ಕಾರ್ಡಿಫ್: ವಿಶ್ವಕಪ್ನ 7ನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಟಾಸ್ ಗೆದ್ದ ಅಫ್ಘಾನಿಸ್ತಾನ ನಾಯಕ ಗುಲ್ಬುದ್ದೀನ್ ನೈಬ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಎರಡನೇ ವಿಶ್ವಕಪ್ನಲ್ಲಿ ಆಡುತ್ತಿರುವ ಅಫ್ಘಾನಿಸ್ತಾನ ತಂಡ 1996ರ ವಿಶ್ವ ಚಾಂಪಿಯನ್ ವಿರುದ್ಧ ಕಣಕ್ಕಿಳಿಯುತ್ತಿದೆ. ವಿಶ್ವಕಪ್ಗೆ ಅರ್ಹತಾ ಪಂದ್ಯಗಳಲ್ಲಿ ಭಾಗವಹಿಸಿ ವಿಂಡೀಸ್ನಂತಹ ದೊಡ್ಡ ತಂಡವನ್ನು ಮಣಿಸಿ ಟೂರ್ನಿಯಲ್ಲಿ 9ನೇ ತಂಡವಾಗಿ ಭಾಗವಹಿಸಿರುವ ಅಫ್ಘನ್ ಆಟಗಾರರು, ಮೊದಲ ಪಂದ್ಯದಲ್ಲಿ 5 ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿದರೂ ಕೆಚ್ಚೆದೆಯ ಹೋರಾಟ ನಡೆಸಿದ್ದರು. ಇಂದು ಟಾಸ್ ಗೆದ್ದ ತಕ್ಷಣ ನೈಬ್ ಫೀಲ್ಡಿಂಗ್ ಮಾಡಲು ನಿರ್ಧರಿಸಿದರು.
-
Play is set to get underway!
— Cricket World Cup (@cricketworldcup) June 4, 2019 " class="align-text-top noRightClick twitterSection" data="
Here are the line-ups 👇 #AfghanAtalan #LionsRoar pic.twitter.com/tEIPtJEWsR
">Play is set to get underway!
— Cricket World Cup (@cricketworldcup) June 4, 2019
Here are the line-ups 👇 #AfghanAtalan #LionsRoar pic.twitter.com/tEIPtJEWsRPlay is set to get underway!
— Cricket World Cup (@cricketworldcup) June 4, 2019
Here are the line-ups 👇 #AfghanAtalan #LionsRoar pic.twitter.com/tEIPtJEWsR
ಶ್ರೀಲಂಕಾ ಕೇವಲ ಅರೆಕಾಲಿಕ ಸ್ಪಿನ್ನರ್ ಜೊತೆಗೆ ಐವರು ವೇಗಿಗಳೊಡನೆ ಕಣಕ್ಕಿಳಿದಿರುವುದು ಆಶ್ಚರ್ಯ ತಂದಿದೆ. ಸ್ಪಿನ್ ಮತ್ತು ವೇಗದ ಬೌಲಿಂಗ್ ಹೋರಾಟದಲ್ಲಿ ವಿಜಯಲಕ್ಷ್ಮಿ ಯಾರಾ ಪಾಲಾಗಲಿದ್ದಾಳೆ ಅನ್ನೋದನ್ನು ಕಾದು ನೋಡಬೇಕಿದೆ.
ಅಫ್ಘಾನಿಸ್ತಾನ:
ಗುಲ್ಬದಿನ್ ನೈಬ್(ನಾಯಕ),ಮೊಹಮ್ಮದ್ ಶಹ್ಜಾದ್(ವಿ.ಕೀ), ರಶೀದ್ ಖಾನ್, ಹಜರತುಲ್ಹಾ ಝಾಝೈ, ರೆಹ್ಮತ್ ಶಾ, ಹಶ್ಮತುಲ್ಹಾ ಶಾಹಿದಿ, ನಜೀಬುಲ್ಹಾ ಜಾಡ್ರನ್, ಮೊಹಮ್ಮದ್ ನಬಿ, ದವ್ಲಾತ್ ಝಾರ್ಡನ್, ಹಮೀದ್ ಹಸ್ಸನ್, ಮೂಜೀಬ್ ಉರ್ ರೆಹ್ಮಾನ್.
ಶ್ರೀಲಂಕಾ:
ದಿಮುತ ಕರುಣಾರತ್ನೆ (ನಾಯಕ), ಧನಂಜಯ್ ಡಿ ಸಿಲ್ವಾ, ಸುರಂಗ ಲಕ್ಮಲ್, ಲಸಿತ್ ಮಲಿಂಗಾ, ಏಂಜೆಲೊ ಮ್ಯಾಥ್ಯೂಸ್, ಕುಶಾಲ್ ಮೆಂಡಿಸ್, ನುವಾನ್ ಪ್ರದೀಪ್, ಕುಶಾಲ್ ಪರೇರ, ತಿಸ್ಸಾರಾ ಪೆರೆರ, ಲಹಿರು ತಿರುಮನ್ನೆ, ಇಸುರು ಉದಾನ