲಿ ಅಭಿಮಾನಿಗಳೊಂದಿಗೆ ನಡೆಸಿದ ಚಾಟ್ನಲ್ಲಿ ಅಭಿಮಾನಿಯೊಬ್ಬ ರಿಕಿ ಪಾಂಟಿಂಗ್ ಮತ್ತು ಧೋನಿ ಇಬ್ಬರಲ್ಲಿ ಯಾರು ಅತ್ಯುತ್ತಮ ಕ್ಯಾಪ್ಟನ್ ಎಂದು ಕೇಳಿದ್ದಕ್ಕೆ ಅಫ್ರಿದಿ, ಧೋನಿ ಎಂದು ಉತ್ತರಿಸಿದ್ದಾರೆ.
-
I rate Dhoni a bit higher than Ponting as he developed a new team full of youngsters
— Shahid Afridi (@SAfridiOfficial) July 29, 2020 " class="align-text-top noRightClick twitterSection" data="
">I rate Dhoni a bit higher than Ponting as he developed a new team full of youngsters
— Shahid Afridi (@SAfridiOfficial) July 29, 2020I rate Dhoni a bit higher than Ponting as he developed a new team full of youngsters
— Shahid Afridi (@SAfridiOfficial) July 29, 2020
ನಾನು ಪಾಂಟಿಂಗ್ಗಿಂತ ಧೋನಿಗೆ ಹೆಚ್ಚಿನ ಅಂಕ ನೀಡುತ್ತೇನೆ. ಏಕೆಂದರೆ ಧೋನಿ ಯುವ ಆಟಗಾರರ ಹೊಸ ತಂಡವನ್ನು ಕಟ್ಟಿದರು. ಅಲ್ಲದೆ ಯುವಕರಿಗೆ ಹೆಚ್ಚಿನ ಅವಕಾಶಗಳನ್ನು ನೀಡಿದರು ಎಂದು ಅಫ್ರಿದಿ ಅಭಿಪ್ರಾಯಪಟ್ಟಿದ್ದಾರೆ.
ರಿಕಿ ಪಾಂಟಿಂಗ್ ನಾಯಕನಾಗಿ ಆಸ್ಟ್ರೇಲಿಯಾ ತಂಡಕ್ಕೆ ಎರಡು ವಿಶ್ವಕಪ್ ಗೆದ್ದುಕೊಟ್ಟಿದ್ದಾರೆ. ಆದರೆ ಧೋನಿ ಐಸಿಸಿಯ ಎಲ್ಲಾ ಟ್ರೋಫಿಗಳನ್ನು ಗೆದ್ದಿದ್ದಾರೆ. ಆದರೆ ಟೆಸ್ಟ್ ಕ್ರಿಕೆಟ್ನಲ್ಲಿ ಪಾಂಟಿಂಗ್ 77 ಪಂದ್ಯ ಮುನ್ನಡೆಸಿದ್ದು, 48 ಗೆಲುವು 16 ಸೋಲು ಕಂಡಿದ್ದರೆ, ಧೋನಿ 60 ಪಂದ್ಯಗಳನ್ನು ಮುನ್ನಡೆಸಿ 27 ಗೆಲುವು ಹಾಗೂ 18 ಸೋಲು ಕಂಡಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ ಪಾಂಟಿಂಗ್ 230 ಪಂದ್ಯಗಳಲ್ಲಿ ನಾಯಕರಾಗಿದ್ದು, 175 ಗೆಲುವು ಹಾಗೂ 51 ಸೋಲು ಕಂಡಿದ್ದಾರೆ. ಧೋನಿ 200 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದು, 110 ಗೆಲುವು ಹಾಗೂ 74 ಸೋಲು ಕಂಡಿದ್ದಾರೆ.