ETV Bharat / sports

ಅಡಿಲೇಡ್​ನಲ್ಲಿ ಕೋವಿಡ್ ಹೆಚ್ಚಳ: ಮೊದಲ ಟೆಸ್ಟ್​ಗೂ ಮುನ್ನ ಸೆಲ್ಫ್​ ಐಸೋಲೇಷನ್​ಗೆ ಒಳಗಾಗ ಟಿಮ್​ ಪೇನ್​

author img

By

Published : Nov 16, 2020, 3:29 PM IST

ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿದ್ದಂತೆ ವೆಸ್ಟರ್ಸ್​ ಆಸ್ಟ್ರೇಲಿಯಾ, ಟಸ್ಮೆನಿಯಾ ಮತ್ತು ಉತ್ತರ ಭಾಗಗಳು ಸೌತ್​ ಆಸ್ಟ್ರೇಲಿಯಾದೊಂದಗಿನ ಗಡಿಯನ್ನು ಮುಚ್ಚಿವೆ. ಅಲ್ಲದೆ ಅಡಿಲೇಡ್‌ನಿಂದ ಬರುವ ಎಲ್ಲಾ ಆಟಗಾರರೂ ಸೋಮವಾರದಿಂದ ಹೋಟೆಲ್‌ನಲ್ಲಿ 14 ದಿನಗಳ ಕ್ವಾರಂಟೈನ್‌ ಮುಗಿಸಬೇಕೆಂದು ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.

ಟಿಮ್​ ಪೇನ್​
ಟಿಮ್​ ಪೇನ್​

ಸಿಡ್ನಿ: ಅಡಿಲೇಡ್​ನಲ್ಲಿ ಕೊರೊನಾ ವೈರಸ್​ ಹೆಚ್ಚಾಗುತ್ತಿದ್ದು, ನಾಯಕ ಟಿಮ್ ಪೇನ್​ ಸೇರಿದಂತೆ ಆಸ್ಟ್ರೇಲಿಯಾ ತಂಡದ ಆಟಗಾರರು ಸೆಲ್ಫ್​ ಐಸೋಲೇಷನ್​ಗೆ ಒಳಗಾಗಿದ್ದಾರೆ. ಆದರೆ ಭಾರತ ತಂಡದ ವಿರುದ್ಧದ ಮೊದಲ ಟೆಸ್ಟ್​ ವೇಳಾಪಟ್ಟಿಯಂತೆ ನಡೆಯಲಿದೆ ಎಂದು ಕ್ರಿಕೆಟ್​ ಆಸ್ಟ್ರೇಲಿಯಾ ಖಚಿತಪಡಿಸಿದೆ.

ಕ್ರಿಕೆಟ್​ ಮೇಲೆ ಇದರಿಂದ ಉಂಟಾಗುವ ಪರಿಣಾಮವನ್ನು ಸಿಎ ಮೇಲ್ವಿಚಾರಣೆ ಮಾಡುತ್ತಿದೆ. ಅಧಿಕಾರಿಗಳು ಅಡಿಲೇಡ್‌ ಪಂದ್ಯದ ಬಗ್ಗೆ ಪ್ರಮುಖ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಸ್ಥಳೀಯ ಸರ್ಕಾರದ ಸಂಪರ್ಕದಲ್ಲಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಈಗಾಗಲೇ ಸೌತ್​ ಆಸ್ಟ್ರೇಲಿಯಾದಿಂದ ಬಂದಿರುವಂತಹ ಆರೋಗ್ಯ ಅಧಿಕಾರಿಗಳು ನವೆಂಬರ್​ 9ರಿಂದಲೂ ಕ್ವಾರಂಟೈನ್​ನಲ್ಲಿದ್ದಾರೆ. ಹಾಗಾಗಿ ಸೌತ್​ ಆಸ್ಟ್ರೇಲಿಯಾ ವಿರುದ್ಧ ಶಫೀಲ್ಡ್​ ಶೀಲ್ಡ್​ ಟೂರ್ನಿಯಲ್ಲಿ ಆಡಿದ್ದ ಟಸ್ಮೇನಿಯಾ ತಂಡದ ಆಟಗಾರರಾದ ಟಿಮ್ ಪೇನ್, ಮ್ಯಾಥ್ಯೂ ವೇಡ್​ ಹಾಗೂ ತಂಡದ ಇನ್ನಿತರ ಆಟಗಾರರು 14 ದಿನಗಳ ಐಸೋಲೇಷನ್​ಗೆ ಒಳಗಾಗಿದ್ದಾರೆ.

ನೆವೆಂಬರ್​ 27ರಿಂದ ಭಾರತ-ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿ ಆರಂಭಗೊಳ್ಳಲಿದೆ. ಟೆಸ್ಟ್ ಸರಣಿ ನವೆಂಬರ್ 17ರಿಂದ ಆರಂಭವಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.